ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪ್ಪೂರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ

|
Google Oneindia Kannada News

ಚೆನ್ನೈ, ಫೆಬ್ರವರಿ 10 : ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು ಪ್ರವಾಸದಲ್ಲಿದ್ದಾರೆ. ತಿರುಪ್ಪೂರ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ, ಅವರು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಳಿಕ ತಮಿಳುನಾಡಿಗೆ ಆಗಮಿಸಿದ್ದಾರೆ. ಸಂಜೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

PM Narendra Modi rally in Tiruppur, Tamil Nadu

ತಿರುಪ್ಪೂರ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನರೇಂದ್ರ ಮೋದಿ ಅವರು ಬಳಿಕ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಬಳಿಕ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

Newest FirstOldest First
4:27 PM, 10 Feb

ಮೀಸಲಾತಿ ಬಗ್ಗೆ ಪ್ರತಿಪಕ್ಷಗಳು ಹಲವು ದಶಕದಿಂದ ಆತಂಕವನ್ನು ಹೆಚ್ಚಿಸುತ್ತಿವೆ. ವಾಜಪೇಯಿ ಸರ್ಕಾರ ಇದ್ದಾಗ ಎಸ್‌ಸಿ/ಎಸ್‌ಟಿ ಸಮುದಾಯದ ಉದ್ಯೋಗ ಬಡ್ತಿಯ ಮೀಸಲಾತಿಯನ್ನು ಸರಿಪಡಿಸಲು ಶ್ರಮಿಸಿತು.
4:25 PM, 10 Feb

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಅನುಕೂಲವಾಗಲು ಶೇ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ವಿಧೇಯಕಕ್ಕೆ ತಿದ್ದುಪಡಿ ತಂದೆವು.
4:24 PM, 10 Feb

ಮೀನುಗಾರಿಕೆ ಮತ್ತು ಮೀನುಗಾರರ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ರಚನೆ ಮಾಡಲು ನಾವು ಮುಂದಾಗಿದ್ದೇನೆ. ಪ್ರತಿಪಕ್ಷಗಳಿಗೆ ನಾನು ಕೇಳಬು ಬಯಸುತ್ತೇನೆ. ಇಂತಹ ಆಲೋಚನೆ ನಿಮಗೆ ಏಕೆ ಬರಲಿಲ್ಲ ಎಂದು?
4:23 PM, 10 Feb

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುಂತೆ ಪ್ರಧಾನ ಮಂತ್ರಿ ಕಿಸಾಸ್ ಸಮ್ಮಾನ್ ನಿಧಿ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
4:20 PM, 10 Feb

ಪ್ರತಿಪಕ್ಷಗಳು ಆತಂಕ ಹರಡುವುದರಲ್ಲಿ, ತಪ್ಪು ಮಾಹಿತಿ ನೀಡುವುದರಲ್ಲಿ ನಿಸ್ಸೀಮರು. ಅವರು ಹೇಳಿದ ರೈತರ ಸಾಲಮನ್ನಾ ಬಡ ರೈತರನ್ನು ತಲುಪಿಲ್ಲ. ರೈತರ ಆದಾಯವನ್ನು ಹೆಚ್ಚಳ ಮಾಡುತ್ತೇವೆ ಎಂದು ಹೇಳಿರುವುದು, ಅದಕ್ಕಾಗಿ ಯೋಜನೆ ಜಾರಿಗೆ ತಂದಿರುವುದು ಎನ್‌ಡಿಎ ಸರ್ಕಾರ
4:18 PM, 10 Feb

ಮಹಾ ಘಟಬಂಧನ್ ಎಂಬುದು ಒಂದು ಶ್ರೀಮಂತರದ ಕುಟುಂಬ. ಅವರಿಗೆ ಬಡವರ ಕಷ್ಟ ಅರ್ಥ ಆಗುವುದಿಲ್ಲ. ತಮ್ಮ ಕುಟುಂಬದ ಇನ್ನಷ್ಟು ಜನರನ್ನು ರಾಜಕೀಯಕ್ಕೆ ಕರೆತರಲು ಅವರು ಘಟ ಬಂಧನ್ ರಚನೆ ಮಾಡಿಕೊಂಡಿದ್ದಾರೆ.
4:17 PM, 10 Feb

