ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೂರಿನ ನಂತರ ಐಐಟಿ, ಮದ್ರಾಸಿನಲ್ಲಿ ಬೀಫ್ ಫೆಸ್ಟಿವಲ್

ಕೇರಳದ ಕಣ್ಣೂರಿನಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಎತ್ತು ಕೊಂದು ತಿಂದ ಬಳಿಕ ಮದ್ರಾಸಿನ ಐಐಟಿ ಕ್ಯಾಂಪಿನಲ್ಲಿ ಬೀಫ್ ಫೆಸ್ಟಿವಲ್ ನಡೆಸಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಮೇ 29: ಕೇರಳದ ಕಣ್ಣೂರಿನಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಎತ್ತು ಕೊಂದು ತಿಂದ ಬಳಿಕ ಮದ್ರಾಸಿನ ಐಐಟಿ ಕ್ಯಾಂಪಿನಲ್ಲಿ ಬೀಫ್ ಫೆಸ್ಟಿವಲ್ ನಡೆಸಲಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ಬೀಫ್ ಫೆಸ್ಟಿವಲ್ ಕಾರ್ಯಕ್ರಮ ಸೋಮವಾರ ಸಂಜೆ ಆಯೋಜಿಸಲಾಗಿದೆ.

ಅಕ್ರಮವಾಗಿ ಪಶುಗಳ(ಹಸು,ಎಮ್ಮೆ, ಒಂಟೆ, ಎತ್ತು, ಇತ್ಯಾದಿ)ಮಾರಾಟವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ನಿಯಮಾವಳಿಗಳ ವಿರುದ್ಧ ಕೇರಳದಲ್ಲಿ ಭಾರಿ ವಿರೋಧ, ಪ್ರತಿಭಟನೆ ವ್ಯಕ್ತವಾಗಿದೆ.

Now IIT Madras students organise beef festival

ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದನ್ನು ಖಂಡಿಸಿ ಐಐಟಿ, ಮದ್ರಾಸ್ ನ ಆವರಣದಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳು ದನದ ಮಾಂಸ ತಿಂದು ಪ್ರತಿಭಟನೆ ನಡೆಸಿದ್ದಾರೆ.

ಕಳೆದ ರಾತ್ರಿ ಐಐಟಿ ಮದ್ರಾಸ್ ನ ಕ್ಯಾಂಪಿನ ಹುಲ್ಲುಹಾಸಿನಲ್ಲಿ ಕುಳಿತು ದನದ ಮಾಂಸ ಸೇವಿಸಿದ ವಿದ್ಯಾರ್ಥಿಗಳು, ಸಿಪಿಐಎಂ ಕಾರ್ಯಕರ್ತರ ಬೀಫ್ ಫೆಸ್ಟಿವಲ್ ಸಮರ್ಥಿಸಿಕೊಂಡಿದ್ದಾರೆ.

'ನಾವು ಏನು ತಿನ್ನಬೇಕು ಎಂಬುದನ್ನುದೆಹಲಿ, ನಾಗಪುರ್ ನಿಂದ ಕಲಿಯಬೇಕಾಗಿಲ್ಲ' ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೇರಳದಲ್ಲಿನ ಪ್ರತಿಭಟನೆ ರೀತಿ ಸರಿಯಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಪರ -ವಿರೋಧ ಚರ್ಚೆ ಪ್ರತಿಭಟನೆಗಳು ಸದ್ಯಕ್ಕೆ ಜಾರಿಯಲ್ಲಿವೆ.

English summary
Around 50 students of the IIT Madras took part in a beef festival. The festival was held at the IIT Madras campus to protest against the ban on sale of cattle for slaughtering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X