ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕೊರೊನಾ ಸೋಂಕಿತರೊಂದಿಗೆ ಇರುವ ಶಿಕ್ಷೆ

|
Google Oneindia Kannada News

ಚೆನ್ನೈ, ಏಪ್ರಿಲ್ 24: ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರ ಜತೆಜತೆಗೇ ಲಾಕ್‌ಡೌನ್ ಉಲ್ಲಂಘಿಸುವವರೂ ಹೆಚ್ಚಾಗಿದ್ದಾರೆ.

ಇವರಿಗೆಲ್ಲಾ ಬುದ್ಧಿ ಕಲಿಸಲು ಪೊಲೀಸರು ಮುಂದಾಗಿದ್ದು, ಲಾಕ್‌ಡೌನ್ ಉಲ್ಲಂಘನೆ ಮಾಡಿದವರನ್ನು ಆಂಬ್ಯುಲೆನ್ಸ್‌ನಲ್ಲಿ ಕೊರೊನಾ ಸೋಂಕಿತರ ಜೊತೆಗೆ ಬಿಡಲಾಗುತ್ತದೆ. ಅದೇ ಅವರಿಗೆ ಶಿಕ್ಷೆ ಎಂದು ಪೊಲೀಸರು ಹೇಳಿದ್ದಾರೆ.

ಹಾಗೆಂದ ಮಾತ್ರಕ್ಕೆ ಅವರು ನಿಜವಾದ ಕೊರೊನಾ ಸೋಂಕಿತರಲ್ಲ, ಜನರು ಹೀಗಾದರೂ ಬುದ್ಧಿ ಕಲಿಯಲಿ ಎಂದು ಪೊಲೀಸರು ಈ ಕ್ರಮ ಕೈಗೊಂಡಿದ್ದು, ನಕಲಿ ಸೋಂಕಿತರಿರುವ ಆಂಬ್ಯುಲೆನ್ಸ್‌ನಲ್ಲಿ ಲಾಕ್‌ಡೌನ್ ಉಲ್ಲಂಘಿಸಿದವರನ್ನು ಬಿಡಲಾಗುತ್ತದೆ. ತ್ರಿಪುರ ಪೊಲೀಸರು ಈ ಪ್ರಯತ್ನಕ್ಕ ಕೈಹಾಕಿದ್ದಾರೆ.

Police Put Lockdown Violaters In Ambulance With COVID19 Patient

ರೋಗಿಗಳು ಲಾಕ್‌ಡೌನ್ ಉಲ್ಲಂಘಿಸಿದವರ ಬಳಿಗೆ ಬಂದು ಕೈಯನ್ನು ಹಿಡಿದು ಮಾತನಾಡಿಸಿ ಅವರಿಗೆ ಭಯ ಹುಟ್ಟಿಸುತ್ತಾರೆ.ಚೆನ್ನೈ ಸೇರಿ ಒಟ್ಟು ತಮಿಳುನಾಡಿನ ಐದು ಮಹಾನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಆದೇಶ ನೀಡಲಾಗಿದೆ.

ಚೆನ್ನೈ, ಕೊಯಮತ್ತೂರು, ಮದುರೈ, ಸೇಲಂ ಮತ್ತು ತಿರುಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ನೌಕರರು ಮತ್ತು ಬ್ಯಾಂಕ್ ನೌಕರರು ಶೇ. 33ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ತಮಿಳುನಾಡಿನಲ್ಲಿ 1629 ಕೊರೊನಾ ಸೋಂಕಿತರಿದ್ದಾರೆ, 18 ಮಂದಿ ಮೃತಪಟ್ಟಿದ್ದಾರೆ.

ಎಂದಿನಂತೆ ಆಸ್ಪತ್ರೆ, ಮೆಡಿಕಲ್ ಶಾಪ್, ಪ್ರಯೋಗಾಲಗಳು ಮತ್ತು ಆಂಬ್ಯುಲೆನ್ಸ್‌ ಸೇವೆ ಲಭ್ಯವಿರಲಿದೆ. ಅಮ್ಮಾ ಕ್ಯಾಂಟೀನ್ ಮತ್ತು ಎಟಿಎಂಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.

ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯಿಂದ ಏಪ್ರಿಲ್ 29 ರ ರಾತ್ರಿ 9 ಗಂಟೆಯವರೆಗೆ ಈ ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರಲಿದ್ದು, ಈ ಪ್ರದೇಶದಲ್ಲಿ ಕೆಲವು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಪಳನಿಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Tamil Nadu Police put lockdown violators in an ambulance with a fake COVID19 positive patient as punishment in Tripur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X