ನಮ್ಮ ಪ್ರತಿಪಕ್ಷದವರು ಹೇಳುತ್ತಾರೆ ಮೋದಿ ಏನೂ ಮಾಡಿಲ್ಲ. ಮೋದಿಯನ್ನು ಸೋಲಿಸಲು ದೊಡ್ಡ ಘಟಬಂಧನ್ ಮಾಡಿದ್ದಾರೆ. ಆದರೆ, ಅವರ ತತ್ವ, ಸಿದ್ದಾಂತ, ಆಲೋಚನೆ ಏನು ಎಂಬುದು ಯಾರಿಗೂ ಖಚಿತವಿಲ್ಲ.
Advertisement
4:15 PM, 10 Feb

ಹಿಂದೆ ನಾವು ಫ್ಯಾಮಿಲಿ ಪ್ಯಾಕ್‌ ಅನ್ನು ಮೊಬೈಲ್ ರಿಚಾರ್ಜ್, ಐಸ್‌ ಕೀಂನಲ್ಲಿ ಮಾತ್ರ ನೋಡುತ್ತಿದ್ದೆವು. ಈಗ ಅದು ರಾಜಕೀಯಕ್ಕೆ ಬಂದಿದೆ. ಒಂದೇ ಕುಟುಂಬದ ಇಬ್ಬರು ರಾಜಕೀಯಕ್ಕೆ ಬಂದಿದ್ದಾರೆ.
4:13 PM, 10 Feb

ನೀವು ಪ್ರತಿಪಕ್ಷದವರನ್ನು ಯಾವುದೇ ಪ್ರಶ್ನೆ ಕೇಳಿ ಅವರು ಮೋದಿ ಮೋದಿ ಎಂದು ಹೇಳುತ್ತಾರೆ. ದೇಶದ ಅಭಿವೃದ್ಧಿ ಬಗ್ಗೆ, ಕಾರ್ಮಿಕರ ಜೀವನ ಸುಧಾರಣೆ ಬಗ್ಗೆ ಕೇಳಿ ಮೋದಿ ಎಂದು ಹೇಳುತ್ತಾರೆ.
4:11 PM, 10 Feb

ನಮ್ಮ ದೇಶದಲ್ಲಿ ಕೆಲವು ಕುಟುಂಬಗಳು ದೇಶವನ್ನು ಆಳಲು ಮಾತ್ರ ಹುಟ್ಟಿದ್ದೇವೆ ಎಂದು ಅಂದುಕೊಂಡಿವೆ. ಆದರೆ, ಈಗ ದೇಶದ ಆಡಳಿತ ಸಾಮಾನ್ಯ ಜನರ ಕೈಯಲ್ಲಿ ಇದೆ. ಆದ್ದರಿಂದ, ಜನರ ಬಗ್ಗೆ ಮಾತ್ರ ನಾವು ಆಲೋಚನೆ ಮಾಡುತ್ತೇವೆ.
4:10 PM, 10 Feb

ಯುಪಿಎ ಅವಧಿಯಲ್ಲಿ ತಮಿಳುನಾಡಿನ ಒಬ್ಬರು ಸಚಿವರು ಇದ್ದರು. ಅವರು ರಿ ಕೌಂಟಿಂಗ್ ಮಿನಿಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದರು. ಅವರು ಮಧ್ಯಮ ವರ್ಗವನ್ನು ಗೇಲಿ ಮಾಡುತ್ತಿದ್ದರು.
4:07 PM, 10 Feb

ಇಂದು ದೇಶದ ಅಭಿವೃದ್ಧಿ ಬಗ್ಗೆ ವಿಶ್ವವೇ ಮಾತನಾಡುತ್ತಿದೆ. ಅಭಿವೃದ್ಧಿಗೆ ತೆರಿಗೆದಾರರ ಕೊಡುಗೆಯೇ ಅಪಾರ. ಮಧ್ಯಮ ವರ್ಗದ ಜನರಿಗಾಗಿ 5 ಲಕ್ಷದ ತನಕ ಯಾವುದೇ ತೆರಿಗೆ ಪಾವತಿ ಮಾಡುವುದು ಬೇಡ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ.
Advertisement
4:05 PM, 10 Feb

ದೇಶ ಆರೋಗ್ಯಕರವಾಗಿದ್ದರೆ ಅಭಿವೃದ್ಧಿ ವೇಗವಾಗಿ ಆಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 11 ಲಕ್ಷ ಜನರು ಈಗಾಗಲೇ ಸೌಲಭ್ಯಗಳನ್ನು ಪಡೆದಿದ್ದಾರೆ.
4:04 PM, 10 Feb

