ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗೆ ಮತ್ತೋರ್ವ ಬಲಿ: 30 ಮಂದಿ ಸ್ಥಿತಿ ಗಂಭೀರ

|
Google Oneindia Kannada News

Recommended Video

ಅಪಾಯಕಾರಿ ಜಲ್ಲಿಕಟ್ಟು ಕ್ರೀಡೆಯಲ್ಲಿ 60 ಮಂದಿಗೆ ಗಾಯ | Jallikattu | Tamil Nadu | oneindia kannada

ಚೆನ್ನೈ, ಜನವರಿ 20: ಸುಪ್ರೀಂಕೋರ್ಟ್ ಆದೇಶದ ಬಳಿಕ ಅಧಿಕಾರಿಗಳ ತಂಡ ನಿಗಾದೊಂದಿಗೆ ಜಲ್ಲಿಕಟ್ಟು ನಡೆಯುತ್ತಿದೆ. ಆದಾಗ್ಯೂ ಮಧುರೈನ ಆವನಿಪುರಂನಲ್ಲಿ ಓರ್ವ ಮೃತಪಟ್ಟಿದ್ದಾರೆ.

ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 30 ಜನರ ಸ್ಥಿತಿ ಗಂಭೀರವಾಗಿದೆ. ಜೊತೆಗೆ ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಒಂದು ಹೋರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!

ಒಟ್ಟು 600 ಹೋರಿಗಳು ಈ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದವು. ಈ ವೇಳೆ ತಮಿಳುನಾಡಿನ ಸಚಿವ ಜಿ.ಭಾಸ್ಕರನ್​ ಮತ್ತು ಜಿಲ್ಲಾಧಿಕಾರಿ ಜಯಕಾಂತನ್​ ಪಾಲ್ಗೊಂಡಿದ್ದರು.

One Killed In Jallikattu Event

ಈ ಜಲ್ಲಿಕಟ್ಟು ಕ್ರೀಡೆಯನ್ನು ಸೇಂಟ್ ಆಂಟೋನಿ ಚರ್ಚ್​​ ಫೆಸ್ಟಿವಲ್​​​ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ವಿವಿಧ ಕಡೆಗಳಿಂದ ಯುವಕರು ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

ಈ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನ ಒಂದು ಪ್ರಮುಖ ಆಚರಣೆಯಾಗಿದೆ. ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ಇದು ಹೋರಿಗಳೊಂದಿಗೆ ಸೆಣಸಾಡುವ ಅಪಾಯಕಾರಿ ಆಟವಾಗಿದೆ.

ಈ ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್​​ ಸೂಚನೆ ನೀಡಿದ್ದರೂ ಸಹ ಸಂಪ್ರದಾಯ ಮುರಿಯಲು ಒಪ್ಪದ ತಮಿಳುನಾಡಿನ ಜನ ಪ್ರತಿವರ್ಷ ಈ ಕ್ರೀಡೆಯನ್ನು ಆಯೋಜಿಸುತ್ತಿದ್ದಾರೆ.

English summary
One person was gored to death and 61 others were injured, 30 of whom seriously, in the 'manju viratu' (chasing the bull- a jallikattu event) organised near here on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X