ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ್ ರಾಜ್ 'ಪಪ್ಪಿ ಶೇಮ್' ಟ್ವೀಟ್ ಗೆ ಟ್ವಿಟ್ಟಿಗರು ಲೆಫ್ಟ್-ರೈಟ್

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

Recommended Video

ಗೌರಿ ಲಂಕೇಶ್ ಬಗ್ಗೆ ಪ್ರಮೋದ್ ಮುತಾಲಿಕ್ ಕೊಟ್ಟ ಹೇಳಿಕೆಗೆ ಪ್ರಕಾಶ್ ರಾಜ್ ( ರೈ ) ಗರಂ | Oneindia kannada

ಚೆನ್ನೈ, ಜೂನ್ 18 : ಶೇಮ್..ಶೇಮ್.. ಈತ ಪರಮೋಚ್ಚ ನಾಯಕ. ಈತನ ಪಕ್ಷದ ಅಧ್ಯಕ್ಷ ಮತ್ತು ಅದರ ಜನ ಪ್ರತಿನಿಧಿಗಳು "ನಾಯಿ ಬೈಗುಳ"ದ ಬಳಕೆದಾರರ ಗುಂಪಿಗೆ ಮತ್ತೊಬ್ಬರ ಸೇರ್ಪಡೆ. ಇವರ ವಿರುದ್ಧ ಯಾರಾದರೂ ಪ್ರಶ್ನೆ ಮಾಡಿದರೆ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದರೆ ಎಂಥ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ... #justasking.....

ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೀಡಿದ ಗೌರಿ ಲಂಕೇಶ್ ಹತ್ಯೆ ಬಗೆಗಿನ ಹೇಳಿಕೆಗೆ ನಟ- ನಿರ್ಮಾಪಕ ಪ್ರಕಾಶ್ ರಾಜ್ ಭಾರೀ ಅಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಒಂದು ನಾಯಿ ಸತ್ತರೂ ಅದಕ್ಕೆ ಪ್ರಧಾನಿಗಳು ಉತ್ತರಿಸಬೇಕು ಅನ್ನೋದು ಎಷ್ಟು ಸರಿ ಎಂದು ಮುತಾಲಿಕ್ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆ ಮಾಡಿದ್ದರು.

5 ಸರಕಾರಿ ಶಾಲೆಗಳನ್ನು ದತ್ತು ಪಡೆದ ಪ್ರಕಾಶ್ ರೈ 5 ಸರಕಾರಿ ಶಾಲೆಗಳನ್ನು ದತ್ತು ಪಡೆದ ಪ್ರಕಾಶ್ ರೈ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಾಗೂ ಆ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದರು ಎಂಬುದು ಪ್ರಕಾಶ್ ರಾಜ್ ಅವರ ಆಕ್ಷೇಪವಾಗಿತ್ತು. ಇದಕ್ಕೆ ಜೂನ್ ಹದಿನೇಳರ ಭಾನುವಾರದಂದು ಕಾರ್ಯಕ್ರಮವೊಂದರಲ್ಲಿ ಪ್ರಮೋದ್ ಮುತಾಲಿಕ್ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಗ್ರಾಸವಾಗಿತ್ತು.

ಪ್ರಕಾಶ್ ರಾಜ್ ಅವರ ಟ್ವೀಟ್ ಗೆ ನೀಡಿದ ಆಯ್ದ ಉತ್ತರಗಳು ಇಲ್ಲಿವೆ.

ಚಾಣಕ್ಯ

ಗೌರಿ ಲಂಕೇಶ್ ಅವರು ಈ ಹಿಂದೆ ಹಿದುತ್ವದ ವಿರುದ್ಧ ಕಾರಿಕೊಂಡಿರುವ ದ್ವೇಷ ಭಾಷಣವನ್ನು ಕೇಳಿ. ಈಗ ಹೇಳಿ ನಾಗರಿಕರೇ, ಆಕೆ ಮಾಡಿದ್ದ ಭಾಷಣಕ್ಕೆ ನೀವೇಕೆ ತಕರಾರು ಮಾಡಲಿಲ್ಲ? ಆಕೆ ಏಕೆ ಸಮಾಜ ಒಳಗೆ ಸೌಹಾರ್ದತೆಯನ್ನು ಕದಡಿದರು? ಶ್ರೀರಾಮ ಸೇನೆ, ಪ್ರಮೋದ್ ಮುತಾಲಿಕ್ ಮರೆತು ಬಿಡಿ. ಇದೇ ಮಾನದಂಡ ನಿಮಗೆ ಹಾಗೂ ನಿಮ್ಮ ಸ್ನೇಹಿತರಿಗೆ ಏಕೆ ಅನ್ವಯಿಸಲ್ಲ? ಚರ್ಚೆ ಸಾಧ್ಯವಾಗಬೇಕು ಹಾಗೂ ಅದಕ್ಕೆ ಪರಿಹಾರ ಸಿಗಬೇಕು ಅಂದರೆ ಮುಕ್ತ ಮನಸ್ಸಿನಿಂದ ಬನ್ನಿ.

