ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುದುಚೆರಿಯಲ್ಲಿ ವೈದ್ಯರ ಮೇಲೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ

|
Google Oneindia Kannada News

ಪುದುಚೆರಿ, ಅಕ್ಟೋಬರ್ 02: ವೈದ್ಯರ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ಪುದುಚೆರಿಯಲ್ಲಿ ನಡೆದಿದೆ.

ಪೊಲೀಸ್ ಅಧಿಕಾರಿಯ 80 ವರ್ಷದ ತಂದೆ ಕೊರೊನಾದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿದೆ.

ಭಾರತದಲ್ಲಿ 63,94,069 ಕೊವಿಡ್-19 ಸೋಂಕಿತ ಪ್ರಕರಣಭಾರತದಲ್ಲಿ 63,94,069 ಕೊವಿಡ್-19 ಸೋಂಕಿತ ಪ್ರಕರಣ

ಅವರ ತಂದೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅವರು ಸಾವನ್ನಪ್ಪಿದ ಕಾರಣ ಆ ಕೋಪವನ್ನು ಪೊಲೀಸ್ ಮತ್ತು ಕುಟುಂಬದವರು ನರ್ಸ್ ಹಾಗೂ ವೈದ್ಯರ ಮೇಲೆ ತೀರಿಸಿಕೊಂಡಿದ್ದಾರೆ.

Puducherry Cop Allegedly Attacks Doctors

ಇನ್‌ಸ್ಪೆಕ್ಟರ್‌ನ್ನು ಶಣ್ಮುಗ ಸುಂದರಂ ಎಂದು ಪರಿಗಣಿಸಲಾಗಿದೆ. ವೈದ್ಯರು ಆತನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.ಅವರ ತಂದೆಗೆ ಮಧುಮೇಹವಿತ್ತು, ಬಳಿಕ ಕೊರೊನಾ ಸೋಂಕು ತಗುಲಿದ್ದರಿಂದ ತೀವ್ರವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು.

ನಾವು ನಮ್ಮ ಕೈಲಾದ ಚಿಕಿತ್ಸೆಯನ್ನು ನೀಡಿದ್ದೇವೆ. ಆದರೆ ನಮ್ಮ ಮೇಲೆ ಅವರು ಹಲ್ಲೆ ನಡೆಸಿದ್ದಾರ, ಅವರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಎಂದು ಒತ್ತಾಯಿಸಿ ವೈದ್ಯರು ಪ್ರತಿಭಟನೆ ನಡೆಸಿದರು.

ಈ ಕುರಿತು ಪುದುಚೆರಿ ಕಲೆಕ್ಟರ್ ಡಾ. ಟಿಎಸ್ ಅರುಣ್ ಮಾತನಾಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವೈದ್ಯರು, ನರ್ಸ್‌ಗಳು ಹಗಲು, ರಾತ್ರಿ ಎನ್ನದೆ ಜನರಿಗಾಗಿ ದುಡಿಯುತ್ತಿದ್ದಾರೆ ಎಂದರು.
ಪುದುಚೆರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28 ಸಾವಿರ ದಾಟಿದೆ. 4994 ಸಕ್ರಿಯ ಪ್ರಕರಣಗಳಿವೆ.

Recommended Video

ಒಂದು ದಿನಾನೂ ಕಡ್ಡಿ ಕರ್ಪೂರ ಹಚ್ಲಿಲ್ಲಾ!! | Oneindia Kannada

English summary
Four health care workers, including a woman doctor and a nurse, at a government-run hospital in Puducherry were allegedly attacked by a police inspector and his family on Thursday evening after the policeman's 80-year-old father died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X