ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಭಾರತ ವಿರುದ್ಧ ಹೇಳಿಕೆ, ಕಮಲ್ ವಿರುದ್ಧ ಪಿಐಎಲ್

ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳ ಎದುರು ಸದಾಕಾಲ ಹಿಂದೂ ವಿರೋಧಿ ಹೇಳಿಕೆ ನೀಡುವ ಮೂಲ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ನಟ ಕಮಲ್ ಹಾಸನ್ ವಿರುದ್ಧ ತಿರುನಲ್ವೇಲಿ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.

By Mahesh
|
Google Oneindia Kannada News

ಚೆನ್ನೈ, ಮಾರ್ಚ್ 16: 'ಯೂನಿರ್ವಸಲ್ ಸ್ಟಾರ್' ಕಮಲ್ ಹಾಸನ್ ವಿರುದ್ಧ ಮತ್ತೊಮ್ಮೆ ಹಿಂದೂ ಪರ ಪಕ್ಷ ಸೆಟೆದು ನಿಂತಿದೆ. ಕಮಲ್ ಅವರ ಹಿಂದೂ ವಿರೋಧಿ ಹೇಳಿಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಳಿಕ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ.

ಸಾಮಾಜಿಕ ಜಾಲ ತಾಣಗಳು, ಮಾಧ್ಯಮಗಳ ಎದುರು ಸದಾಕಾಲ ಹಿಂದೂ ವಿರೋಧಿ ಹೇಳಿಕೆ ನೀಡುವ ಮೂಲ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ನಟ ಕಮಲ್ ಹಾಸನ್ ವಿರುದ್ಧ ಹಿಂದೂ ಮಕ್ಕಳ್ ಕಚ್ಚಿ, ತಿರುನಲ್ವೇಲಿ ಜಿಲ್ಲಾಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದೆ. ಇದಕ್ಕೂ ಮುನ್ನ ಮಾರ್ಚ್ 15ರಂದು ಪೊಲೀಸರಿಗೆ ದೂರು ನೀಡಲಾಗಿತ್ತು[ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್]

ಇತ್ತೀಚಿಗೆ ಕಮಲ್ ಹಾಸನ್ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಹಾಭಾರತದ ಬಗ್ಗೆ ಉಲ್ಲೇಖಿಸಿದ್ದರು. ಮಹಾಭಾರತದಲ್ಲಿ ಹೆಣ್ಣನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ. ಜೂಜಾಟದಲ್ಲಿ ದಾಳದಂತೆ ಬಳಸಿಕೊಳ್ಳಲಾಗಿದೆ. ಇಂಥ ಕೀಳುಕಥೆಗಳನ್ನು ನಾವು ಪಠ್ಯದಲ್ಲಿ ಮಕ್ಕಳಿಗೆ ಹೇಳಿಕೊಡಬೇಕಾಗಿದೆ ಎಂದಿದ್ದರು.

PIL against Kamal Haasan in Chennai for insulting Hindu epic Mahabharat

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಮಕ್ಕಳ ಪಕ್ಷ, ಕಮಲ್ ಅವರ ಭಾಷಣ, ಸಂದರ್ಶನ, ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಅವರ ಸಂದೇಶಗಳು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದು, ಸಮಾಜದ ಶಾಂತಿ ಕದಡುತ್ತಿವೆ ಎಂದು ಆರೋಪಿಸಿದೆ.[ಯಾವುದನ್ನೂ ನಿಷೇಧಿಸಬೇಡಿ, ನಿಯಂತ್ರಿಸಿ : ಕಮಲ್ ಹಾಸನ್]

ಆದರೆ, ಇದೆಲ್ಲವೂ ಎಐಎಡಿಎಂಕೆ ಪಕ್ಷದ ಪಿತೂರಿ, ಜಲ್ಲಿಕಟ್ಟು ಪ್ರತಿಭಟನೆ ಸಂದರ್ಭದಲ್ಲಿ ಕಮಲ್ ವಿರುದ್ಧ ಸೇಡಿನ ಕ್ರಮ ಅನುಸರಿಸಲಾಗಿತ್ತು. ಈ ಹಿಂದೆ ವಿಶ್ವರೂಪಂ ಸಿನಿಮಾ ಪ್ರದರ್ಶನಕ್ಕೂ ಅಡ್ಡಿಪಡಿಸಲಾಗಿತ್ತು. ಕಮಲ್ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸಲಾಗುತ್ತಿದೆ ಎಂದು ಡಿಎಂಕೆ ವಕ್ತಾರ ಸರವಣನ್ ಹೇಳಿದ್ದಾರೆ.

English summary
A Public Interest Litigation has been filed against Kamal Haasan in the Tirunelveli district court by Hindu Makkal Katchi for hurting the sentiments of Hindus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X