ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಾಲಯ ನಿರ್ಮಾಣಕ್ಕೆ ಹಣ ಸಂಗ್ರಹಿಸಿದ್ದ ಯೂಟ್ಯೂಬರ್ ಬಂಧನ

|
Google Oneindia Kannada News

ಚೆನ್ನೈ, ಮೇ 31: ದೇವಾಲಯ ಜೀರ್ಣೋದ್ಧಾರಕ್ಕೆ ಹಣ ಸಂಗ್ರಹಿಸಿದ್ದ ಆರೋಪದ ಮೇಲೆ ತಮಿಳು ಯೂಟ್ಯೂಬರ್ ಕಾರ್ತಿಕ್ ಗೋಪಿನಾಥ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಕಾರ್ತಿಕ್‌ರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವಡಿ ಪೊಲೀಸ್ ಕಮಿಷನರೇಟ್ ಹೇಳಿದೆ.

Breaking; ಪಲ್ಲಕ್ಕಿ ಉತ್ಸವ ಮೇಲಿನ ನಿಷೇಧ ಆದೇಶ ಹಿಂಪಡೆದ ತಮಿಳುನಾಡು Breaking; ಪಲ್ಲಕ್ಕಿ ಉತ್ಸವ ಮೇಲಿನ ನಿಷೇಧ ಆದೇಶ ಹಿಂಪಡೆದ ತಮಿಳುನಾಡು

ಗೋಪಿನಾಥ್ 'ಇಳಯ ಭಾರತಂ' ಎನ್ನುವ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಪೆರಂಬಲೂರು ಜಿಲ್ಲೆಯ ಪ್ರಸಿದ್ಧ ಸಿರುವಾಚರ್ ಮಧುರಕಾಳಿಯಮ್ಮನ್ ದೇವಸ್ಥಾನ ಮತ್ತು ಸುತ್ತಮುತ್ತಲಿನ ಹಾನಿಗೊಳಗಾದ ಪ್ರತಿಮೆಗಳ ನವೀಕರಣ ಮತ್ತು ಪುನರ್ ನಿರ್ಮಾಣಕ್ಕಾಗಿ ಪ್ರಚಾರ ಮಾಡಿದ್ದರು.

Police Arrested Chennai Youtuber Karthik Gopinathan For Collecting Fund For Temple

ಆವಡಿ ಪೊಲೀಸ್ ಕಮಿಷನರ್ ಪ್ರಕಾರ, "ಕಾರ್ತಿಕ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪೆರಂಬಲೂರು ಜಿಲ್ಲೆಯ ಸಿರುವಾಚರ್‌ನಲ್ಲಿರುವ ಅರುಳ್‌ಮಿಗು ಮಧುರ ಕಾಳಿಯಮ್ಮನ್ ದೇವಸ್ಥಾನದಲ್ಲಿ ಪ್ರತಿಮೆಗಳ ಜೀರ್ಣೋದ್ಧಾರಕ್ಕಾಗಿ ನಿಧಿಸಂಗ್ರಹಣೆ ಮಾಡಿದ್ದು, ಯೂಟ್ಯೂಬ್ ಮೂಲಕ ದೇಣಿಗೆ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ" ಎಂದು ಹೇಳಿದ್ದಾರೆ.

"ಇದನ್ನು ಕಾಳಿಯಮ್ಮನ್ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದಾಗ, ಗೋಪಿನಾಥ್ ದೇವಸ್ಥಾನದ ಅಧಿಕಾರಿಗಳ ಅನುಮತಿ ಪಡೆಯದೆ ಹಣ ಸಂಗ್ರಹಣೆ ಮಾಡಿದ್ದಾರೆ ಎಂದು ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಅಧಿಕಾರಿಗಳು ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದು ಕಾರ್ತಿಕ್‌ನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ." ಎಂದರು.

Breaking; ಐಆರ್‌ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆ Breaking; ಐಆರ್‌ಎಸ್ ಅಧಿಕಾರಿ ಸಮೀರ್ ವಾಖಂಡೆ ವರ್ಗಾವಣೆ

ದೇಣಿಗೆ ಸಂಗ್ರಹಿಸಿದ ಹಣವನ್ನು ಗೋಪಿನಾಥ್ ತಮ್ಮ ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನಿಕಟವರ್ತಿ ಎಂದೇ ಗುರುತಿಸಿಕೊಂಡಿದ್ದ ಕಾರ್ತಿಕ್ ಗೋಪಿನಾಥ್ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ಟೀಕಿಸುತ್ತಿದ್ದರು ಎಂದೂ ಆರೋಪಿಸಲಾಗಿದೆ.

ಸರ್ಕಾರದ ವಿರುದ್ಧ ಅಣ್ಣಾಮಲೈ ಆಕ್ರೋಶ; "ಸುಳ್ಳು ಆರೋಪದ ಮೇಲೆ ಕಾರ್ತಿಕ್‌ನನ್ನು ಬಂಧಿಸಲಾಗಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಡಿಎಂಕೆ ಎಂದಿನಂತೆ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಸರ್ಕಾರದ ವಿರುದ್ಧ ದನಿ ಎತ್ತಿದವರನ್ನು ಸುಮ್ಮನಾಗಿಸಲು ಅದು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ ಎನ್ನುವದನ್ನು ಈ ಮೂಲಕ ಸಾಬೀತುಪಡಿಸಿದೆ" ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Police Arrested Chennai Youtuber Karthik Gopinathan For Collecting Fund For Temple

"ಬಲಪಂಥೀಯ ವಿಚಾರಧಾರೆಗಳನ್ನು ಪ್ರಚಾರ ಮಾಡುವ ಗೋಪಿನಾಥನ್ ಬಂಧನದಿಂದ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಘರ್ಷ ಶುರುವಾಗಿದೆ. ಗೋಪಿನಾಥನ್ ರಾಷ್ಟ್ರೀಯವಾದಿ ಎಂದು ಬಣ್ಣಿಸಿರುವ ಅಣ್ಣಾಮಲೈ, ತಮ್ಮ ಪಕ್ಷದ ಕಡೆಯಿಂದ ನ್ಯಾಯ ಪಡೆಯಲು ಕಾನೂನಿನ ಸಹಕಾರ ನೀಡುವುದಾಗಿ" ಘೋಷಿಸಿದ್ದಾರೆ.

ಗೋಪಿನಾಥನ್ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ದುರಸ್ತಿ ಮತ್ತು ನವೀಕರಣ ಉದ್ದೇಶಕ್ಕಾಗಿ ಸುಮಾರು 36 ಲಕ್ಷ ರೂ. ಹಣವನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.

English summary
Chennai police arrested Youttuber Karthik Gopinathan had raised funds through an online crowdfunding platform, reportedly to the tune of about Rs 36 lakh for the repair and renovation purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X