ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್.ಕೆ ನಗರದಲ್ಲಿ 'ನೋಟಾ' ಮುಂದೆ ಮಕಾಡೆ ಮಲಗಿದ ಬಿಜೆಪಿ

By Sachhidananda Acharya
|
Google Oneindia Kannada News

ಚೆನ್ನೈ, ಡಿಸೆಂಬರ್ 25: ಆರ್.ಕೆ ನಗರ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್, ಎಐಎಡಿಎಂಕೆ, ಡಿಎಂಕೆ ಅಭ್ಯರ್ಥಿಗಳಿಗೆ ಪೈಪೋಟಿ ನೀಡುವ ಪೋಸು ನೀಡಿದ್ದ ಬಿಜೆಪಿ ಮಕಾಡೆ ಮಲಗಿದೆ.

ಘಟಾನುಘಟಿ ಪಕ್ಷಗಳನ್ನು ಹಿಂದಿಕ್ಕುವುದು ಬಿಡಿ ಬಿಜೆಪಿಗೆ 'ನೋಟಾ'ವನ್ನು ಹಿಂದಿಕ್ಕಲೂ ಸಾಧ್ಯವಾಗಿಲ್ಲ. ಈ ಮೂಲಕ ರಾಷ್ಟ್ರೀಯ ಪಕ್ಷ ಭಾರೀ ಮುಜುಗರಕ್ಕೀಡಾಗಿದೆ.

ಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯ

ಆರ್.ಕೆ ನಗರದಲ್ಲಿ ನೋಟಾ ಐದನೇ ಸ್ಥಾನ ಪಡೆದು 2,373 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ನಾಗಾರ್ಜುನ ಕೇವಲ 1,417 ಮತಗಳನ್ನು ಪಡೆದು ಆರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2016ರಲ್ಲೂ ಮೈಲಾಪೋರೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿಯ ನಾಗರ್ಜುನ ರಾಜ್ಯದ ಟಿವಿಗಳಲ್ಲಿ ಕಾಣಿಸಿಕೊಳ್ಳುವ ಪರಿಚಿತ ಮುಖವಾಗಿದೆ. ಹೀಗಿದ್ದೂ ಅವರು ನೋಟಾಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲು ಶಕ್ತವಾಗಿಲ್ಲ.

NOTA scored more than BJP in RK Nagar by-polls

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ತಮಿಳುನಾಡು ಉಸ್ತುವಾರಿ ಸುಬ್ರಮಣಿಯನ್ ಸ್ವಾಮಿ, ಇದು 'ಹೊಣೆಗಾರಿಕೆಯ ಸಮಯ' ಎಂದಿದ್ದಾರೆ.

ಭಾನುವಾರ ಹೊರಬಿದ್ದ ಆರ್.ಕೆ ನಗರ ಫಲಿತಾಂಶದಲ್ಲಿ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ 89,013 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ 40,707 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಎರಡನೇ ಸ್ಥಾನವನ್ನು ಎಐಎಡಿಎಂಕೆ ಪಡೆದುಕೊಂಡಿದ್ದು, ಪಕ್ಷದ ಅಭ್ಯರ್ಥಿ ಇ. ಮಧುಸೂದನ್ ಕೇವಲ 48,306 ಮತಗಳನ್ನು ಪಡೆದಿದ್ದಾರೆ.

ಡಿಎಂಕೆ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಪಕ್ಷದ ಅಭ್ಯರ್ಥಿ ಮರುದು ಗಣೇಶನ್24,651 ಮತಗಳನ್ನಷ್ಟೇ ಪಡೆದಿದ್ದಾರೆ.

English summary
None Of The Above (NOTA) managed to pull in more votes than the BJP candidate Karu Nagarajan in RK Nagar bi-poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X