ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆರಿಯಾರ್ ಪ್ರತಿಮೆ ಮೇಲೆ ಕೇಸರಿ ಬಣ್ಣ ಎರಚಿ ಅಪವಿತ್ರಗೊಳಿಸಿದ ಕಿಡಿಗೇಡಿಗಳು

|
Google Oneindia Kannada News

ಚೆನ್ನೈ, ಜುಲೈ 17: ದ್ರಾವಿಡ ಕಳಗಂ ಸ್ಥಾಪಕ ಮತ್ತು ವಿಚಾರವಾದಿ ಪೆರಿಯಾರ್ ಇವಿ ರಾಮಸ್ವಾಮಿ ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳಿಯುವುದರ ಮೂಲಕ ಅಪವಿತ್ರಗೊಳಿಸಲಾಗಿದೆ.

Recommended Video

Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

ಕಿಡಿಗೇಡಿಗಳ ತಂಡ ಪ್ರತಿಮೆಗೆ ಕೇಸರಿ ಬಣ್ಣ ಎರಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಹಾಗೂ ರಾಜಕೀಯ ಪಕ್ಷ ಪೆರಿಯಾರ್ ದ್ರಾವಿಡ ಕಝಗಮ್ ಸದಸ್ಯರು ಪ್ರತಿಮೆ ಇರುವ ಸ್ಥಳದಲ್ಲಿ ಜಮಾಯಿಸಿದ್ದು, ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಮೆಲಾನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳುಮೆಲಾನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಇಂದು ಬೆಳಗಿನ ಜಾವ 5.30ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಮೆಗೆ ಬಳಿಯಲಾಗಿದ್ದ ಬಣ್ಣವು ಮಳೆಗೆ ಬಹುತೇಕ ತೊಳೆದುಹೋಗಿದ್ದರೂ ಉಳಿದ ಬಣ್ಣವನ್ನು ಅಳಸಿ, ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಪ್ರತಿಮೆ ವಿರೂಪಗೊಳಿಸಿದ ಸುದ್ದಿ ಹರಡುತ್ತಿದ್ದಂತೆ ಪ್ರತಿಭಟನೆಗೆ ಇಳಿದ ಪೆರಿಯಾರ್‌ ಅನುಯಾಯಿಗಳು, ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

Periyar Statue dSshonoured With Saffron Paint In Coimbatore

ಸ್ಥಳಕ್ಕೆ ಭೇಟಿ ನೀಡಿರುವ ಕೊಯಮತ್ತೂರು ಪೊಲೀಸ್ ಉಪ ಆಯುಕ್ತ ಜಿ. ಸ್ಟಾಲಿನ್ ಅವರು ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕುನಿಯಮುತ್ತು ಇನ್‌ಸ್ಪೆಕ್ಷನ್ ಶಕ್ತಿವೇಲು ಮಾತನಾಡಿ, ನಾವು ಸ್ವೀಕರಿಸಿದ ದೂರಿನ ಪ್ರಕಾರ ಘಟನೆಯು 6 ಗಂಟೆ ಸುಮಾರಿಗೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳನ್ನು ಪ್ರತಿಮೆ ಬಳಿ ನಿಯೋಜಿಸಲಾಗಿದೆ. ಪ್ರತಿಮೆಯನ್ನು ಸ್ವಚ್ಛಗೊಳಿಸಲಾಗಿದೆ. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ತೂತುಕುಡಿ ಸಂಸದ ಕನ್ನಿಮೋಳಿ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಪೆರಿಯಾರ್ ಕೇವಲ ಪ್ರತಿಮೆಯಲ್ಲ , ಅವರೊಬ್ಬ ಸ್ವಾಭಿಮಾನಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಧೀಮಂತರು . ದಶಕಗಳ ಬಳಿಕವೂ ಅವರು ಎಲ್ಲರಿಗೂ ಆದರ್ಶವಾಗಿದ್ದಾರೆ ಎಂದಿದ್ದಾರೆ.

English summary
Tension prevailed in Coimbatore on Friday morning as the statue of ‘Thanthai Periyar’ EV Ramasamy was found dishonoured at Sundarapuram by miscreants who had poured ‘saffron’ paint over it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X