ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಪ್ರಕರಣ: 2 ಬೆರಳಿನ ಪರೀಕ್ಷೆ ಮಾಡಿಲ್ಲ ಎಂದ ವಾಯುಪಡೆ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಾಯುಪಡೆ ಮುಖ್ಯಸ್ಥ ವಿಆರ್ ಚೌಧರಿ ಹೇಳಿಕೆ ನೀಡಿದ್ದಾರೆ.

ಭಾರತೀಯ ವಾಯುಸೇನೆಯ ಮಹಿಳಾ ಅಧಿಕಾರಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ಐಎಎಫ್​​ನ ಫ್ಲೈಟ್​ ಲೆಫ್ಟಿನೆಂಟ್​​ ಒಬ್ಬರನ್ನು ಬಂಧಿಸಲಾಗಿದ್ದು, ಭಾರತೀಯ ದಂಡಸಂಹಿತೆ ಕಾಯ್ದೆಯ ಸೆಕ್ಷನ್​ 376ರಡಿ ಪ್ರಕರಣ ದಾಖಲಿಸಲಾಗಿದೆ.

 ಅತ್ಯಾಚಾರ ಯತ್ನ: ವ್ಯಕ್ತಿಗೆ ಇಡೀ ಹಳ್ಳಿಯ ಮಹಿಳೆಯರ ಬಟ್ಟೆ ತೊಳೆಯುವ ಶಿಕ್ಷೆ ಅತ್ಯಾಚಾರ ಯತ್ನ: ವ್ಯಕ್ತಿಗೆ ಇಡೀ ಹಳ್ಳಿಯ ಮಹಿಳೆಯರ ಬಟ್ಟೆ ತೊಳೆಯುವ ಶಿಕ್ಷೆ

ಕೊಯಮತ್ತೂರ್ ಏರ್ ಪೋರ್ಸ್ ಆಡಳಿತಾತ್ಮಕ ಕಾಲೇಜಿನಲ್ಲಿ ಕಳೆದ ತಿಂಗಳು ಪ್ರಕರಣ ನಡೆದಿತ್ತು. ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಸಂತ್ರಸ್ತೆ ಕೊಯಮತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

No Two-Finger Test Conducted On Coimbatore Rape Survivor: IAF Chief

ಈ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೊಯಮತ್ತೂರ್ ಪೊಲೀಸರು ತಿಳಿಸಿದ್ದರು. ಸಂತ್ರಸ್ತೆ ದೂರಿನಲ್ಲಿ ಸೆಪ್ಟೆಂಬರ್ 10ರಂದು ಕ್ರೀಡೆಯೊಂದರಲ್ಲಿ ಭಾಗವಹಿಸಿದ್ದಾಗ ಬಿದ್ದು ಗಾಯವಾಗಿತ್ತು. ಔಷದ ತೆಗೆದುಕೊಂಡು ಮಲಗಿದ್ದೆ. ಆದರೆ ಮಧ್ಯರಾತ್ರಿ ನನಗೆ ಎಚ್ಚರವಾದಾಗ ನನ್ನ ಮೇಲೆ ಅತ್ಯಾಚಾರ ಆಗಿದ್ದು ಗೊತ್ತಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸದ್ಯ ಪ್ರಕರಣದ ಆರೋಪಿಯಾಗಿರುವ ಅಮರಿಂದರ್ ಅವರನ್ನು ನ್ಯಾಯಾಧೀಶರ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಲೆಫ್ಟಿನೆಂಟ್​ ಅಧಿಕಾರಿ ತಮಿಳುನಾಡಿನ ಕೊಯಮತ್ತೂರ್​​ನಲ್ಲಿರುವ ರೆಡ್​ಫೀಲ್ಡ್​ ಏರ್​ ಫೋರ್ಸ್​​ ಕಾಲೇಜಿನವರು. ಸದ್ಯ ಇವರನ್ನು ಉದುಮಲಪೇಟ್​ ಜೈಲಿಗೆ ಹಾಕಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಕೊಯಮತ್ತೂರ್​ ಪೊಲೀಸರು ತಿಳಿಸಿದ್ದಾರೆ.

ಅದಾದ ನಂತರ ಕೊಯಮತ್ತೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಮಹಿಳಾ ಅಧಿಕಾರಿ, ಲೆಫ್ಟಿನೆಂಟ್​​ ವಿಚಾರಣೆಯನ್ನು ಐಎಎಫ್​ ಹಿರಿಯ ಅಧಿಕಾರಿಗಳು ಮಾಡಿದ್ದಾರೆ. ಆದರೆ ನನಗೆ ಅದು ತೃಪ್ತಿ ತಂದಿಲ್ಲ ಎಂದು ಹೇಳಿದ್ದಾರೆ.

