ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು

|
Google Oneindia Kannada News

ಚೆನ್ನೈ, ಮೇ 27: ಸತತ ಎರಡು ತಿಂಗಳ ಕೊರೊನಾ ಲಾಕ್‌ಡೌನ್ ಬಳಿಕ ದೇಶೀಯ ವಿಮಾನ ಸೇವೆ ಆರಂಭಗೊಂಡ ಮೊದಲ ದಿನದಂದೇ ತಮಿಳುನಾಡು ಪ್ರಯಾಣಿಕರೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.

ಚೆನ್ನೈನಿಂದ ಕೊಯಮತ್ತೂರಿಗೆ ವಿಮಾನದಲ್ಲಿ ಆಗಮಿಸಿದ್ದ 23 ವರ್ಷದ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಟೆಕ್ಸ್‌ಟೈಲ್ಸ್ ಸಿಟಿಯಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ.

ಕೊವಿಡ್ 19 ವೈದ್ಯಕೀಯ ಸಾಮಗ್ರಿ ಹೊತ್ತ ವಿಮಾನ ಚಾಲನೆ ಮಾಡಿದ ಬಿಜೆಪಿ ನಾಯಕ ಕೊವಿಡ್ 19 ವೈದ್ಯಕೀಯ ಸಾಮಗ್ರಿ ಹೊತ್ತ ವಿಮಾನ ಚಾಲನೆ ಮಾಡಿದ ಬಿಜೆಪಿ ನಾಯಕ

ಇಂಡಿಗೋ ವಿಮಾನದಲ್ಲಿ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂದು ತಿಳಿದುಬಂದಿದೆ. ಬೇರೆಲ್ಲಾ ಪ್ರಯಾಣಿಕರ ವರದಿ ನೆಗೆಟಿವ್ ಬಂದಿದೆ. ಒಟ್ಟು 90 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

On Day 1 Of Air Travel Tamil Nadu Passenger Tests Positive For Coronavirus

ಆತ ಮಾಸ್ಕ್ ಧರಿಸಿದ್ದ, ಕೈಗವಸುಗಳನ್ನು ಹಾಕಿಕೊಂಡಿದ್ದ, ಅವರ ಪಕ್ಕದಲ್ಲಿ ಯಾರೂ ಕುಳಿತಿರಲಿಲ್ಲ. ಹೀಗಾಗಿ ಆತನಿಂದ ಬೇರೆಯವರಿಗೆ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ ಇದೆ ಎಂದು ಸಹ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.

ಕೊಯಮತ್ತೂರಿನಲ್ಲಿ ವಿಮಾನ ಲ್ಯಾಂಡಿಂಗ್ ಆದ ಬಳಿಕ ಥರ್ಮಲ್ ಸ್ಕ್ರೀನಿಂಗ್ ವೇಳೆ ತಿಳಿದುಬಂದಿದೆ.ಗಂಟಲು ದ್ರವದ ಮಾದರಿ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರ ಟ್ರಾವೆಲ್ ಹಿಸ್ಟರಿ ಯಾರಿಗೂ ತಿಳಿದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ 646 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈ ಒಂದರಲ್ಲೇ 11,640 ಪ್ರಕರಣಗಳಿವೆ. ಒಟ್ಟು 17,728 ಕೊರೊನಾ ಸೋಂಕಿತರಿದ್ದಾರೆ. ಒಟ್ಟು 127 ಮಂದಿ ಇದುವರೆಗೆ ಸಾವನ್ನಪ್ಪಿದ್ದು ಒಂದೇ ದಿನ ಆರು ಮಂದಿ ಮೃತಪಟ್ಟಿದ್ದಾರೆ.

English summary
A 23-year-old man who took a flight to Chennai from Coimbatore on Monday, has tested positive for coronavirus. He has been admitted at the ESI Hospital in the Textiles City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X