ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರಿಗೆ ಮತಬ್ಯಾಂಕ್ ರಾಜಕಾರಣ ಬೇಕಿಲ್ಲ, ಅಭಿವೃದ್ಧಿ ಬೇಕು: ಮೋದಿ

|
Google Oneindia Kannada News

ಕನ್ಯಾಕುಮಾರಿ, ಮಾರ್ಚ್ 01: ಕನ್ಯಾಕುಮಾರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನರೇಂದ್ರ ಮೋದಿ ಅವರು ಮಾಡಿದರು. ರಸ್ತೆಗಳು, ರೈಲ್ವೆ ಹಳಿ, ಹೈವೇ ಯೋಜನೆಗಳಿಗೆ ಮೋದಿ ಅಡಿಗಲ್ಲು ಹಾಕಿದರು.

ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಜಯಲಲಿತಾ ಅವರು ಮಾಡಿದ ಅತ್ಯುತ್ತಮ ಜನಪರ ಕಾರ್ಯಗಳನ್ನು ಈಗಿನ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ಅತ್ತ ಗಡಿಯಲ್ಲಿ ಪರದಾಟ, ಇತ್ತ ಮೋದಿ ಪ್ರಚಾರ: ಟ್ವಿಟ್ಟರ್ ನಲ್ಲಿ ಲೇವಡಿ ಅತ್ತ ಗಡಿಯಲ್ಲಿ ಪರದಾಟ, ಇತ್ತ ಮೋದಿ ಪ್ರಚಾರ: ಟ್ವಿಟ್ಟರ್ ನಲ್ಲಿ ಲೇವಡಿ

ಮೊದಲ ಮಹಿಳಾ ರಕ್ಷಣಾ ಸಚಿವೆ ತಮಿಳುನಾಡಿನವರು, ಅಷ್ಟೆ ಅಲ್ಲ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ತಮಿಳುನಾಡಿನವರು ಎಂದು ಮೋದಿ ಹೇಳಿದರು.

 Narendra Modi put foundation stone to many development programs in Tamilnadu

ಕಾಂಗ್ರೆಸ್‌ನವರು ಈವರೆಗೂ ಕೃಷಿಕರಿಗಾಗಿ ಏನೂ ಮಾಡಿಲ್ಲ, ಆದರೆ ಚುನಾವಣೆ ಬಂದಾಗ ಸಾಲಮನ್ನಾ ಎಂದುಬಿಡುತ್ತಾರೆ. ಅದೂ ಹತ್ತು ವರ್ಷಕ್ಕೊಮ್ಮೆ ಸಾಲಮನ್ನಾ ಮಾಡಿದರೆ ಏನೂ ಪ್ರಯೋಜನವಿಲ್ಲ ಆದರೆ ನಮ್ಮ 'ಕಿಸಾನ್ ಸಮ್ಮಾನ್' ಯೋಜನೆ ವರ್ಷಗಳ ವರೆಗೆ ರೈತರಿಗೆ ಆರ್ಥಿಕ ಬಲ ತುಂಬಲಿದೆ ಎಂದು ಮೋದಿ ಹೇಳಿದರು.

'ನಾಚಿಕೆ ಆಗಲ್ವಾ ಆಂಧ್ರಕ್ಕೆ ಬರೋಕೆ?' ಮೋದಿಗೆ ನಾಯ್ಡು ಪ್ರಶ್ನೆ!'ನಾಚಿಕೆ ಆಗಲ್ವಾ ಆಂಧ್ರಕ್ಕೆ ಬರೋಕೆ?' ಮೋದಿಗೆ ನಾಯ್ಡು ಪ್ರಶ್ನೆ!

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಜನರಿಗೆ ವಂಶಪಾರ್ಯ ಬೇಡ, ನೀತಿ ಪಾರ್ಶ್ವವಾಯು, ಮತ ಬ್ಯಾಂಕ್ ರಾಜಕೀಯ ಬೇಕಾಗಿಲ್ಲ ಜನರಿಗೆ ಅಭಿವೃದ್ಧಿ ಒಂದೇ ಬೇಕಾಗಿದೆ. ಅದನ್ನು ನಾವು 'ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್‌' ಮೂಲಕ ಮಾಡುತ್ತಿದ್ದೇವೆ ಎಂದರು.

English summary
Prime minister Narendra Modi put foundation stone to many development programs in Tamilnadu's Kanyakumari. He addressed rally and lambasted on P Chidambaram and Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X