ಅತ್ಯಾಚಾರಕ್ಕೆ ಒಳಗಾದ ಮಹಿಳಾ ಅಧಿಕಾರಿಗೆ 29 ವರ್ಷ ವಯಸ್ಸಾಗಿದೆ. ಇವರು ಕೊಯಮತ್ತೂರಿನ ಏರ್​ಫೋರ್ಸ್​ ಕಾಲೇಜಿನ ವಸತಿ ಸೌಲಭ್ಯದಲ್ಲಿಯೇ ವಾಸವಾಗಿದ್ದರು.
ಇಲ್ಲಿ ಒಟ್ಟು 30 ಅಧಿಕಾರಿಗಳು ಕಳೆದ ತಿಂಗಳಿಂದಲೂ ಇಲ್ಲಿ ತರಬೇತಿಯಲ್ಲಿದ್ದಾರೆ. ತಮ್ಮ ಮೇಲೆ ಅತ್ಯಾಚಾರ ನಡೆದ ಘಟನೆ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ವಿಚಾರಣೆ ರಕ್ಷಣಾ ನ್ಯಾಯಾಲಯದಲ್ಲೇ ನಡೆಯಬೇಕು ಎಂದೂ ಹೇಳಿದ್ದಾರೆ. ಇದಕ್ಕೆ ಪ್ರತಿ ಅಫಿಡಿವಿಟ್​ ಸಲ್ಲಿಸಲು ಕಾಲಾವಕಾಶ ಕೊಡುವಂತೆ ಕೊಯಮತ್ತೂರು ಪೊಲೀಸರು ನ್ಯಾಯಾಧೀಶರ ಬಳಿ ಮನವಿ ಮಾಡಿದ್ದಾರೆ.

ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಫ್ಲೈಟ್ ಲೆಫ್ಟಿನೆಂಟ್​ ಅಮರಿಂದರ್​ ಅವರನ್ನು ನ್ಯಾಯಾಧೀಶರ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು.

ಇವರು ಚತ್ತೀಸ್​ಗಡ್​ನವರೆಂದು ಹೇಳಲಾಗಿದೆ. ಇನ್ನು ಲೆಫ್ಟಿನೆಂಟ್​ ವಿರುದ್ಧ ತನಿಖೆ ನಡೆಸಲು ಕೊಯಮತ್ತೂರ್​ ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ ಎಂದು ಅಮರಿಂದರ್ ಪರ ವಕೀಲರು ನ್ಯಾಯಾಧೀಶರಿಗೆ ವರದಿ ಸಲ್ಲಿಸಿದ್ದಾರೆ.

ಎರಡು ಬೆರಳಿನ ಪರೀಕ್ಷೆಯನ್ನು ಮಾಡಲಾಗಿಲ್ಲ. ವಿಚಾರಣೆಯ ವರದಿಯ ಆಧಾರದ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಐಎಎಫ್ ಮುಖ್ಯಸ್ಥರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಆರೋಪಿ 29 ವರ್ಷದ ಫ್ಲೈಟ್ ಲೆಫ್ಟಿನೆಂಟ್ ಅವರನ್ನು ಕೋರ್ಟ್ ಮಾರ್ಷಲ್ ಆಕ್ಟ್ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು. ತಮಿಳುನಾಡಿನ ಕೊಯಮತ್ತೂರಿನ ನ್ಯಾಯಾಲಯವು ಗುರುವಾರ ಈ ಪ್ರಕರಣವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.

ಸೆಪ್ಟೆಂಬರ್ 11 ರಂದು ಅವಳಿಗೆ ಎರಡು ಆಯ್ಕೆಗಳನ್ನು ನೀಡಿದ ಇಬ್ಬರು ಅಧಿಕಾರಿಗಳನ್ನು ಭೇಟಿಯಾಗಲು ಹೇಳಲಾಯಿತು.ಒಂದೋ ದೂರು ದಾಖಲಿಸಿ, ಅಥವಾ ಎಲ್ಲವೂ ಒಪ್ಪಿಗೆಯಿಂದ ನಡೆದದ್ದು ಎಂದು ಲಿಖಿತ ಹೇಳಿಕೆ ನೀಡಿ ಎಂಬ ಎರಡು ಆಯ್ಕೆ ನೀಡಿ ವಾಯುಪಡೆ ಆಸ್ಪತ್ರೆಗೆ ಹೋಗುವಂತೆ ಸಂತ್ರಸ್ತೆಗೆ ನಿರ್ದೇಶಿಸಲಾಯಿತು.

ಆಕೆಯ ಸ್ನೇಹಿತರು ಅವಳ ಜೊತೆಗಿದ್ದರು, ಮತ್ತು ವೈದ್ಯರು ತಪ್ಪೊಪ್ಪಿಗೆ ವಿಡಿಯೊವನ್ನು ನೋಡಲು ಬಯಸಿದ್ದರು. ಅವರು ಸಂತ್ರಸ್ತೆಗೆ ಆಕೆಯ ಲೈಂಗಿಕ ಇತಿಹಾಸದ ಬಗ್ಗೆ ಕೇಳಿದರು ಮತ್ತು ಆಕೆಯ ಖಾಸಗಿ ಭಾಗಗಳನ್ನು ದೈಹಿಕವಾಗಿ ಪರೀಕ್ಷಿಸಿದರು.

English summary
Indian Air Force's Air Chief Marshal V R Chaudhari on Tuesday clarified that no two-finger test was conducted done on a woman officer who was allegedly raped at a training academy in Coimbatore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X