ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ವಾಯುಭಾರ ಕುಸಿತ, ನಿವಾರ್ ಪರಿಣಾಮ ಮತ್ತೆ ಮಳೆ

|
Google Oneindia Kannada News

ಚೆನ್ನೈ, ನ. 29: ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾಸಾಗರದಲ್ಲಿ ಮತ್ತೊಮ್ಮೆ ಹೊಸದಾಗಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ತಮಿಳುನಾಡು ರಾಜ್ಯದಲ್ಲಿ ಇನ್ನು ನಾಲ್ಕು ದಿನ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿವಾರ್ ಚಂಡಮಾರತವು ಭೂಸ್ಪರ್ಶವಾದ ಚಂಡಮಾರುತ ದುರ್ಬಲಗೊಳ್ಳದ ಕಾರಣ ಮತ್ತೊಂದು ವಾಯುಭಾರಕುಸಿತ ಉಂಟಾಗಿದೆ ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿಸೆಂಬರ್ 1 ರಿಂದ 3 ರ ತನಕ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.

ಕರ್ನಾಟಕ; ಮತ್ತೆ ನಿವಾರ್ ಅಬ್ಬರ, ಡಿಸೆಂಬರ್ 1ರಿಂದ ಮಳೆಕರ್ನಾಟಕ; ಮತ್ತೆ ನಿವಾರ್ ಅಬ್ಬರ, ಡಿಸೆಂಬರ್ 1ರಿಂದ ಮಳೆ

ತಮಿಳುನಾಡಿನ ಕರಾವಳಿ ಭಾಗದಲ್ಲಿ ಗಾಳಿ ಮಳೆ ಹಾಗೂ ಇತರೆಡೆ ಸಾಧಾರಣ ಮಳೆ ಸಂಭವಿಸಲಿದೆ. ತಮಿಳುನಾಡು, ಪುದುಚೇರಿ, ಕಾರಕ್ಕೈಲ್ ಕರಾವಳಿಯಲ್ಲಿ ಡಿಸೆಂಬರ್ 2 ಹಾಗೂ 3 ರಂದು ಹೆಚ್ಚಿನ ಮಳೆ ಸುರಿಯಲಿದೆ ಎಂದು ವರದಿ ಬಂದಿದೆ.

New low-pressure area in Bay of Bengal to cause Rains in TN

ಪುದುಚ್ಚೇರಿಯಿಂದ 30 ಕಿ.ಮೀ ದೂರ ಉತ್ತರ ಕರಾವಳಿಯಲ್ಲಿ ನಿವಾರ್ ಕ್ಷೀಣಿಸಿತ್ತು, ನವೆಂಬರ್ 26ರಿಂದ ಮಳೆ ಪ್ರಮಾಣ ತಗ್ಗಿತ್ತು. ಆದರೆ, ನಗರ ಪ್ರದೇಶಗಳಲ್ಲಿ ಹಲವೆಡೆ ನೀರು ನಿಂತಿದ್ದು, ನದಿಗಳು ತುಂಬಿ ತುಳುಕುತ್ತಿವೆ. ಚೆನ್ನೈ, ವೆಲ್ಲೂರು, ರಾಣಿಪೇಟ್, ತಿರುವಣ್ಣಾಮಲೈ, ಕಡಲೂರು ಹಾಗೂ ವಿಲ್ಲುಪುರಂನಲ್ಲಿ ಮತ್ತೆ ಮಳೆಯಾಗಲಿದೆ.

ಐದು ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳಲ್ಲಿ ಸದ್ಯಕ್ಕೆ ನೆಲೆಸುವಂತೆ ಸೂಚಿಸಲಾಗಿದೆ. ನಿವಾರ್ ಚಂಡಮಾರುತದಿಂದ ಲಕ್ಷಾಂತರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಆದರೂ, ಐದು ಮಂದಿ ಬಲಿಯಾಗಿ, 2000ಕ್ಕೂ ಅಧಿಕ ಮರಗಳು ನೆಲಕ್ಕುರುಳಿತ್ತು. ನಿವಾರ್ ದಾಳಿಯಿಂದ ಸುಧಾರಿಸಿಕೊಳ್ಳುವ ಹೊತ್ತಿಗೆ ಮತ್ತೊಮ್ಮೆ ಗಾಳಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

English summary
A new low-pressure area in Bay of Bengal and Indian ocean will bring heavy rains to Tamil Nadu between December 1 and 3, as per the latest update from the India Meteorological Department (IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X