• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಲ್ಲಪೆರಿಯಾರ್‌ ಜಲಾಶಯದಿಂದ ಅಪಾಯವಿಲ್ಲ: ಪಳನಿಸ್ವಾಮಿ

By Nayana
|

ಚೆನ್ನೈ, ಆಗಸ್ಟ್‌ 17: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಪತ್ರಬರೆದಿದ್ದು ಮುಲ್ಲಪೆರಿಯಾರ್‌ ಜಲಾಶಯದಿಂದ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಲ್ಲಪೆರಿಯಾರ್‌ ಜಲಾಶಯದಲ್ಲಿ ನಿಗದಿಯಂತೆ 142 ಅಡಿಗಳಷ್ಟು ಮಾತ್ರ ನೀರು ಸಂಗ್ರಹಿಸಿದ್ದು, ಸುಪ್ರೀಂಕೋರ್ಟ್‌ ಆದೇಶದ ಅನುಸಾರ ನಿಯಮಗಳನ್ನು ಪಾಲಿಸಲಾಗಿದೆ. ಹೀಗಾಗಿ ಯಾವುದೇ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಆರ್‌ಎಸ್‌ನಿಂದ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ: ನದಿ ತೀರದ ಜನರಿಗೆ ಎಚ್ಚರಿಕೆ

2014ರ ಮೇ 7 ರಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶದಂತೆ ಮುಲ್ಲಪೆರಿಯಾರ್ ಜಲಾಶಯವನ್ನು ಜಲವಿದ್ಯುತ್‌ ಹಾಗೂ ಇನ್ನಿತರೆ ಉದ್ದೇಶಗಳಿಗಾಗಿ ಬಳಸಬೇಕಾಕಾಗಬಹುದಾದ ನೀರನ್ನು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಹಲವಾರು ತಜ್ಞರು ಜಲಾಶಯದ ಭದ್ರತೆ ಹಾಗೂ ಸುರಕ್ಷತೆ ಕುರಿತಂತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಲಾಶಯವು ಎಲ್ಲಾ ರೀತಿಯಲ್ಲೂ ಸದೃಢವಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಪಳನಿಸ್ವಾಮಿ ಕೇರಳ ಮುಖ್ಯಮಂತ್ರಿಗೆ ಧೈರ್ಯ ತುಂಬಿದ್ದಾರೆ.

ಈ ಮೊದಲು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದ ಪಿಣರಾಯಿ ವಿಜಯನ್‌ ಮುಲ್ಲಪೆರಿಯಾರ್‌ ಜಲಾಶಯದ ಭದ್ರತೆ ಕುರಿತಂತೆ ಆತಂಕ ವ್ಯಕ್ತಪಡಿಸಿ 142 ಅಡಿಗಳಷ್ಟು ನೀರು ಸಂಗ್ರಹಿಸಿರುವ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದರಲ್ಲದೆ, ಕೇವಲ 139ರಷ್ಟು ಅಡಿಗಳು ಮಾತ್ರ ನೀರು ಸಂಗ್ರಹಿಸುವಂತೆ ಕೋರಿದ್ದರು.

ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ

ಇದಕ್ಕೆ ಪ್ರತಿಯಾಗಿ ಉತ್ತರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಸುಪ್ರೀಂಕೋರ್ಟ್ ನೇಮಕ ಮಾಡಿರುವ ಮೇಲುಸ್ತವಾರಿ ಸಮಿತಿ ಆಗಸ್ಟ್ 4ರಂದು ಭೇಟಿ ನೀಡಿ ಜಲಾಶಯದ ಪರಿಶೀಲನೆ ನಡೆಸಿದ್ದು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಸುಪ್ರೀಂಕೋರ್ಟ್‌ ಅನುಸಾರ ನೇಮಕಗೊಂಡಿರುವ ಮೇಲುಸ್ತುವಾರಿ ಸಮಿತಿಯ ಹೇಳಿಕೆಯಿಂದಾಗಿ ತಮಿಳುನಾಡು ಸರ್ಕಾರ ಕೂಡ ನನಿರಾತಂಕವಾಗಿದೆ. ಕೇರಳ ಸರ್ಕಾರ ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ಕೇರಳ ಸರ್ಕಾರದ ಅಧಿಕಾರಿಗಳಿಗೂ ಕೂಡ ತಮಿಳುನಾಡು ಸರ್ಕಾರ ಪರಿಶೀಲನೆಗೆ ಅನುಮತಿ ನೀಡುತ್ತಿಲ್ಲ ಎಂಬ ಕೇರಳದ ವಾದವನ್ನು ತಳ್ಳಿ ಹಾಕಿರುವ ಪಳನಿಸ್ವಾಮಿ ತಮಿಳುಣಾಡು ಸರ್ಕಾರ ಕೇರಳದಲ್ಲಿ ಆಗುತ್ತಿರುವ ಮಳೆಯ ಪ್ರಮಾಣ ಕುರಿತಂತೆ ಮಾಹಿತಿ ಕೊಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಉಕ್ಕಿ ಹರಿದ ನದಿಗಳು: ಬಹು ಭಾಗ ರಸ್ತೆ ಸಂಪರ್ಕ ಕಡಿತ

ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಕೇರಳ ಸರ್ಕಾರದ ವಿದ್ಯುತ್‌ ನಿಗಮವು ವಿದ್ಯುತ್‌ ಪೂರೈಕೆಗಾಗಿ ಪಾವತಿಸಿರುವ 1.65 ಕೋಟಿ ಹಣವನ್ನು ಪಡೆದೂ ಕೂಡ ಕೇರಳ ಸರ್ಕಾರ ವಿದ್ಯುತ್‌ ಒದಗಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಹಾವಕ್ಕೆ ಸಿಲುಕಿರುವ ಕೇರಳದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮುಲ್ಲಪೆರಿಯಾರ್ ಜಲಾಶಯದ ನೀರು ಸಂಗ್ರಹ ಮಟ್ಟವನ್ನು 3 ಅಡಿಗಳಷ್ಟು ಕಡಿಮೆ ಮಾಡಲು ಸೂಚನೆ ನೀಡಿದೆ. ಮುಲ್ಲಪೆರಿಯಾರ್ ಜಲಾಶಯದ ವಿಪತ್ತು ನಿರ್ವಹಣಾ ಉಪಸಮಿತಿಗೆ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ. ಸುಮಾರು 142 ಅಡಿ ಇರುವ ಜಲಾಶಯವನ್ನು 139 ಅಡಿಗಳಿಗೆ ಇಳಿಸುವುದನ್ನು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾ. ಶುಕ್ರವಾರ ಮಲ್ಹೋತ್ರ ಅವರಿದ್ದ ವಿಭಾಗೀಯ ಪೀಠ ಕೇರಳದ ಪ್ರವಾಹ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದೊಂದಿಗೆ ಉಪಸಮಿತಿ ನಡೆ ನಾಳೆ ಸಭೆ ನಡೆಸಬೇಕು, ತಮಿಳುನಾಡು, ಕೇರಳ ರಾಜ್ಯದ ಮುಖ್ಯಕಾರ್ಯದರ್ಶಿಗಳೂ ಭಾಗಿಯಾಗಿರಬೇಕೆಂದು ಹೇಳಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil Nadu Chief Minister Edappadi K Palanisamy has written to Kerala Chief Minister Pinarayi Vijayan assuring that there was no threat to the safety of the Mullaperiyar Dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more