ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡತನದ ವಿರುದ್ಧ ಹೋರಾಟಕ್ಕೆ ಕೈಮಗ್ಗ ಅಸ್ತ್ರವಾಗಲಿ: ಮೋದಿ

By Mahesh
|
Google Oneindia Kannada News

ಚೆನ್ನೈ, ಆಗಸ್ಟ್ 07: ದೇಶದಲ್ಲಿ ಬಡತನದ ವಿರುದ್ಧ ಹೋರಾಡುವುದಕ್ಕೆ ಕೈಮಗ್ಗ ಅಸ್ತ್ರವಾಗಲಿ ಎಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಶುಕ್ರವಾರ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮೋದಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕೈಮಗ್ಗ ಒಂದು ಅಸ್ತ್ರವಾಗಿತ್ತು. ಈಗ ಇದೇ ಅಸ್ತ್ರ ಬಳಸಿಕೊಂಡು ಬಡತನ ನಿರ್ಮೂಲನೆ ಮಾಡೋಣ. ನಾನು ಇತ್ತೀಚೆಗೆ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲೂ ಖಾದಿ ಬಟ್ಟೆ ಬಳಕೆ ಖರೀದಿ ಬಗ್ಗೆ ಪ್ರಸ್ತಾಪಿಸಿದ್ದೆ.

ದೇಶದ ಜನತೆ ನನ್ನ ಮನವಿಯನ್ನು ಸ್ವೀಕರಿಸಿದ್ದಾರೆ. ಕೈಮಗ್ಗದ ವಹಿವಾಟು ಶೇಕಡ 33ರಷ್ಟು ಹೆಚ್ಚಾಗಿದ್ದು, ಪರಿಸರ ಸಂರಕ್ಷಣೆಯಲ್ಲೂ ಕೈಮಗ್ಗದ ಮಹತ್ವದ ಪಾತ್ರವಹಿಸಲಿದೆ ಎಂದರು.[ಮೋದಿ ಕೈಮಗ್ಗ ದಿನಾಚರಣೆ ಬಗ್ಗೆ ಮಂಡ್ಯದ ರಮ್ಯಾ ಟ್ವೀಟ್]

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಭಿನಂದನೆ ಸಲ್ಲಿಸಿದ ಮೋದಿ ಅವರು ಖಾದಿ ಪ್ರಚಾರದ ಬಗ್ಗೆ ತಮಿಳುನಾಡು ಸರ್ಕಾರ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು.

1905ರ ಸ್ವದೇಶಿ ಚಳುವಳಿ ನೆನಪಿಗಾಗಿ ಆಗಸ್ಟ್ 7ನ್ನು ಕೈಮಗ್ಗ ದಿನಾಚರಣೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಪ್ರತಿ ವರ್ಷ ಈ ದಿನದಂದು ಸಂತ ಕಬೀರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹೊಸ ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಕೈಮಗ್ಗ ದಿನಾಚರಣೆಗೆ ಪ್ರಧಾನಿ ಮೋದಿಯಿಂದ ಚಾಲನೆ

ಕೈಮಗ್ಗ ದಿನಾಚರಣೆಗೆ ಪ್ರಧಾನಿ ಮೋದಿಯಿಂದ ಚಾಲನೆ

ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮೋದಿ ಮಾತನಾಡಿದರು.

ಆಗಸ್ಟ್ 7ನ್ನು ಕೈಮಗ್ಗ ದಿನಾಚರಣೆ

ಆಗಸ್ಟ್ 7ನ್ನು ಕೈಮಗ್ಗ ದಿನಾಚರಣೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಅಭಿನಂದನೆ ಸಲ್ಲಿಸಿದ ಮೋದಿ ಅವರು ಖಾದಿ ಪ್ರಚಾರದ ಬಗ್ಗೆ ತಮಿಳುನಾಡು ಸರ್ಕಾರ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ತೆರಳಿದ ಮೋದಿ ಅವರು ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಕೈಮಗ್ಗ ದಿನಾಚರಣೆಗೆ ಚೆನ್ನೈಗೆ ಬಂದ ಮೋದಿ

ಕೈಮಗ್ಗ ದಿನಾಚರಣೆಗೆ ಚೆನ್ನೈಗೆ ಬಂದ ಮೋದಿ

ಕೈಮಗ್ಗ ದಿನಾಚರಣೆಗೆ ಚೆನ್ನೈಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ.

ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿ

ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿ

ಪ್ರತಿ ವರ್ಷ ಈ ದಿನದಂದು ಸಂತ ಕಬೀರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹೊಸ ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಹೊಸ ಕೈಮಗ್ಗ ಬ್ರ್ಯಾಂಡ್

ಹೊಸ ಕೈಮಗ್ಗ ಬ್ರ್ಯಾಂಡ್ ಅನಾವರಣಗೊಳಿಸಿದ ಪ್ರಧಾನಿ ಮೋದಿ.

English summary
Narendra Modi launches National Handloom Day in Chennai. Besides launching the Handloom day, the Prime Minister will also presented Sant Kabir awards and National Awards for handloom weavers on the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X