ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಬಲಿಪುರಂ ಬೀಚ್‌ನಲ್ಲಿ ಕಸ ಹೆಕ್ಕಿದ ಮೋದಿ: ವೈರಲ್ ವಿಡಿಯೋ

|
Google Oneindia Kannada News

Recommended Video

Narendra Modi shared a video of plogging at a beach in Mamallapura | Oneindia Kannada

ಚೆನ್ನೈ, ಅಕ್ಟೋಬರ್ 12: ತಮಿಳುನಾಡಿನ ಮಾಮಲ್ಲಪುರಂನಲ್ಲಿ (ಮಹಾಬಲಿಪುರಂ) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಬೀಚ್‌ನಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿದರು.

ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರು ಮೆಚ್ಚಿದ 'ತಕ್ಕಾಲಿ ರಸಂ'ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರು ಮೆಚ್ಚಿದ 'ತಕ್ಕಾಲಿ ರಸಂ'

ಸುಮಾರು ಅರ್ಧ ಗಂಟೆ ಕಾಲ ಬೀಚ್‌ನಲ್ಲಿ ಓಡಾಡಿ ಪ್ಲಾಸ್ಟಿಕ್ ಕಸಗಳನ್ನು ಆಯ್ದು ಚೀಲಕ್ಕೆ ತುಂಬಿದ ಪ್ರಧಾನಿ ಮೋದಿ ಅದರ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 Narendra Modi Plogging At Mamallapuram Viral Video

'ಮಾಮಲ್ಲಪುರಂನ ಬೀಚ್‌ನಲ್ಲಿ ಬೆಳಿಗ್ಗೆ ಅಡ್ಡಾಡುತ್ತಾ ಕಸವನ್ನು ಹೆಕ್ಕಿದೆ. 30 ನಿಮಿಷಗಳವರೆಗೆ ಈ ಕೆಲಸ ಮಾಡಿದೆ. ಬಳಿಕ ನನ್ನ 'ಸಂಗ್ರಹ'ವನ್ನು ಹೋಟೆಲ್ ಸಿಬ್ಬಂದಿ ಜಯರಾಜ್‌ಗೆ ನೀಡಿದೆ. ನಮ್ಮ ಸಾರ್ವಜನಿಕ ಸ್ಥಳಗಳು ಸ್ವಚ್ಚ ಮತ್ತು ನಿರ್ಮಲವಾಗಿರುವಂತೆ ನಾವು ನೋಡಿಕೊಳ್ಳೋಣ. ನಾವು ಸದೃಢ ಮತ್ತು ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳೋಣ' ಎಂದು ಮೋದಿ ವಿಡಿಯೋದ ಜತೆಗೆ ಮನವಿ ಮಾಡಿದ್ದಾರೆ.

ವೈರಲ್ ವಿಡಿಯೋ: ಮೋದಿ-ಕ್ಸಿ 'ಅರ್ಜುನ ತಪಸ್ಸಿನ ಶಿಲಾಕೆತ್ತನೆ' ನೋಡುವಾಗವೈರಲ್ ವಿಡಿಯೋ: ಮೋದಿ-ಕ್ಸಿ 'ಅರ್ಜುನ ತಪಸ್ಸಿನ ಶಿಲಾಕೆತ್ತನೆ' ನೋಡುವಾಗ

 Narendra Modi Plogging At Mamallapuram Viral Video

ಇದಕ್ಕೂ ಮುನ್ನ ಮೋದಿ ಅವರು ಬೆಳಿಗ್ಗೆ ಬೀಚ್‌ನಲ್ಲಿ ವಿಹರಿಸುವ ಚಿತ್ರವನ್ನು ಹಂಚಿಕೊಂಡಿದ್ದರು. ಅಕ್ಟೋಬರ್ 2ರಿಂದ ದೇಶದೆಲ್ಲೆಡೆ ಓಡಾಡುತ್ತಾ ತ್ಯಾಜ್ಯ ಹೆಕ್ಕುವ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಜನರು ನಿರಂತರವಾಗಿ ಎರಡು ಕಿ.ಮೀ. ಓಟಗಳಲ್ಲಿ ಪಾಲ್ಗೊಳ್ಳುವಂತೆ ಮೋದಿ ಅವರು ಕರೆ ನೀಡಿದ್ದರು. ಬೆಳಗಿನ ಜಾಗಿಂಗ್ ಜತೆಗೆ ಕಸವನ್ನು ಹೆಕ್ಕುವ ಮೂಲಕ ಸ್ವಚ್ಚತೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದು (ಪ್ಲಾಗಿಂಗ್) ಆರೋಗ್ಯ ಮತ್ತು ಸ್ವಚ್ಚತೆ ಎರಡಕ್ಕೂ ಸಹಕಾರಿ ಎಂದು ಮೋದಿ ಹೇಳಿದ್ದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

English summary
Prime Minister Narendra Modi who is Tamil Nadu for informal summit at Mamallapuram with China president Xi Jinping, shared a video of plogging at a beach on Saturday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X