ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ- ಅಮಿತ್ ಶಾ ಕೃಷ್ಣಾರ್ಜುನರಿದ್ದಂತೆ: ನಟ ರಜನೀಕಾಂತ್

By ಅನಿಲ್ ಆಚಾರ್
|
Google Oneindia Kannada News

ಚೆನ್ನೈ, ಆಗಸ್ಟ್ 11: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ಕೃಷ್ಣ ಮತ್ತು ಅರ್ಜುನರಿದ್ದಂತೆ ಎಂದು ನಟ ರಜನೀಕಾಂತ್ ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ. ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದುಪಡಿಸುವ ನಿರ್ಧಾರ ಕೈಗೊಂಡ 'ಮಿಷನ್ ಕಾಶ್ಮೀರ್' ಅನ್ನು 'ಅದ್ಭುತವಾದ' ನಡೆ ಎಂದು ರಜನೀಕಾಂತ್ ಬಣ್ಣಿಸಿದ್ದಾರೆ.

"ನಮಗೆ ಕೃಷ್ಣ ಯಾರು, ಅರ್ಜುನ ಯಾರು ಅಂತ ಗೊತ್ತಿಲ್ಲ. ಇವರು (ಮೋದಿ ಮತ್ತು ಅಮಿತ್ ಶಾ) ಮಾತ್ರ ಗೊತ್ತು ಎಂದು ರಜನೀಕಾಂತ್ ಹೇಳಿದ್ದಾರೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರೀಕೃಷ್ಣನು ವಿಷ್ಣುವಿನ ಅವತಾರ. ಅರ್ಜುನ ಆ ಶ್ರೀಕೃಷ್ಣನ ಅನುಯಾಯಿ. ಈ ಪಾತ್ರಗಳು ಮಹಾಭಾರತದಲ್ಲಿದೆ.

ನೆಹರೂ, ರಾಜೀವ್ ನಂತರ ಮೋದಿ ದಿವ್ಯಪ್ರಭೆಯುಳ್ಳ ನಾಯಕ : ರಜನಿನೆಹರೂ, ರಾಜೀವ್ ನಂತರ ಮೋದಿ ದಿವ್ಯಪ್ರಭೆಯುಳ್ಳ ನಾಯಕ : ರಜನಿ

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಜನೀಕಾಂತ್ ಮಾತನಾಡಿ, ನಾಯ್ಡು ಅವರು ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿ. ಅವರಿಗೆ ಜನರ ಹಿತಾಸಕ್ತಿ ಬಗ್ಗೆಯೇ ಆಸಕ್ತಿ ಎಂದು ರಜನೀ ಅಭಿಪ್ರಾಯ ಪಟ್ಟರು.

Narendra Modi and Amit Shah Like Krishnarjuna, Says Rajinikanth

ಈ ಕಾರ್ಯಕ್ರಮವನ್ನು ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಆತಿಥಿಯಾಗಿ ಭಾಗವಹಿಸಿದ್ದರು. ತಮಿಳುನಾಡಿನ ರಾಜ್ಯಪಾಲರಾದ ಬಂವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಹಾಜರಿದ್ದರು.

English summary
Actor Rajinikanth describes Narendra Modi and Amit Shah as Krishnarjuna in a book releasing function at Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X