ಡಾ.ಸಂಕಲ್ಪ್

ಇಂಥ ಕೋಮುವಾದಿಗಳನ್ನು ಇನ್ನೂ ಏಕೆ ಜೈಲಿಗೆ ಹಾಕಿಲ್ಲ? ನಾವೇನು ಬನಾನ ರಿಪಬ್ಲಿಕ್ ನಲ್ಲಿ ಇದೀವಾ?

ವೀಣಾ

ಕೇಳಿ ಇದನ್ನು, ಗೌರಿ ಲಂಕೇಶ್ ಹತ್ಯೆಗೆ ಬರೀ 13 ಸಾವಿರ ರುಪಾಯಿನಾ?

ವಾಸ್ವಾನಿ ಮನೋಜ್ ಎಂ.

ನೀವು ಯಾರಿಗೆ ಶೇಮ್ ಅನ್ನುತ್ತಿದ್ದೀರಿ, ಆ ಪದ ಅವರಿಗೆ ಸಣ್ಣ ಪದ. ಅವರು ಬೆಳೆದ ಪರಿಸರ ಮತ್ತು ಸಂಸ್ಕೃತಿ ಹೇಗೆಂದರೆ ಈ ಜನರಿಗೆ ತಮ್ಮ ಬಗ್ಗೆಯೇ ಹತಾಶೆ ಇರುತ್ತದೆ.

ಅಜಯ್ ಕುಮಾರ್

ಸರ್, ನಿಮಗೂ ಪ್ರಮೋದ್ ಮುತಾಲಿಕ್ ಗೂ ಏನೂ ವ್ಯತ್ಯಾಸ ಇಲ್ಲ.

ಸಂತೋಷ್ ಹೊಸೂರು

ಇದು ನಾಚಿಕೆಗೇಡು. ಆ ಸ್ಥಳದಲ್ಲಿ ನಾನಿದ್ದೆ. ಅವರು ಸ್ಪಷ್ಟವಾಗಿ ಹೇಳಿದರು: ನಾನು ಗೌರಿ ಬಗ್ಗೆ ಹೇಳಿದ್ದಲ್ಲ ಅಂತ. ದಯವಿಟ್ಟು ವಿಡಿಯೋ ನೋಡಿ, ಮಾತನಾಡಿ.

ನಾಗರಾಜ ಹೆಗಡೆ

ನಿಮಗೇನಾದರೂ ಜ್ಞಾನ ಇದೆಯಾ? ಇದರಲ್ಲಿ ಸುಪ್ರೀಂ ಮತ್ತು ಅವರ ಪಕ್ಷ ಯಾಕೆ ಬರುತ್ತದೆ? ರಾಜ್ಯದ ಮುಖ್ಯಮಂತ್ರಿಯನ್ನು ಕೇಳಿ, ತಪ್ಪು ಮಾಡಿದವರನ್ನು ಶಿಕ್ಷಿಸಲಿ. ಇದು ಮುತಾಲಿಕ್ ರ ಅಭಿವ್ಯಕ್ತಿ ಸ್ವಾತಂತ್ರ್ಯ.

ಮುಜಾಮಿಲ್

ನಾವು ಅವರಿಂದ ಯಾವ ಒಳ್ಳೆ ಪದ ನಿರೀಕ್ಷೆ ಮಾಡಬಹುದು. ಅದು ಅವರ ನಿಜವಾದ ಮುಖ ತೋರಿಸುತ್ತದೆ.

ಪಿಆರ್ ಸಿ ನಾಯರ್

ಪ್ರಕಾಶ್ ರಾಜ್, ಇವತ್ತು ನಿಮ್ಮ ನಾಯಕ ಅತುಲ್ ಅಂಜನ್ ಎಲ್ಲ ರಾಜ್ಯಪಾಲರನ್ನು 'ನಾಯಿಗಳು' ಅಂತ ಕರೆದಿದ್ದಾರೆ. ಇದಕ್ಕೆ ಈಗ ಏನು ಹೇಳ್ತೀರಾ? ಎಸ್ ಡಿಪಿಐ ಹಾಗೂ ಪಿಎಫ್ ಐ ನಿಂದ ಹಿಂದೂಗಳನ್ನು ಕೊಲ್ಲುವಾಗ ನೀವೆಲ್ಲಿದ್ದಿರಿ? ನಿಮ್ಮ ತುಕ್ಡೆ ತುಕ್ದೆ ಗ್ಯಾಂಗ್ ನಿಂದ ಧ್ವನಿಯೇ ಇರಲಿಲ್ಲ. ಅವಾರ್ಡ್ ವಾಪಸಿಯೂ ಇರಲಿಲ್ಲ. ನೀವು ಹಿಂದೂ ವಿರೋಧಿ. ಅದರರ್ಥ ರಾಷ್ಟ್ರ ವಿರೋಧಿ- ನಾಚಿಕೆಗೇಡು.

English summary
Actor Prakash Raj tweet on Pramod Muthalik 'dog' remark and many people reacted to that. He got mixed opinion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X