ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಕೊರೊನಾ ಹಾಟ್‌ಸ್ಪಾಟ್‌ ಮಾರುಕಟ್ಟೆ ತೆರೆಯಲು ಪ್ರತಿಭಟನೆ

|
Google Oneindia Kannada News

ಚೆನ್ನೈ, ಮೇ 18: ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ಗಡಿದಾಟಿದೆ. ಮಹಾರಾಷ್ಟ್ರ, ಗುಜರಾತ್ ಬಳಿಕ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯ ತಮಿಳುನಾಡು. ಚೆನ್ನೈನಲ್ಲಿ ಮಾತ್ರ ಸುಮಾರು 6000 ಕೇಸ್ ದಾಖಲಾಗಿದೆ.

Recommended Video

HD Deve Gowda From a villager to PM of India : ಹಳ್ಳಿಯಿಂದ ದಿಲ್ಲಿವರೆಗೆ ಸಾಗಿ ಬಂದ ದೇವೇಗೌಡರ ರಾಜಕೀಯ

ದೇಶದ ಪ್ರಮುಖ ಹಾಟ್‌ಸ್ಪಾಟ್‌ ಆಗಿರುವ ಚೆನ್ನೈನಲ್ಲಿ ಹೂವು ಮಾರುಕಟ್ಟೆ ತೆರೆಯುವಂತೆ ಪ್ರತಿಭಟನೆ ನಡೆದಿದೆ. ಚೆನ್ನೈನ ಕೋಯಂಬೆಡು ಮಾರುಕಟ್ಟೆಯಲ್ಲಿ ಹೂವು ಮಾರಾಟ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಹೂವು ಮಾರಾಟಗಾರರು ಇಂದು ಪ್ರತಿಭಟನೆ ಮಾಡಿದ್ದಾರೆ.

ತಮಿಳುನಾಡಿಗೆ ಹೋಗುವ ಮುನ್ನ ತಿಳಿಯಬೇಕಾದ ಮಾರ್ಗಸೂಚಿಗಳುತಮಿಳುನಾಡಿಗೆ ಹೋಗುವ ಮುನ್ನ ತಿಳಿಯಬೇಕಾದ ಮಾರ್ಗಸೂಚಿಗಳು

ಕೋಯಂಬೆಡು ಮಾರುಕಟ್ಟೆ ಚೆನ್ನೈನ ಕೊರೊನಾ ಹಾಟ್‌ಸ್ಪಾಟ್‌ ಪ್ರದೇಶ. ಚೆನ್ನೈನ ಪೂರ್ತಿ ಕೇಸ್‌ಗಳ ಪೈಕಿ ಇಲ್ಲಿಂದಲೇ 1500ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಈ ಮಾರುಕಟ್ಟೆಯಿಂದಲೇ ಹೆಚ್ಚು ಸೋಂಕು ಹರಡಿದೆ ಎಂಬ ಕಾರಣಕ್ಕೆ ಮಾರುಕಟ್ಟೆ ಬಂದ್ ಮಾಡಲಾಗಿದೆ.

Protest Held In Chennai To Allow Koyambedu Wholesale Flowers Market

ಆದರೆ, ನಾಲ್ಕನೇ ಹಂತದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಮತ್ತಷ್ಟು ವಿನಾಯಿತಿ ಘೋಷಿಸಿದೆ. ಈ ಹಿನ್ನೆಲೆ ಕೋಯಂಬೆಡು ಮಾರುಕಟ್ಟೆಯಲ್ಲಿ ಹೂವು ಮಾರಾಟ ಮಾಡಲು ಅನುಮತಿ ಕೇಳುತ್ತಿದ್ದಾರೆ. ಈ ಮಾರುಕಟ್ಟೆಯನ್ನು ನಂಬಿ ಸುಮಾರು 2000 ಕುಟುಂಬಗಳು ಜೀವನ ಮಾಡುತ್ತಿದೆ. ''ತಿನ್ನಲು ಊಟವಿಲ್ಲದೆ, ಕೆಲಸವೂ ಇಲ್ಲದಂತಾಗಿದೆ'' ಎಂದು ಪ್ರತಿಭಟನೆ ಮಾಡಿದ್ದಾರೆ.

ಈ ಬಗ್ಗೆ ಚೆನ್ನೈ ಜಿಲ್ಲಾಡಳಿತ ಆಗಲಿ ಅಥವಾ ತಮಿಳುನಾಡು ಸರ್ಕಾರ ಆಗಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.

English summary
Koyambedu Wholesale Flowers Market Merchants' Association today protest in Chennai demanding the state government to allow the sale of flowers amid lockdown due to COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X