ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿನ್ ರಾವತ್ ಮೃತದೇಹ ಹೊತ್ತ ಆಂಬ್ಯುಲೆನ್ಸ್ ಸಾಗುವಾಗ ಕಣ್ಣೀರಿಟ್ಟ ಜನ

|
Google Oneindia Kannada News

ಚೆನ್ನೈ, ಡಿಸೆಂಬರ್ 9: ತಮಿಳುನಾಡಿನ ಕೂನೂರಿನ ಸಮೀಪ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಎಂಐ-17ವಿ5 ಹೆಲಿಕಾಪ್ಟರ್ ಬುಧವಾರ ಪತನಗೊಂಡಿತ್ತು. ಈ ವೇಳೆ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌, ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿಯ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸೇನಾ ಹೆಲಿಕಾಪ್ಟರ್ ಪತನದ ವೇಳೆ ಮೃತಪಟ್ಟವರನ್ನು ಗುರುವಾರ ವೆಲ್ಲಿಂಗ್‌ಟನ್‌ನಿಂದ ಕೊಯಮತ್ತೂರಿನ ಸುಲೂರ್ ಏರ್‌ಫೋರ್ಸ್ ಬೇಸ್‌ಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯುತ್ತಿರುವ ವಿಡಿಯೋವನ್ನು ಪ್ರಸಾರ ಭಾರತೀ ಸುದ್ದಿ ಸಂಸ್ಥೆ ಕೂನಲ್ಲಿ ಹಂಚಿಕೊಂಡಿದೆ.

ಸೇನಾ ಹೆಲಿಕಾಪ್ಟರ್ ಪತನವಾಗಲು ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಹೆಲಿಕಾಪ್ಟರ್ ಹಾರಾಟ ನಡೆಸಿದ್ದ ಮಾರ್ಗದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಸಂಚಾರ ಮಾರ್ಗದ ಗೋಚರತೆಯಲ್ಲಿ ಉಂಟಾಗಿರುವ ಅಸ್ಪಷ್ಟತೆಯಿಂದ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

People Tears During Ambulances Carrying Mortal Remains Of CDS Gen Bipin Rawat

ಆಂಬ್ಯುಲೆನ್ಸ್ ಸಾಗುವಾಗ ಕಣ್ಣೀರಿಟ್ಟ ಜನ
ಮೃತದೇಹಗಲ್ಲು ಹೊತ್ತ ಆಂಬ್ಯುಲೆನ್ಸ್ ಸಾಗುತ್ತಿರುವ ದಾರಿಯಲ್ಲಿ ಜನಸಾಮಾನ್ಯರು ಕಣ್ಣೀರಿಡುತ್ತಿರುವ ಮತ್ತೊಂದು ವಿಡಿಯೋವನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಕೂನಲ್ಲಿ ಹಂಚಿಕೊಂಡಿದ್ದು, ಇದೊಂದು ಹೃದಯವಿದ್ರಾವಕ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ
ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಪತನದ ದುರಂತದಲ್ಲಿ ಮೃತಪಟ್ಟವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿರುವ ಘಟನೆ ತಮಿಳುನಾಡಿನ ಮೆಟ್ಟುಪಾಳಯಂನಲ್ಲಿ ನಡೆದಿದೆ.

ಕೂನೂರು ಬಳಿಯ ವಿಲ್ಲಿಂಗ್‌ಟನ್‌ನ ಎಂಆರ್‌ಸಿಯಿಂದ ಪಾರ್ಥಿವ ಶರೀರಗಳನ್ನು ಆಂಬ್ಯುಲೆನ್ಸ್‌ನಲ್ಲಿ ಸುಲೂರು ಏರ್‌ಬೇಸ್‌ಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಬೆಂಗಾವಲು ವಾಹನ ಅಪಘಾತದಕ್ಕೀಡಾಗಿದೆ. ಇದರಿಂದಾಗಿ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ಗೂ ಅಪಘಾತವಾಗಿದೆ.

