• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೆ.17ರಂದು ತಮಿಳುನಾಡಿನ ಯೋಜನೆಗೆ ಮೋದಿಯಿಂದ ಶಂಕುಸ್ಥಾಪನೆ

|

ಚೆನ್ನೈ, ಫೆಬ್ರವರಿ 16: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2021ರ ಫೆಬ್ರವರಿ 17ರಂದು ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡಿನ ತೈಲ ಮತ್ತು ಅನಿಲ ವಲಯದ ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ರಾಮನಾಥಪುರಂ-ತೂತುಕುಡಿ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಮತ್ತು ಮನಲಿಯ ಚೆನ್ನೈ ಪೆಟ್ರೋಲಿಯಂ ನಿಗಮ ನಿಯಮಿತದ ಗ್ಯಾಸೋಲಿನ್ ಡೆಸುಲ್ಫರೈಸೇಷನ್ ಘಟಕವನ್ನು ಮೋದಿ ರಾಷ್ಟ್ರಕ್ಕೆ ಅರ್ಪಿಸುವರು. ಅವರು ನಾಗಪಟ್ಟಣನಲ್ಲಿ ಕಾವೇರಿ ಬೇಸಿನ್ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಈ ಯೋಜನೆಗಳಿಂದ ಭಾರೀ ಪ್ರಮಾಣದಲ್ಲಿ ಸಾಮಾಜಿಕ-ಆರ್ಥಿಕ ಪ್ರಯೋಜನಗಳಾಗುವ ಜೊತೆಗೆ ದೇಶ ಊರ್ಜ ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಸಾಗಲು ಉತ್ತೇಜನ ನೀಡುತ್ತದೆ. ತಮಿಳುನಾಡಿನ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಸಾಕಾರಕ್ಕೆ ಬದ್ಧ: ಪ್ರಧಾನಿ ನರೇಂದ್ರ ಮೋದಿ

ಯೋಜನೆಗಳ ಕುರಿತು

ರಾಮನಾಥಪುರಂ-ತೂತುಕುಡಿ ಮಾರ್ಗ(143 ಕಿ.ಮೀ) ಇದ್ದು, ಇದು ಎನ್ನೋರ್-ತಿರುವಳ್ಳೂರ್-ಬೆಂಗಳೂರು-ಪುದುಚೇರಿ-ನಾಗಪಟ್ಟಣಂ-ಮಧುರೈ-ಟುಟಿಕಾರಿನ್ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುವುದು. ಇದರಿಂದ ಒಎನ್ ಜಿಸಿ ಅನಿಲ ಘಟಕಗಳಿಗೆ ಮತ್ತು ಕೈಗಾರಿಕೆಗಳು ಹಾಗೂ ವಾಣಿಜ್ಯ ಗ್ರಾಹಕರಿಗೆ ನೈಸರ್ಗಿಕ ಅನಿಲವನ್ನು ಪೂರೈಸಲು ನೆರವಾಗುತ್ತದೆ.

ಮನಲಿಯ ಚೆನ್ನೈ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್(ಸಿಪಿಸಿಎಲ್)ನಲ್ಲಿ ಗ್ಯಾಸೋಲೈನ್ ಡೆಸುಲ್ಫರೈಸೇಷನ್ ಘಟಕವನ್ನು ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ಕಡಿಮೆ ಸೆಲ್ಫರ್(8 ಪಿಪಿಎಂಗಿಂತ ಕಡಿಮೆ) ಅನ್ನು ಮತ್ತು ಪರಿಸರಸ್ನೇಹಿ ಗ್ಯಾಸೋಲಿನ್ ಉತ್ಪಾದಿಸಲಿದ್ದು, ಇದರಿಂದ ಮಾಲಿನ್ಯ ತಗ್ಗಿಸಲು ಮತ್ತು ಶುದ್ಧ ಪರಿಸರ ಕಾಯ್ದುಕೊಳ್ಳಲು ನೆರವಾಗಲಿದೆ.

ಒಂದು ರಾಷ್ಟ್ರ ಒಂದು ಅನಿಲ ಗ್ರಿಡ್: ಮಂಗಳೂರು - ಕೊಚ್ಚಿ ನೈಸರ್ಗಿಕ ಅನಿಲ ಕೊಳವೆ ಮಾರ್ಗ

ನಾಗಪಟ್ಟಣಂನಲ್ಲಿ ಕಾವೇರಿ ಬೇಸಿನ್ ರಿಫೈನರಿ ಘಟಕ ಸ್ಥಾಪಿಸಲಿದ್ದು, ಅದರ ವಾರ್ಷಿಕ ಸಾಮರ್ಥ್ಯ 9 ಮಿಲಿಯನ್ ಮೆಟ್ರಿಕ್ ಟನ್ ಆಗಿದೆ. ಅಂದಾಜು 31,500 ಕೋಟಿ ರೂ. ವೆಚ್ಚದಲ್ಲಿ ಐಒಸಿಎಲ್ ಮತ್ತು ಸಿಪಿಸಿಎಲ್ ಜಂಟಿಯಾಗಿ ಇದನ್ನು ಸ್ಥಾಪಿಸಲಿದೆ. ಇದರಿಂದ ಮೋಟಾರ್ ಸ್ಪಿರಿಟ್ ಮತ್ತು ಬಿಎಸ್-VI ಮಾನದಂಡದ ಡೀಸೆಲ್ ಹಾಗೂ ಮೌಲ್ಯವರ್ಧಿತ ಉತ್ಪನ್ನವಾಗಿ ಪ್ರೊಪಲೈನ್ ಅನ್ನು ಉತ್ಪಾದಿಸಲಾಗುವುದು.

English summary
Prime Minister Narendra Modi will inaugurate key projects of the oil and gas sector in Tamil Nadu on February 17 via video conferencing. His office said Modi will dedicate to the nation the Ramanathapuram–Thoothukudi natural gas pipeline and gasoline desulphurisation unit at Chennai Petroleum Corporation Limited, Manali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X