ಎನ್‌ಡಿಎ ಸರ್ಕಾರ ಎಂದರೆ ಜನಪರ ಸರ್ಕಾರ. ದೇಶದ ಪ್ರತಿಯೊಬ್ಬ ಜನರ ಸರ್ಕಾರ. ದೇಶದ ಜನರ ಅಭಿವೃದ್ಧಿಗಾಗಿ ನಾವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
4:01 PM, 10 Feb

ನಮ್ಮಸರ್ಕಾರ one rank one pension ಯೋಜನೆ ಜಾರಿಗೆ ತಂದಿತು. ಸರ್ಜಿಕಲ್ ಸ್ಟ್ರೈಟ್ ನಡೆದಾಗ ಕಾಂಗ್ರೆಸ್ ಏನು ಹೇಳಿತು? ಎಂಬುದು ದೇಶದ ಜನರಿಗೆ ತಿಳಿದಿದೆ.
4:00 PM, 10 Feb

ಎರಡು ಡಿಫೆನ್ಸ್ ಕಾರಿಡಾರ್ ಸ್ಥಾಪನೆ ಮಾಡಲು ಎನ್‌ಡಿಎ ಸರ್ಕಾರ ಒಪ್ಪಿಗೆ ನೀಡಿದೆ. ಅದರಲ್ಲಿ ಒಂದು ಕಾರಿಡಾರ್ ತಮಿಳುನಾಡಿನಲ್ಲಿ ಸ್ಥಾಪನೆಯಾಗಲಿದೆ.
3:58 PM, 10 Feb

ಹಿಂದಿನ ಸರ್ಕಾರ ಮತ್ತು ಈಗಿನ ಎನ್‌ಡಿಎ ಸರ್ಕಾರದ ಕಾರ್ಯ ವೈಖರಿ ಬೇರೆ-ಬೇರೆ. ಹಿಂದಿನ ಸರ್ಕಾರಕ್ಕೆ ರಕ್ಷಣಾ ಕ್ಷೇತ್ರದ ಬಗ್ಗೆ ಕಾಳಜಿ ಇರಲಿಲ್ಲ. ಅವರು ದೇಶದ ಬಗ್ಗೆ ಚಿಂತನೆ ಮಾಡಲಿಲ್ಲ. ಆದರೆ, ನಾವು ದೇಶದ ಇಂದಿನ ಸ್ಥಿತಿ ಬಗ್ಗೆ ಯೋಚಿಸುತ್ತೇವೆ. ಮುಂದಿನ ದಿನಗಳ ಕುರಿತು ಚರ್ಚೆ ನಡೆಸುತ್ತೇವೆ.
3:57 PM, 10 Feb

ತಿರುಪ್ಪೂರ್‌ನಲ್ಲಿ ಅಸಂಘಟಿತ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಇದರಿಂದಗಿ ಕಾರ್ಮಿಕರಿಗೆ 60 ವರ್ಷವಾದ ಬಳಿಕ 3000 ರೂ. ಪಿಂಚಣಿ ಬರಲಿದೆ.
3:53 PM, 10 Feb

ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ತಿರುಚ್ಚಿ ವಿಮಾನ ನಿಲ್ದಾಣದ ಹೊಸ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ.
3:51 PM, 10 Feb

ನರೇಂದ್ರ ಮೋದಿ ಎಗೈನ್ ಎಂಬ ಜಾರ್ಕಿನ್‌ ದೇಶದಲ್ಲಿ ಎಲ್ಲರೂ ಹಾಕಿಕೊಂಡು ಓಡಾಡುತ್ತಿದ್ದಾರೆ. ಅದಕ್ಕೆ ಬಳಕೆಯಾಗುವ ಬಟ್ಟೆ ಹೆಚ್ಚಿನದಾಗಿ ಇಲ್ಲಿ ಉತ್ಪಾದನೆಯಾಗುತ್ತದೆ
3:49 PM, 10 Feb

ತಿರುಪ್ಪೂರಿನ ಮಣ್ಣಿಗೆ ನಮನಗಳನ್ನು ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
3:48 PM, 10 Feb

ತಮಿಳಿನಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
3:47 PM, 10 Feb

ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ ಮೋದಿಗೆ ಬೆಳ್ಳಿಯ ತೆಂಗಿನಕಾಯಿ ನೀಡಿ ಗೌರವಿಸಲಾಯಿತು.
3:46 PM, 10 Feb

ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದ ವೇದಿಕೆಗೆ ಆಗಮಿಸಿದ್ದಾರೆ.

English summary
Prime Minister Narendra Modi election campaign rally in Tiruppur, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X