ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM Modi-Xi Jinping Meet LIVE Updates : ದಿಗ್ಗಜರ ಭೇಟಿಯ ಐತಿಹಾಸಿಕ ಕ್ಷಣ

|
Google Oneindia Kannada News

ಚೆನ್ನೈ, ಅಕ್ಟೋಬರ್ 10: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಐತಿಹಾಸಿಕ ಭೇಟಿಗೆ ಇಂದು ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಗಲಿದೆ.

ಕಾಶ್ಮೀರ ವಿಷಯದಲ್ಲಿ ತಲೆಹಾಕಬೇಡಿ: ಚೀನಾಕ್ಕೆ ಭಾರತದ ವಾರ್ನಿಂಗ್ಕಾಶ್ಮೀರ ವಿಷಯದಲ್ಲಿ ತಲೆಹಾಕಬೇಡಿ: ಚೀನಾಕ್ಕೆ ಭಾರತದ ವಾರ್ನಿಂಗ್

ಚೆನ್ನೈಯಿಂದ 55 ಕಿ.ಮೀ. ದೂರದಲ್ಲಿರುವ ಮಹಾಬಲಿಪುರಂನಲ್ಲಿ ಅಕ್ಟೋಬರ್ 11 ಮತ್ತು 12 ರಂದು ಉಭಯ ನಾಯಕರ ಮಹತ್ವದ ಭೇಟಿ ನಡೆಯಲಿದ್ದು, ಎರಡು ದೇಶಗಳ ನಡುವಿನ ಹಲವು ಮಹತ್ವದ ವಿಷಯಗಳ ಕುರಿತಂತೆ ಮಾತುಕತೆ ನಡೆಯಲಿದೆ.

PM Modi-Xi Jinping Meet LIVE Updates in Kannada

2018 ರಲ್ಲಿ ಚೀನಾದ ವುಹಾನ್ ಎಂಬಲ್ಲಿ ಉಭಯ ನಾಯಕರೂ ಭೇಟಿಯಾದ ನಂತರ ಇದೀಗ ಈ ವರ್ಷ ಇದೇ ಮೊದಲಬಾರಿಗೆ ಇಬ್ಬರೂ ಭೇಟಿಯಾಗುತ್ತಿದ್ದಾರೆ. ಒಂದೆಡೆ ಪಾಕಿಸ್ತಾನಕ್ಕೇ ತನ್ನ ಬೆಂಬಲ ಎಂದು ಚೀನಾ ಬಹಿರಂಗವಾಗಿಯೇ ಹೇಳಿಕೊಂಡು ಬರುತ್ತಿದೆ. ಬುಧವಾರವಷ್ಟೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅದನ್ನೇ ಪುನರುಚ್ಚರಿಸಿದ್ದರು. ಆದರೆ ಇದೀಗ ಭಾರತಕ್ಕೆ ಆಗಮಿಸಿರುವ ಅವರ ನಡೆ ಹೇಗಿರಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ.

"ಚೆನ್ನೈನ ಮಹಾಬಲಿಪುರಂನಲ್ಲಿ ನಡೆಯುತಿರುವ ಮೋದಿ-ಕ್ಸಿ ಜಿನ್‌ಪಿಂಗ್ ಶೃಂಗಸಭೆಯ ಲೈವ್ ಅಪ್ಡೇಟ್ಸ್ ಗಳು ಇಲ್ಲಿವೆ:"

Newest FirstOldest First
2:43 PM, 11 Oct

ಚೆನ್ನೈಗೆ ಆಗಮಿಸಿದ ಜಿನ್ಪಿಂಗ್ ಅವರನ್ನು ಮುಖ್ಯಮಂತ್ರಿ ಪಳಿನೀ ಸ್ವಾಮಿ, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸ್ವಾಗತಿಸಿದರು.
1:51 PM, 11 Oct

ನಾಯಕರ ಭೇಟಿ ಹಿನ್ನೆಲೆಯಲ್ಲಿ 1936 ರಲ್ಲಿ ಶಾಸ್ತ್ರೀಯ ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅರುಂದೇಲ್ ಅವರು ಕಟ್ಟಿದ್ದ ಕಲಾಕ್ಷೇತ್ರ ಎಂಬ ಸಾಂಸ್ಕೃತಿಕ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
1:49 PM, 11 Oct

ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಚೆನ್ನೈಗೆ ಬಂದಿಳಿದಿದ್ದಾರೆ.
1:44 PM, 11 Oct

ಚೀನಾ ಅಧ್ಯಕ್ಷರು ತಂಗಲಿರುವ ಐಟಿಸಿ ಗ್ರ್ಯಾಂಡ್ ಚೋಳ ಹೊಟೇಲ್ ಎದುರು ಪ್ರತಿಭಟನೆ ನಡೆಸುತ್ತಿದ್ದ ಟಿಬೆಟಿಯನ್ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
12:54 PM, 11 Oct

ಚೆನ್ನೈ ತಲುಪಿರುವ ನರೇಂದ್ರ ಮೋದಿ ಅವರು ಇಂಗ್ಲಿಷ್ ಮಾತ್ರವಲ್ಲದೆ, ಮ್ಯಾಂಡರಿನ್ ಭಾಷೆಯಲ್ಲಿಯೂ ಟ್ವೀಟ್ ಮಾಡಿದ್ದಾರೆ.
12:31 PM, 11 Oct

"ತಮಿಳುನಾಡಿನ ಮಹಾನ್ ಭೂಮಿಗೆ ನಾನು ಬಂದಿಳಿದಿದ್ದೇನೆ. ಇಲ್ಲಿನ ಜನರ ಅದ್ಭುತ ಸಂಸೃತಿ ಮತ್ತು ಆತಿಥ್ಯಕ್ಕೆ ಕೃತಜ್ಞತೆಗಳು. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಅದ್ದೂರಿ ಆತಿಥ್ಯ ನೀಡುತ್ತಿರುವ ತಮಿಳುನಾಡಿಗೆ ಧನ್ಯವಾದಗಳು. ಈ ಅನೌಪಚಾರಿಕ ಭೇಟಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
11:51 AM, 11 Oct

ಮೋದಿ ಭೇಟಿ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ TNWelcomesModi ಮತ್ತು GoBackModi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ
Advertisement
11:44 AM, 11 Oct

ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದು, ಅವರನ್ನು ಮುಖ್ಯಮಂತ್ರಿ ಪಳನೀಸ್ವಾಮಿ ಮತ್ತು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸ್ವಾಗತಿಸಿದರು.
9:45 AM, 11 Oct

ಮೋದಿ-ಜಿನ್ಪಿಂಗ್ ಭೇಟಿಯ ಕುರಿತಂತೆ ಟ್ವೀಟ್ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಇ ಕೆ ಪಳನೀಸ್ವಾಮಿ, ಪ್ರಧಾನಿ ಮೋದಿ ಮತ್ತು ಜಿನ್ಪಿಂಗ್ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುವಂತೆ ತಮಿಳುನಾಡು ಜನತೆಯಲ್ಲಿ ಮನವಿ ಮಾಡಿದ್ದಾರೆ.
7:55 AM, 11 Oct

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ಭಾರತ ಸರ್ಕಾರ ಹಿಂಪಡೆದು, ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಭೇಟಿ ಇದಾಗಿರುವುದರಿಂದ ಮತ್ತಷ್ಟು ಕುತೂಹಲ ಕೆರಳಿಸಿದೆ.
7:55 AM, 11 Oct

ಈ ಸಭೆಯಲ್ಲಿ ಭಯೋತ್ಪಾದನೆ, ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ, ಹಣ ಸಂದಾಯ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಲಿದೆ.
7:55 AM, 11 Oct

ಅಭಿವೃದ್ದಿಗೆ ಸಂಬಂಧಿಸಿದ ಒಪ್ಪಂದಗಳ ಬಗ್ಗೆ ಚರ್ಚೆ ಮತ್ತು ಚೀನಾ-ಭಾರತ ಗಡಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಈ ಸಭೆಯಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ.
Advertisement

English summary
PM Modi-Xi Jinping Summit Live News Updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X