ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ ನಂಟು ಶಂಕೆ: ತಮಿಳುನಾಡಿನ ಐದು ಕಡೆ ಎನ್‌ಐಎ ದಾಳಿ

|
Google Oneindia Kannada News

ಚೆನ್ನೈ, ಆಗಸ್ಟ್ 29: ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಗುರುವಾರ ಬೆಳಗಿನ ಜಾವ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಐದು ಕಡೆ ದಾಳಿ ನಡೆಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಎನ್‌ಐ ತನಿಖಾ ತಂಡವು ಪರಿಶೀಲನೆ ನಡೆಸಿತು.

ಉಗ್ರರನ್ನು ಹಣಿಯಲು ಎನ್‌ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿಉಗ್ರರನ್ನು ಹಣಿಯಲು ಎನ್‌ಐಎಗೆ ಬಲ: ಮಸೂದೆ ಅಂಗೀಕಾರ, ಲೋಕಸಭೆಯಲ್ಲಿ ಜಟಾಪಟಿ

ದಾಳಿ ನಡೆಸಿದ ಸ್ಥಳಗಳಲ್ಲಿ ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು ಮತ್ತು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಐಎ ಮತ್ತು ತಮಿಳುನಾಡು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

NIA Raids On Five Places in Tamil Nadu

ಜುಲೈನಲ್ಲಿ ಕೂಡ ದಾಳಿ ನಡೆಸಿದ್ದ ಎನ್‌ಐಎ, ಭಾರತದಲ್ಲಿ ದಾಳಿಯ ಸಂಚು ರೂಪಿಸುತ್ತಿದ್ದ ತಂಡವನ್ನು ಬಂಧಿಸಿತ್ತು. ಐಎಸ್‌ಗಾಗಿ ಹಣ ಸಂಗ್ರಹಿಸುತ್ತಿದ್ದ ಆರೋಪದಲ್ಲಿ 14 ವ್ಯಕ್ತಿಗಳ ಮನೆಗಳ ಮೇಲೆ ಐಎನ್‌ಎ ದಾಳಿ ನಡೆಸಿತ್ತು. ಭಾರತದಲ್ಲಿ ದಾಳಿಗಳನ್ನು ನಡೆಸಿ ಇಸ್ಲಾಮಿಕ್ ಆಡಳಿತವನ್ನು ಹೇರುವಂತೆ ಮಾಡುವುದು ಐಎಸ್ ಸಂಘಟನೆ ಉದ್ದೇಶವಾಗಿದೆ.

ಚಿಕ್ಕಬಾಣಾವರದ ಮನೆಯಲ್ಲಿ ಊಟದ ಡಬ್ಬಿಗಳಲ್ಲೂ ಬಾಂಬ್ ಇಟ್ಟಿದ್ದ ಉಗ್ರರುಚಿಕ್ಕಬಾಣಾವರದ ಮನೆಯಲ್ಲಿ ಊಟದ ಡಬ್ಬಿಗಳಲ್ಲೂ ಬಾಂಬ್ ಇಟ್ಟಿದ್ದ ಉಗ್ರರು

ಭಾರತದಲ್ಲಿ ದಾಳಿ ನಡೆಸಲು ಐಎಸ್ ಪರ ಯುಎಇಯಲ್ಲಿ ಕುಳಿತು ಚಟುವಟಿಕೆಗಳನ್ನು ನಡೆಸುತ್ತಿದ್ದ 14 ಮಂದಿಯನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಈ ವ್ಯಕ್ತಿಗಳಿಗೆ ಸೇರಿದ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.

English summary
National Investigation Agency (INA) on Thursday conducted raids at 5 locations in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X