ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಬರೆದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಶುಭ ಸುದ್ದಿ!

By Mahesh
|
Google Oneindia Kannada News

ಮದುರೈ, ಜುಲೈ 11: ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (NEET)ಯನ್ನು ತಮಿಳು ಮಾಧ್ಯಮದಲ್ಲಿ ಬರೆದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವಂತೆ ಸಿಬಿಎಸ್ ಇಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.

ಕೋರ್ಟ್ ಸೂಚನೆಯಂತೆ 24 ಸಾವಿರ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ಸಿಬಿಎಸ್ ಇ ನೀಡಬೇಕಿದೆ. 720 ಅಂಕಗಳಿಗೆ ಪರೀಕ್ಷೆ ಬರೆದಿದ್ದರು.

ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್

ಎಂಬಿಬಿಎಸ್ ಮತ್ತು ಬಿಡಿಎಸ್ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ವ್ಯವಸ್ಥೆಯಲ್ಲಿ ವ್ಯತ್ಯಯಗೊಳ್ಳಲಿದೆ. ಹೀಗಾಗಿ, ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ. ಜತೆಗೆ ಹೊಸ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಸಿಬಿಎಸ್‌ಇಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.

NEET 2018: CBSE To Award Tamil Nadu Candidates 196 Extra Marks

ಕೃಪಾಂಕ ನೀಡುತ್ತಿರುವುದೇಕೆ?: ಒಟ್ಟು 196 ಅಂಕದ 49 ಪ್ರಶ್ನೆಗಳು ತಪ್ಪಾಗಿ ಭಾಷಾಂತರಗೊಂಡಿತ್ತು ಹಾಗೂ ನಿಖರವಾಗಿರಲಿಲ್ಲ. ಹೀಗಾಗಿ, ಸಿಬಿಎಸ್‌ಇಯನ್ನು ಹೊಣೆ ಮಾಡಲಾಗಿದೆ.

ನ್ಯಾಯಮೂರ್ತಿಗಳಾದ ಸಿ.ಟಿ.ಸೆಲ್ವಂ ಹಾಗೂ ಎ.ಎಂ.ಬಶೀರ್ ಅಹ್ಮದ್ ಅವರನ್ನೊಳಗೊಂಡ ನ್ಯಾಯಪೀಠ, "ಅಭ್ಯರ್ಥಿಗಳ ಪಟ್ಟಿಯನ್ನು ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಹೊಸದಾಗಿ ಪ್ರಕಟಿಸಬೇಕು" ಎಂದು ಸೂಚಿಸಿದೆ.

ತಮಿಳು ಮಾಧ್ಯಮದಲ್ಲಿ ನೀಟ್ ಪರೀಕ್ಷೆ ಬರೆದ ಬಹುತೇಕ ಎಲ್ಲ 24 ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್/ಬಿಡಿಎಸ್‌ಗೆ ಅರ್ಹತೆ ಪಡೆಯಲಿದ್ದಾರೆ.

English summary
The Madras High Court, today, ordered the Central Board of Secondary Examination (CBSE) to award 196 marks to NEET candidates from Tamil Nadu citing the wrong translation of questions in the question paper. Around 24000 candidates in Tamil Nadu will benefit from this decision. The paper was for a total of 720.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X