• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮ್ಮಾ ಇಡ್ಲಿಗೆ ಸವಾಲ್, ನಮೋ ಫಿಶ್ ಸ್ಟಾಲ್ ಆರಂಭ!

By Srinath
|

ಚೆನ್ನೈ, ಫೆ.25-ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರಿನಲ್ಲಿ/ಮುಂದಾಳತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಿದ ಬಿಜೆಪಿಗೆ ವಿರೋಧ ಪಕ್ಷವಾದ ಕಾಂಗ್ರೆಸ್ 'ನಮೋ ಟೀ' ಕಾನ್ಸೆಪ್ಟನ್ನು ಬೆಳ್ಳಿ ತಟ್ಟೆಯಲ್ಲಿಟ್ಟು ಚುನಾವಣಾ ಗಿಫ್ಟ್ ಆಗಿ ನೀಡಿತು. ಅದು ಯಶಸ್ವಿಯಾಗಿದ್ದೇ ತಡ ಬಿಜೆಪಿ ಅನಾಯಾಸವಾಗಿ ಇನ್ನೂ ಅನೇಕ ಸಾಧ್ಯತೆಗಳನ್ನು ಕಂಡುಕೊಂಡಿದೆ.

ಮೋದಿ ಹೆಸರಿನಲ್ಲಿ ಮೀನು ಮಾರಾಟಕ್ಕಿಳಿದ ಬಿಜೆಪಿ:

ಇದೀಗ ಸಮುದ್ರದ ನಾಡು ಚೆನ್ನೈನಲ್ಲಿ ಬಿಜೆಪಿ ಕಾರ್ಯಕರ್ತರು 'ನಮೋ ಫಿಶ್ ಸ್ಟಾಲ್‌' ತೆರೆದಿದ್ದಾರೆ! ಚೆನ್ನೈನ ಬಿಜೆಪಿ ಮುಖಂಡ ಎಲ್ ಗಣೇಶನ್ ಅವರು ಸಂಚಾರಿ NaMo fish stall ಅನ್ನು ಜಗದ್ವಿಖ್ಯಾತ Marina beachನಲ್ಲಿ ಇಂದು ಮಂಗಳವಾರ ಉದ್ಘಾಟಿಸಿದ್ದಾರೆ. ಮೋದಿ ತಮ್ಮ ಎರಡೂ ಕೈಯಲ್ಲಿ ಮೀನನ್ನು ಎತ್ತಿ ಹಿಡಿದಿರುವಂತೆ ತಿರುಚಲಾಗಿರುವ ಚಿತ್ರವು ಮೊಬೈಲ್ ವ್ಯಾನ್ ಮೇಲೆ ರಾರಾಜಿಸುತ್ತಿದೆ.

ಅಮ್ಮಾ ಇಡ್ಲಿಗೆ ಸವಾಲ್!:

'ದೇಶದ ಮೀನುಗಾರರನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ' ಎಂದು ಚೆನ್ನೈ ಬಿಜೆಪಿ ಘಟಕದ ಮುಖಂಡ ತಮಿಳಿಸೈ ಸುಂದರಾಜನ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ 10 ಲಕ್ಷ ಮಂದಿ ಮೀನುಗಾರರಿದ್ದು, ಆರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನವಾಗಿ ಕಂಡುಬರುತ್ತಾರೆ. ( ಫೆ 1ರಿಂದ ಮೋದಿ ಚಹಾ ಸಂವಾದ; ಉದ್ಯಮ ಫುಲ್ ಖುಷ್ )

'ಕೇವಲ ಮೀನುಗಾರರ ಮತ ಬೇಟೆಗಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಬದಲಿಗೆ ಸಮಾಜದಲ್ಲಿ ಮೀನುಗಾರರು ತುಳಿತಕ್ಕೊಳಗಾಗಿದ್ದಾರೆ. ಸರಕಾರದ ಸಾಕಷ್ಟು ಯೋಜನೆಗಳು ಬೆಸ್ತರನ್ನು ತಲುಪುವುದೇ ಇಲ್ಲ. ನಮ್ಮ 'ನಮೋ ಫಿಶ್ ಸ್ಟಾಲ್‌' ಮುಖಾಂತರ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ' ಎಂದು ಸುಂದರಾಜನ್ ಹೇಳಿದ್ದಾರೆ.

( ಕಾಲೇಜ್ ಕ್ಯಾಂಪಸ್ಸುಗಳಲ್ಲಿ ಇನ್ಮುಂದೆ ಮೋದಿ ಕೆಫೆ )

ಈ ಮಧ್ಯೆ, 'ನಮೋ ಫಿಶ್ ಸ್ಟಾಲ್' ಜನರನ್ನು ತನ್ನತ್ತ ಸೆಳೆಯಲು ಕಡಿಮೆ ದರಕ್ಕೆ ಮೀನು ಮಾರಾಟ ಮಾಡಿದ್ದಾರೆ. ಇದರಿಂದ ಜನ ಹೆಚ್ಚಾಗಿ ಅಲ್ಲಿಯೇ ಮೀನು ಖರೀದಿಗೆ ಹೋದರೆ ನಮ್ಮ ಗತಿಯೇನು ಎಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ( ಮೋದಿ ಜಾಹೀರಾತು: ಪೇಚಿಗೀಡಾದ ಕಾಂಗ್ರೆಸ್ಸಿಂದ ವಾಪಸ್? )

English summary
Lok Sabha polls 2014- NaMo fish stall opened in Chennai today (Feb 25)- Will it be a challenge to Amma Canteen. Narendra Modi's name will now sell fish in Chennai? BJP leader L Ganesan inaugurated the mobile NaMo fish stall at the city's Marina beach. The BJP today launched the new initiative to market its pm candidate ahead of the national election. Tamil Nadu's fishing community comprises some 10 lakh people who can influence the electoral outcome in six Lok Sabha constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X