ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾದಿ ಮುಹಮ್ಮದ್ ವಿರುದ್ಧ ಹೇಳಿಕೆ: ಕೈಲಾಸದಿಂದ ಬಂತು ಸಂದೇಶ

|
Google Oneindia Kannada News

ಚೆನ್ನೈ ಜೂನ್ 7: ತನ್ನ ಹೇಳಿಕೆ ಮೂಲಕ ಸದಾ ಸುದ್ದಿಯಲ್ಲಿರುವ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿಗಳು ಸದ್ಯ ಮತ್ತೊಂದು ಸಂದೇಶ ಕಳುಹಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಬಾರಿ ನಿತ್ಯಾನಂದ ಹೇಳಿಕೆ ನೀಡಿದ್ದು ತನ್ನ ಬಗ್ಗೆ ಅಲ್ಲ ಅಥವ ತನ್ನ ಭಕ್ತರ ಬಗ್ಗೆ ಕೂಡ ಅಲ್ಲ. ಬದಲಿಗೆ ಅವರು ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ಅದು ರಾಜಕೀಯಕ್ಕೆ ಸಂಬಂಧಿಸಿದ ಕೈಲಾಸದಿಂದ ಬಂದ ಸಂದೇಶ. ಆಶ್ಚರ್ಯ ಅನಿಸಿದರೂ ಇದು ನಿಜ.

ಮುಸ್ಲಿಂ ಸಮುದಾಯದ ವಿರುದ್ಧ ನೀಡಲಾಗುತ್ತಿರುವ ಹೇಳಿಕೆಗಳನ್ನು ಕೈಲಾಸದಲ್ಲಿರುವ ನಿತ್ಯಾನಂದ ವಿರೋಧಿಸಿದ್ದಾರೆ. ಸಮುದಾಯದ ವಿರುದ್ಧ ನೀಡಲಾಗುತ್ತಿರುವ ಹೇಳಿಕೆಗಳನ್ನು ಕೊನೆಗೊಳಿಸಲು ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಭಾರತ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. 'ಇದು ಬದನೆಕಾಯಿ ತಿಂದು ಶಾಸ್ತ್ರ ಹೇಳಿದಂತೆ'. ಅತ್ಯಾಚಾರದ ಪ್ರಕರಣದಲ್ಲಿ ಸಿಲುಕಿರುವ ಹಾಗೂ ಖಾಕಿ ಕೈಯಿಂದ ತಪ್ಪಿಸಿಕೊಂಡು ಕೈಲಾಸದಲ್ಲಿ ನೆಲೆಯೂರಿರುವ ನಿತ್ಯಾನಂದ ಈ ಮಾತನ್ನು ಹೇಳಿದ್ದಾರೆ.

ಮತ್ತೆ ಬರುತ್ತೇನೆ.. ಆಕ್ಷನ್ ಎಂಟ್ರಿ..: ನಿತ್ಯಾನಂದ ಘೋಷಣೆಮತ್ತೆ ಬರುತ್ತೇನೆ.. ಆಕ್ಷನ್ ಎಂಟ್ರಿ..: ನಿತ್ಯಾನಂದ ಘೋಷಣೆ

ಇತ್ತೀಚೆಗೆ ಬಿಜೆಪಿ ವಕ್ತಾರೆ ಆಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ನಿತ್ಯಾನಂದನಿಂದ ಈ ಸಂದೇಶ ಬಂದಿದೆ. ಜೊತೆಗೆ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಆಡಳಿತ ಪಕ್ಷದ ನಿರ್ಧಾರವನ್ನು ನಿತ್ಯಾನಂದ ಕೈಲಾಸದಿಂದ ಸ್ವಾಗತಿಸಿದ್ದಾರೆ. 'ಭಾರತೀಯ ರಾಜಕಾರಣಿಗಳ ಮಾನಹಾನಿಕರ ಹೇಳಿಕೆಗಳನ್ನು ಕೈಲಾಸ ಬಲವಾಗಿ ಖಂಡಿಸುತ್ತದೆ. ಪ್ರವಾದಿ ಮುಹಮ್ಮದ್ ವಿರುದ್ಧ ಭಾರತೀಯ ರಾಜಕಾರಣಿಗಳ ಅವಹೇಳನಕಾರಿ ಹೇಳಿಕೆಗಳನ್ನು ಕೈಲಾಸ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ' ಎಂದು ಹೇಳಿದ್ದಾರೆ.

Nityananda Swamy Statement on Prophet Muhammad Controversy

ಈ ಪೋಸ್ಟ್‌ನಿಂದಾಗಿ ತಮ್ಮದೇ ಕೈಲಾಸ ದೇಶ ಸೃಷ್ಟಿಸಿ, ಅಲ್ಲಿ ತಮ್ಮದೇ ರಿಸರ್ವ್ ಬ್ಯಾಂಕ್, ಕರೆನ್ಸಿ ಹೊಂದಿರೋ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮೀಜಿ ಮತ್ತೆ ಸುದ್ದಿಯಾಗಿದ್ದಾರೆ. ಮೊನ್ನೆಯಷ್ಟೇ 'ನಾನು ಮತ್ತೆ ಬರುತ್ತೇನೆ' ಎಂದು ನಿತ್ಯಾನಂದ ಘೋಷಣೆ ಮಾಡಿದ್ದರು. ಇದರಿಂದ ನಿತ್ಯಾನಂದ ಭಕ್ತರು ಸಂತಸಗೊಂಡಿದ್ದರು.

Nityananda Swamy Statement on Prophet Muhammad Controversy

ನಿತ್ಯಾನಂದ ಬೆಂಗಳೂರು ಸಮೀಪದ ಬಿಡದಿಯಲ್ಲಿ ಆಶ್ರಮ ಸ್ಥಾಪಿಸಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆಶ್ರಮದಲ್ಲಿ ಮಹಿಳಾ ಶಿಷ್ಯೆಯರನ್ನು ಬಲವಂತವಾಗಿ ಬಂಧಿಸಿ ಅತ್ಯಾಚಾರ ಎಸಗಿರುವುದು ಸೇರಿದಂತೆ ಹಲವಾರು ಆರೋಪಗಳು, ದೂರುಗಳು ಅವರ ಮೇಲಿದ್ದವು. ಪೊಲೀಸರಿಗೆ ಬೇಕಾಗಿದ್ದ ನಿತ್ಯಾನಂದ ಕೈಲಾಸ ವೆಬ್ ಸೈಟ್‌ನಲ್ಲಿ ಕಾಣಿಸಿಕೊಂಡು ಪ್ರತ್ಯೇಕ ದ್ವೀಪ ದೇಶ ಖರೀದಿಸಿ ನೆಲೆಸಿರುವುದಾಗಿ ಪ್ರಕಟಿಸಿದ್ದಾನೆ.

(ಒನ್ಇಂಡಿಯಾ ಸುದ್ದಿ)

Recommended Video

ಬೆಳಗಾವಿಯಲ್ಲಿ ಶಿಕ್ಷಕನಿಗೆ ಬಿತ್ತು ಗೂಸಾ, ಕಾರಣ | Oneindia Kannada

English summary
Nithyananda Swamy denounces the statement against the Prophet Muhammad. He has called for peace in society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X