ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳಿನ 'ಸರ್ಕಾರ್‌' ಚಿತ್ರದ ವಿರುದ್ಧ 'ಅಮ್ಮಾ' ಅಭಿಮಾನಿಗಳ ಪ್ರತಿಭಟನೆ

|
Google Oneindia Kannada News

ಚೆನ್ನೈ, ನವೆಂಬರ್ 09: ತಮಿಳು ನಟ ವಿಜಯ್ ಅಭಿನಯದ 'ಸರ್ಕಾರ್' ಬಿಡುಗಡೆ ಆದಾಗಿನಿಂದಲೂ ಭಾರಿ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಇದೀಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಭಿಮಾನಿಗಳು ಸರ್ಕಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ನವೆಂಬರ್ 7 ರಂದು ಬಿಡುಗಡೆ ಆದ ಈ ಚಿತ್ರವನ್ನು ಮುರುಗದಾಸ್ ನಿರ್ದೇಶಿದ್ದಾರೆ. ರಾಜಕೀಯ ಕತಾ ವಸ್ತು ಹೊಂದಿರುವ ಈ ಚಿತ್ರದಲ್ಲಿ ಜಯಲಲಿತಾ ಅವರಿಗೆ ಅವಮಾನ ಆಗುವಂತಹ ದೃಶ್ಯಗಳಿವೆ ಎಂದು ಅಮ್ಮಾ ಅಭಿಮಾನಿಗಳು ಆರೋಪಿಸಿ ತಮಿಳುನಾಡಿನ ಹಲವೆಡೆ ಪ್ರತಿಭಟನೆ ಮಾಡಿದ್ದಾರೆ.

'100 ಕೋಟಿ ವಸೂಲಿ ಮಾಡಿರುವ 'ಸರ್ಕಾರ್' ಸಿನಿಮಾ ಭಯೋತ್ಪಾದನೆ ಕೃತ್ಯಕ್ಕೆ ಸಮ''100 ಕೋಟಿ ವಸೂಲಿ ಮಾಡಿರುವ 'ಸರ್ಕಾರ್' ಸಿನಿಮಾ ಭಯೋತ್ಪಾದನೆ ಕೃತ್ಯಕ್ಕೆ ಸಮ'

Protest against Sarkar movie in Tamilnadu

ಚಿತ್ರದಲ್ಲಿ ಸರ್ಕಾರವು ಜನಗಳಿಗೆ ಉಚಿತವಾಗಿ ನೀಡುವ ವಸ್ತುಗಳನ್ನು ಬೆಂಕಿಗೆ ಹಾಕುವ ದೃಶ್ಯಯವಿದೆ. ಅದರಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಜನರಿಗೆ ಉಚಿತವಾಗಿ ನೀಡಿದ್ದ ವಸ್ತುಗಳೂ ಇವೆ. ಹಾಗಾಗಿ ಈ ದೃಶ್ಯದ ಮೂಲಕ ಜಯಲಲಿತಾ ಅವರಿಗೆ ಅವಮಾನ ಮಾಡಲಾಗಿದೆ ಎಂದು ಎಐಡಿಎಂಕೆ ಹಾಗೂ ಅಮ್ಮಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Protest against Sarkar movie in Tamilnadu

ಚಿತ್ರದಲ್ಲಿ ಜಯಲಲಿತಾ ಕುರಿತು ಸಂಭಾಷಣೆ ಸಹ ಇದು ಇದು ಸಹ ಅಮ್ಮಾ ಅವರಿಗೆ ಗೌರವಪೂರ್ವಕ ಪೂರ್ವಕವಾದ ಸಂಭಾಷಣೆ ಅಲ್ಲ ಎಂದು ಎಐಡಿಎಂಕೆ ಹೇಳಿದೆ.

ಹೀಗೆಲ್ಲಾ ಆದರೆ ಕನ್ನಡ ಸಿನಿಮಾಗಳಿಗೆ ಉಳಿಗಾಲ ಇಲ್ಲ ಹೀಗೆಲ್ಲಾ ಆದರೆ ಕನ್ನಡ ಸಿನಿಮಾಗಳಿಗೆ ಉಳಿಗಾಲ ಇಲ್ಲ

ಪ್ರತಿಭಟನೆ ನಂತರ ಎಚ್ಚೆತ್ತುಕೊಂಡಿರುವ ಸಿನಿಮಾ ತಂಡವು ಚಿತ್ರದಲ್ಲಿ ಜಯಲಲಿತಾ ಬಗೆಗೆ ಇರುವ ಸಂಭಾಷಣೆಯನ್ನು ಕತ್ತರಿಸುವುದಾಗಿ ಹೇಳಿದೆ.

'ಸರ್ಕಾರ್' ಚಿತ್ರದಲ್ಲಿ ಜಯಲಲಿತಾ ವಿಲನ್, ಎಐಎಡಿಎಂಕೆ ಕಿಡಿ 'ಸರ್ಕಾರ್' ಚಿತ್ರದಲ್ಲಿ ಜಯಲಲಿತಾ ವಿಲನ್, ಎಐಎಡಿಎಂಕೆ ಕಿಡಿ

ವಿಜಯ್‌ ಅವರ ಈ ಹಿಂದಿನ ಚಿತ್ರ ಮರ್ಸೆಲ್ ಸಹ ಭಾರಿ ವಿವವಾದಕ್ಕೆ ಕಾರಣವಾಗಿತ್ತು. ಚಿತ್ರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಜಿಎಸ್‌ಟಿ ಬಗ್ಗೆ ಪ್ರಶ್ನೆಗಳನ್ನು ಕೇಳುವ ದೃಶ್ಯಗಳಿದ್ದವು ಎಂದು ತಮಿಳುನಾಡು ಬಿಜೆಪಿ ಸಿನಿಮಾ ವಿರುದ್ಧ ಪ್ರತಿಭಟನೆ ಮಾಡಿತ್ತು. ಆ ಚಿತ್ರವನ್ನು ಅಟ್ಟಿಲಿ ನಿರ್ದೇಶಿಸಿದ್ದರು.

English summary
protest against Vijay's 'Sarkar' movie in Tamilnadu by Jayalalita fans and her party AIDMK. Film includes some scenes about Jayalalitha and her programs so Ama fans protesting against the film.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X