ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ಜಾಮೀನು ರಹಿತ ವಾರೆಂಟ್

|
Google Oneindia Kannada News

ಚೆನ್ನೈ, ಜನವರಿ 31: ಇಲ್ಲಿನ ಎಗ್ಮೋರ್ ಮೆಟ್ರೋಪಾಲಿಟನ್ ಕೋರ್ಟ್ II ನಿಂದ ಖ್ಯಾತ ನಿರ್ದೇಶಕ ಶಂಕರ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಶಂಕರ್ ಅವರ ಮೇಲೆ ಕೃತಿಚೌರ್ಯ ಆರೋಪ ಹೊರೆಸಲಾಗಿದೆ.

2010 ರಲ್ಲಿ ಶಂಕರ್ ನಿರ್ದೇಶನದಲ್ಲಿ ತೆರೆಕಂಡ ಎಂದಿರನ್ ಅಲಿಯಾಸ್ ರೋಬೋ ಚಿತ್ರ ಸೂಪರ್ ಹಿಟ್ ಆಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಟನೆಯ ಈ ಚಿತ್ರಕ್ಕೆ ಸಂಬಂಧಿಸಿದಂತೆ ಕಥೆ ಕದ್ದ ಆರೋಪದ ಕೇಸ್ 11ನೇ ವರ್ಷಕ್ಕೆ ಕಾಲಿಟ್ಟಿದೆ.

ಪ್ರವೇಶಕ್ಕೂ ಮುನ್ನವೇ ನಿರ್ಗಮನ, ರಜನಿ ನಡೆಯಿಂದ ಯಾರಿಗೆ ಲಾಭ?ಪ್ರವೇಶಕ್ಕೂ ಮುನ್ನವೇ ನಿರ್ಗಮನ, ರಜನಿ ನಡೆಯಿಂದ ಯಾರಿಗೆ ಲಾಭ?

ಏನಿದು ಪ್ರಕರಣ?:
ಆರೂರು ತಮಿಳ್​ನಾದನ್ ಎಂಬ ವ್ಯಕ್ತಿ ನಿರ್ದೇಶಕ ಶಂಕರ್ ಮೇಲೆ ಕತೆ ಕದ್ದ ಆರೋಪ ಮಾಡಿದ್ದಾರೆ. ಜಿಗುಬಾ ಎಂಬ ಹೆಸರಿನಲ್ಲಿ ತಾವು ಬರೆದ ಕತೆಯನ್ನು ಶಂಕರ್ ಹಾಗೆ ಭಟ್ಟಿ ಇಳಿಸಿದ್ದಾರೆ. ಈ ಬಗ್ಗೆ ದೂರಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದರು. 1996 ಹಾಗೂ 2007 ರಲ್ಲಿ ಬೇರೆ ಹೆಸರಿನಲ್ಲಿ ಜಿಗುಬಾ ಕಥೆ ತಮಿಳು ಮ್ಯಾಗಜಿನ್​​​ಗಳಲ್ಲಿ ಪ್ರಕಟವಾಗಿದೆ, 1957ರ ಕೃತಿಹಕ್ಕು ಕಾಯ್ದೆ ಅನ್ವಯ ಕ್ರಮ ಜರುಗಿಸುವಂತೆ ಎಂದು ಅರೂರು ಪರ ವಕೀಲರು ಕೋರ್ಟಿಗೆ ಸಾಕ್ಷ್ಯ ಒದಗಿಸಿದ್ದರು.

Plagiarism case: Non-Bailable Warrant Against Director Shankar

ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಶಂಕರ್ ಅವರಿಗೆ ಅನೇಕ ಬಾರಿ ಸಮನ್ಸ್ ಕಳಿಸಿದ್ದರೂ ಹಾಜರಾಗದ ಕಾರಣ, ಮೆಟ್ರೋಪಾಲಿಟನ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ. ತಮಿಳ್​​​ನಾದನ್ ಆರೋಪನ್ನು ಅಲ್ಲಗಳೆದಿದ್ದ ಶಂಕರ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ವಜಾಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕೃತಗೊಂಡಿತ್ತು.

English summary
Ace Director Shankar has been facing a plagiarism case has been issued a non-bailable warrant by a Metropolitan Magistrate Court II in Egmore, Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X