ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯದಲ್ಲಿ ಹೊರಗಿನವರೆಂಬುದೇ ಇಲ್ಲ; ಕಮಲ್ ಹಾಸನ್

|
Google Oneindia Kannada News

ಚೆನ್ನೈ, ಮಾರ್ಚ್ 22: ರಾಜಕೀಯದಲ್ಲಿ ಹೊರಗಿನವರು ಎಂಬುದಿಲ್ಲ. ಇಲ್ಲಿ ಇರುವುದು ಭಾರತೀಯ ಎಂಬುದಷ್ಟೆ ಎಂದು ನಟ ಹಾಗೂ ಮಕ್ಕಳನೀದಿ ಮಯ್ಯಂ ಪಕ್ಷದ ಮುಖಂಡ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧಿಸಲಿದ್ದು, ತಮ್ಮ ಪ್ರತಿಸ್ಪರ್ಧಿ, ಬಿಜೆಪಿಯ ವನತಿ ಶ್ರೀನಿವಾಸನ್ ಅವರಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.

 ಗೃಹಿಣಿಯರಿಗೆ ಆದಾಯ ಭರವಸೆ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಮಲ್ ಹಾಸನ್ ಗೃಹಿಣಿಯರಿಗೆ ಆದಾಯ ಭರವಸೆ; ಪ್ರಣಾಳಿಕೆ ಬಿಡುಗಡೆ ಮಾಡಿದ ಕಮಲ್ ಹಾಸನ್

ಈಚೆಗೆ ಚುನಾವಣಾ ಪ್ರಚಾರದ ವೇಳೆ ಕಮಲ್ ಹಾಸನ್ ಅವರಿಗೆ ಸಣ್ಣ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೇಗ ಗುಣಮುಖರಾಗುವಂತೆ ಹಾರೈಸಿ ಶನಿವಾರ ವನತಿ ಶ್ರೀನಿವಾಸನ್ ಅವರು ಹೂಗುಚ್ಛ ಕಳುಹಿಸಿದ್ದರು.

No Outsider In Politics Said Kamal Haasan On BJP Candidate

ಪ್ರಿಯ ಸೋದರ ಎಂದು ಉಲ್ಲೇಖಿಸಿ, "ಕಮಲ್ ಹಾಸನ್ ಅವರ ಕಾಲಿಗೆ ಗಾಯವಾಗಿರುವುದು ತಿಳಿದುಬಂತು. ಬೇಗ ಗುಣಮುಖರಾಗಲಿ ಎಂದು ಹಾರೈಸಿ ಹೂಗುಚ್ಛ ಕಳುಹಿಸುತ್ತಿದ್ದೇನೆ. ನಮ್ಮ ಅತಿಥಿಗಳನ್ನು ಸತ್ಕರಿಸುವುದು, ಅವರ ಕಾಳಜಿ ವಹಿಸುವುದು ನಮ್ಮ ಸಂಪ್ರದಾಯ. ಅವರು ನಮ್ಮ ಅತಿಥಿಯಾದ ಕಾರಣ ಅವರ ಆರೋಗ್ಯ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದೇನೆ" ಎಂದು ಹೇಳಿದ್ದರು.

"ಅತಿಥಿ ಕಾಳಜಿ ವಹಿಸುವುದು" ಎಂಬ ಹೇಳಿಕೆಗೆ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, "ರಾಜಕೀಯದಲ್ಲಿ ಈ ತರ್ಕ ಸರಿಯಲ್ಲ. ಇಲ್ಲಿ ಹೊರಗಿನವರು ಎಂಬುದು ಇಲ್ಲ. ಭಾರತೀಯ ಭಾರತೀಯ ಅಷ್ಟೆ. ಗಾಂಧಿ ಅವರು ಗುಜರಾತ್‌ನವರು. ಆದರೆ ಅವರು ನನ್ನ ತಂದೆಯೂ ಹೌದು" ಎಂದರು.

ಎಐಎಡಿಎಂಕೆ ಹಾಗೂ ಡಿಎಂಕೆ ನಂಬಿಕಾರ್ಹವಲ್ಲ ಎಂದು ಹೇಳಿದ್ದ ಕಮಲ್ ಹಾಸನ್ ವಿರುದ್ಧ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. "ನಾನು ಕಮಲ್ ಹಾಸನ್ ಬಗ್ಗೆ ಮಾತನಾಡುವುದಿಲ್ಲ. ಅವರನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ" ಎಂದಿದ್ದರು.

English summary
‘No outsider in politics’: Kamal Haasan on BJP candidate Vanathi Srinivasan's 'guest of Coimbatore' remark,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X