ಆಂಬ್ಯುಲೆನ್ಸ್ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದಿದ್ದು, ಅದರ ಮುಂಭಾಗ ಜಖಂಗೊಂಡಿದೆ. ಇದರಿಂದ ಸಂಚಾರ ವಿಳಂಬವಾಯಿತು. ಆಂಬ್ಯುಲೆನ್ಸ್‌ನಲ್ಲಿದ್ದ ಪಾರ್ಥಿವ ಶರೀರಗಳನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸಿ ನಂತರ ರವಾನೆ ಮಾಡಲಾಯಿತು.

People Tears During Ambulances Carrying Mortal Remains Of CDS Gen Bipin Rawat

ಈ ಅಪಘಾತದಿಂದಾಗಿ ಏಳು ಮಂದಿ ಪೊಲೀಸ್‌ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತಕ್ಕೀಡಾದ ಆಂಬ್ಯುಲೆನ್ಸ್‌ನಿಂದ ಮತ್ತೊಂದು ವಾಹನಕ್ಕೆ ಪಾರ್ಥಿವ ಶರೀರಗಳನ್ನು ಸ್ಥಳಾಂತರಿಸಲು ಸ್ಥಳೀಯರು ಸಹಾಯ ಮಾಡಿದ್ದಾರೆ.

ಸಿಡಿಎಸ್ ಜನರಲ್‌ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಸೇರಿದಂತೆ ಉಳಿದ ಸೇನಾ ಸಿಬ್ಬಂದಿ ಪಾರ್ಥಿವ ಶರೀರಗಳನ್ನು ಇಂದು ದೆಹಲಿಗೆ ರವಾನಿಸಲಾಗುತ್ತದೆ. ಅಂತಿಮ ದರ್ಶನದ ಬಳಿಕ ಸೇನಾ ಗೌರವಗಳೊಂದಿಗೆ ಶುಕ್ರವಾರ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.

ಊಟಿ ಸಮೀಪ ಸೇನಾ ಹೆಲಿಕಾಪ್ಟರ್ ದುರಂತ
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು 11 ಸಶಸ್ತ್ರ ಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಪ್ರಸ್ತುತ ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾರತೀಯ ವಾಯುಸೇನೆ ಹೇಳಿದೆ.

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಪಾಲಂ ವಾಯುನೆಲೆಯಿಂದ ಐಎಎಫ್ ಎಂಬ್ರೇರ್ ವಿಮಾನದಲ್ಲಿ ಬೆಳಿಗ್ಗೆ 8:47ಕ್ಕೆ ಹೊರಟರು ಮತ್ತು ಬೆಳಿಗ್ಗೆ 11:34ಕ್ಕೆ ಸುಲೂರ್ ವಾಯುನೆಲೆಗೆ ಬಂದಿಳಿದರು.

People Tears During Ambulances Carrying Mortal Remains Of CDS Gen Bipin Rawat

ನಂತರ ಬೆಳಿಗ್ಗೆ 11:48ರ ಸುಮಾರಿಗೆ Mi-17V5 ಚಾಪರ್‌ನಲ್ಲಿ ಸುಳೂರಿನಿಂದ ವೆಲ್ಲಿಂಗ್ಟನ್‌ಗೆ ಹೊರಟಿದ್ದರು. ಮಧ್ಯಾಹ್ನ 12.22ರ ಸುಮಾರಿಗೆ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ. ಸಿಂಗ್, ಜೆಡಬ್ಲ್ಯೂಒ ದಾಸ್, ಜೆಡಬ್ಲ್ಯೂಒ ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಸಾಯಿ ತೇಜಾ ಮೃತಪಟ್ಟ ಇತರ ಸಿಬ್ಬಂದಿಗಳಾಗಿದ್ದಾರೆ.

Recommended Video

ಸೇನಾ ಸಹೋದ್ಯೋಗಿಗಳ ಜೊತೆ ಮಕ್ಕಳಂತೆ ಕುಣಿದು ಕುಪ್ಪಳಿಸಿದ್ದ ಬಿಪಿನ್ ರಾವತ್ | Oneindia Kannada

English summary
Army Helicopter Crash: People tears during ambulances carrying mortal remains of CDS Gen Bipin Rawat and military staff died in helicopter crash were taken by ambulance from Wellington to Sulur Air Force Base in Coimbatore on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X