ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಾ, ಉಬರ್ ಬಳಕೆ ಹೆಚ್ಚಾಗಿ ಕಾರು ಮಾರಾಟದಲ್ಲಿ ಇಳಿಕೆ: ನಿರ್ಮಲಾ

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 10: ಯುವಜನರು ಓಲಾ, ಉಬರ್ ವಾಹನಗಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿರುವುದರಿಂದ ಹೊಸ ಕಾರುಗಳ ಖರೀದಿಯಿಂದ ದೂರ ಸರಿದಿದ್ದಾರೆ. ವಾಹನ ಮಾರಾಟ ಕುಸಿತಕ್ಕೆ ಇದು ಕೂಡ ಒಂದು ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಚೆನ್ನೈನಲ್ಲಿ ಅಭಿಪ್ರಾಯ ಪಟ್ಟರು.

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜಿಡಿಪಿ ಇಳಿಕೆ ಒಂದು ಭಾಗವಷ್ಟೇ: ನಿರ್ಮಲಾಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜಿಡಿಪಿ ಇಳಿಕೆ ಒಂದು ಭಾಗವಷ್ಟೇ: ನಿರ್ಮಲಾ

ಭಾರತ್ ಸ್ಟೇಜ್ ನ ಮುಂದಿನ ಹಂತದ ವಾಹನಕ್ಕಾಗಿಯೇ ದೊಡ್ಡ ಪ್ರಮಾಣದಲ್ಲಿ ಕಾಯ್ದುಕೊಂಡಿದ್ದಾರೆ. ಈಗಲೇ ವಾಹನ ಖರೀದಿ ಮಾಡುವುದಕ್ಕಿಂತ ಹೊಸ ಎಂಜಿನ್ ಬಳಸಿದ ವಾಹನಗಳು ಬರಲಿ. ಅಲ್ಲಿಯವರೆಗೆ ಓಲಾ, ಉಬರ್ ನಲ್ಲಿ ಸಂಚರಿಸೋಣ ಎಂಬ ಆಲೋಚನೆಯಲ್ಲಿ ಇದ್ದಾರೆ ಎಂದು ಅವರು ಹೇಳಿದರು.

Ola, Uber Cabs Usage Leads To Fall In Car Sales, Says Nirmala Sitharaman

ಇನ್ನು ಅಶೋಕ್ ಲೇಲ್ಯಾಂಡ್ ವಾಹನಗಳ ಮಾರಾಟದಲ್ಲೂ ಭಾರೀ ಕಡಿಮೆ ಆಗಿದೆ. ವಾಹನ ಮಾರಾಟ ಕ್ಷೇತ್ರ ಸುಧಾರಣೆಗೆ ಸಾಕಷ್ಟು ಶ್ರಮಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಬಸ್, ಟ್ರಕ್ ಗಳ ಮಾರಾಟದಲ್ಲಿ ಇಳಿಕೆ ಆಗುವುದಕ್ಕೂ ಓಲಾ, ಉಬರ್ ಕಾರಣವೆ ಎಂದು ಕಾಂಗ್ರೆಸ್ ಪಕ್ಷವು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದೆ.

English summary
Finance minister Nirmala Sitharaman said in Chennai on Tuesday, Ola and Uber cabs usage leads to dip in car sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X