ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹುಟ್ಟುಹಬ್ಬದ ಸಂಭ್ರಮ, ನವಜಾತ ಶಿಶುಗಳಿಗೆ ಸಿಕ್ತು ಗಿಫ್ಟ್

|
Google Oneindia Kannada News

Recommended Video

ನರೇಂದ್ರ ಮೋದಿ ಹುಟ್ಟು ಹಬ್ಬದ ಸಂಭ್ರಮ ನವಜಾತ ಶಿಶುಗಳಿಗೆ ಬಂಪರ್ ಗಿಪ್ಟ್ | Oneindia Kannada

ಚೆನ್ನೈ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ದೇಶದ ಎಲ್ಲಾ ಬಿಜೆಪಿ ಘಟಕಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ಸಮ್ಮಿಶ್ರ ಸರ್ಕಾರದ ಪತನವಾಗುವ ನಿರೀಕ್ಷೆಯಲ್ಲಿ ಕರ್ನಾತಕ ಬಿಜೆಪಿ ಕಾದು ಕುಳಿತಿದೆ. ಮೋದಿ ಅವರ ಆಪ್ತ ವಲಯದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಅನಾರೋಗ್ಯ ಪೀಡಿತರಾಗಿದ್ದು, ಯುಎಸ್ ನಿಂದ ತಜ್ಞ ವೈದ್ಯರ ನೆರವು ಪಡೆದುಕೊಳ್ಳುತ್ತಿದ್ದಾರೆ.

ಮೋದಿಗೆ ರಾಹುಲ್, ಕುಮಾರಸ್ವಾಮಿ, ಸಿದ್ದರಾಮಯ್ಯ ಶುಭ ಹಾರೈಕೆಮೋದಿಗೆ ರಾಹುಲ್, ಕುಮಾರಸ್ವಾಮಿ, ಸಿದ್ದರಾಮಯ್ಯ ಶುಭ ಹಾರೈಕೆ

ಈ ನಡುವೆ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಮೋದಿ ಅವರ 68ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ , ಪ್ರಸೂತಿ ತಜ್ಞೆ ಡಾ. ತಮಿಳಿಸೈ ಸೌಂದರ್ಯರಾಜನ್ ಅವರು ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ಹಾಗೂ ಸಿಹಿ ತಿನಿಸು ಹಂಚಿದ್ದಾರೆ.

ವಿಶ್ವದ ಪ್ರಭಾವಿ ಹಾಗೂ ಜನಪ್ರಿಯ ನಾಯಕರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು ಎಂದು ತಮಿಳುನಾಡು ಬಿಜೆಪಿಯಿಂದ ಟ್ವೀಟ್ ಮಾಡಲಾಗಿದೆ.

ಆರೆಸ್ಸೆಸ್ ಕಾರ್ಯಕರ್ತನಿಂದ ಪ್ರಧಾನಿ ಹುದ್ದೆ ತನಕ ಮೋದಿ ಬೆಳೆದದ್ದು ಹೇಗೆ?ಆರೆಸ್ಸೆಸ್ ಕಾರ್ಯಕರ್ತನಿಂದ ಪ್ರಧಾನಿ ಹುದ್ದೆ ತನಕ ಮೋದಿ ಬೆಳೆದದ್ದು ಹೇಗೆ?

PM Modis 68th birthday: TN BJP gifts gold rings to babies born today

ತಮಿಳುನಾಡಿನಲ್ಲಿ ಪಕ್ಷದ ನಾಯಕರ ಹುಟ್ಟುಹಬ್ಬದಂದು ಭರ್ಜರಿ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಹುಟ್ಟುಹಬ್ಬಕ್ಕೆ ಎಐಎಡಿಎಂಕೆ ಪಕ್ಷದಿಂದ ಅಂದು ಜನಿಸಿದ ಏಳು ಕಂದಮ್ಮಗಳಿಗೆ ಚಿನ್ನದ ಉಂಗುರ ನೀಡಲಾಗಿತ್ತು.

ಇಂದು ನರೇಂದ್ರ ಮೋದಿ ಜನ್ಮದಿನ: ಟ್ವಿಟ್ಟರ್ ನಲ್ಲಿ ಶುಭಾಶಯದ ಸುರಿಮಳೆಇಂದು ನರೇಂದ್ರ ಮೋದಿ ಜನ್ಮದಿನ: ಟ್ವಿಟ್ಟರ್ ನಲ್ಲಿ ಶುಭಾಶಯದ ಸುರಿಮಳೆ

ಪ್ರಧಾನಿ ಮೋದಿ ಅವರು ತಮ್ಮ ನೆಚ್ಚಿನ ಕಾಶಿ ವಿಶ್ವನಾಥನ ಸನ್ನಿಧಿಗೆ ತೆರಳಲಿದ್ದು, ವಾರಣಾಸಿಯಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜತೆಗೆ 'ಚಲೋ ಜೀತ್ ಹೈ' ಎಂಬ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.

English summary
As the BJP celebrates Prime Minister Narendra Modi's 68th birthday across the country, the party in Tamil Nadu has gone a step further. It is gifting gold rings to babies born today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X