ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಕದ ತಮಿಳುನಾಡಿಗೂ ಹಬ್ಬಿದ ಟಿಪ್ಪು ಜಯಂತಿ 'ಜ್ವರ'!

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ನ.23: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜನ್ಮ ವಾರ್ಷಿಕೋತ್ಸವವನ್ನು ನಾಡಿನೆಲ್ಲೆಡೆ ಆಚರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಇದರಿಂದ ಉಂಟಾದ ಗೊಂದಲ, ಗಲಭೆ, ಸಾವು ಎಲ್ಲವೂ ಈಗ ತಮಿಳುನಾಡಿಗೂ ತಟ್ಟುತ್ತಿದೆ. ಈ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದಿರುವ ಜಯಲಲಿತಾ ಸರ್ಕಾರ, ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಲು ನಿರಾಕರಿಸಿದೆ.

ಕರ್ನಾಟಕ ಮಾದರಿಯಲ್ಲೇ ತಮಿಳುನಾಡಿನಲ್ಲೂ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಕು ಎಂದು ಒತ್ತಾಯಿಸಿ ವೆಲ್ಲೂರಿನ ತಮಿಳಗ ಮಕ್ಕಲ್ ಜನನಾಯಕ ಕಚ್ಚಿ ಕಡೆಯಿಂದ ಮನವಿ ಸಲ್ಲಿಸಲಾಗಿತ್ತು.ಅದರೆ, ರಾಜ್ಯ ಸರ್ಕಾರ ಈ ಬಗ್ಗೆ ಖಡಾಖಂಡಿತವಾಗಿ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. [ಟಿಪ್ಪು ಜಯಂತಿ ವಿವಾದದ ಒಳ-ಹೊರಗು, ನಿಮ್ಮ ಮುಂದೆ]

Now Tipu issue threatens to trouble Tamil Nadu

ಗುಪ್ತಚರ ವರದಿ ಪ್ರಕಾರ ರಾಜ್ಯದಲ್ಲಿರುವ ಶಾಂತಿ ಸುವ್ಯವಸ್ಥೆ ಕದಡಲು ಇಂಥ ಜಯಂತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಟಿಪ್ಪು ಜಯಂತಿಗೆ ಅನುಮತಿ ನೀಡಿದರೆ, ಕರ್ನಾಟಕದಂತೆ ಇಲ್ಲೂ ಕೂಡಾ ಗಲಭೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. [ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

ಕೋರ್ಟ್ ಮೆಟ್ಟಿಲೇರಿದ ಪ್ರಕರಣ: ಈಗ ಪ್ರಕರಣ ಮದ್ರಾಸ್ ಹೈಕೋರ್ಟ್ ತಲುಪಿದ್ದು, ವೆಲ್ಲೂರಿನ ಸಂಘಟನೆ ಕಾನೂನು ಹೋರಾಟಕ್ಕೆ ಮುಂದಾಗಿದೆ. ಈ ಹಿಂದೆ ಹೈದರಾಲಿ ಆವರ ಸ್ಮಾರಕ ನಿರ್ಮಾಣಕ್ಕೆ ಮನವಿ ಸಲ್ಲಿಸಿದಾಗ ಸರ್ಕಾರ ಒಪ್ಪಿಕೊಂಡಿತ್ತು. ಅದರೆ, ಈಗ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದೆ. [ಕೊಡಗಿನ ಕುಟ್ಟಪ್ಪ ಸಾವು: ಆಕಸ್ಮಿಕವೋ, ಪೂರ್ವ ನಿಯೋಜಿತವೋ?]

ತಮಿಳುನಾಡಿನಲ್ಲಿ ಟಿಪ್ಪು ಜಯಂತಿ ಆಚರಣೆ ಬಗ್ಗೆ ಪರ-ವಿರೋಧದ ಅಲೆ ಇನ್ನೂ ಇದೆ. ಕೆಲವರು ಹಿಂದೂ ದೇಗುಲ ಶೃಂಗೇರಿ ಮಠಕ್ಕೆ ನೀಡಿದ ದಾನ ದತ್ತಿಯನ್ನು ಪ್ರಸ್ತಾಪಿಸಿ, ಮರಾಠರು ಮಾಡಿದ ತಪ್ಪು ಟಿಪ್ಪು ಮೇಲೆ ಬಂದಿದೆ ಎಂದಿದ್ದಾರೆ.

ಇನ್ನೊಂದೆಡೆ ಟಿಪ್ಪು ಸುಲ್ತಾನ್ ಜೀವನ ಚರಿತ್ರೆ ಆಧಾರಿಸಿದ ಚಿತ್ರ ಮಾಡಲು ಹೊರಟ ಅಶೋಕ್ ಖೇಣಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹಿಂದೂ ಮುನ್ನನಿ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

English summary
Karnataka witnesses some unfortunate riots after the state government decided to celebrate Tipu Sultan Jayanthi. However Tamil Nadu has taken a cue and acting on an intelligence bureau report refused permission to an oraganisation that sought to celebrate Tipu Sultan’s birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X