ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್, ಕೊಹ್ಲಿ, ಗಂಗೂಲಿ ಜೊತೆ ಧೋನಿ ಚೆಂಡಾಟ

By Mahesh
|
Google Oneindia Kannada News

ಚೆನ್ನೈ, ಅ.7: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗುವ ಮೂಲಕ ಚೆನ್ನೈನ ದತ್ತುಪುತ್ರ ಎನಿಸಿರುವ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಮತ್ತೊಮ್ಮೆ ಚೆನ್ನೈ ತಂಡದ ಪರ ನಿಲ್ಲುತ್ತಿದ್ದಾರೆ. ಕ್ರಿಕೆಟ್ ಜಗತ್ತ್ತಿನ ಸ್ಟಾರ್ ಗಳಾದ ಸಚಿನ್, ಕೊಹ್ಲಿ, ಗಂಗೂಲಿ ವಿರುದ್ಧ ಧೋನಿ ಚೆಂಡಾಟವಾಡಲಿದ್ದಾರೆ. ಫುಟ್ಬಾಲ್ ಲೀಗ್ ಆಡಲು ಈ ಎಲ್ಲಾ ಕ್ರಿಕೆಟರ್ ಗಳು ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ ಅವರು ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋವಾ ಫುಟ್ಬಾಲ್ ಕ್ಲಬ್ ಖರೀದಿಸಿದ ಬೆನ್ನಲ್ಲೇ ಎಂಎಸ್ ಧೋನಿ ಅವರು ಚೆನ್ನೈ ಫುಟ್ಬಾಲ್ ತಂಡದ ಮಾಲೀಕತ್ವ ವಹಿಸಿಕೊಂಡಿದ್ದಾರೆ. ಚೆನ್ನೈ ತಂಡಕ್ಕೆ ನಟ ಅಭಿಷೇಕ್ ಬಚ್ಚನ್ ರಂತೆ ಧೋನಿ ಅವರು ಸಹಮಾಲೀಕರಾಗಿ ಹಣ ತೊಡಗಿಸಿದ್ದಾರೆ. ವೀತಾ ಧಾನಿ ಅವರು ಚೆನ್ನೈ ತಂಡದ ಮಾಲೀಕರಾಗಿದ್ದಾರೆ.

ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಗಳು ಫೀಫಾ ಮಾನ್ಯತೆ ಪಡೆದುಕೊಂಡಿದೆ. ಕೋಲ್ಕತಾದ ಐತಿಹಾಸಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 12 ರಂದು ಭಾರತೀಯ ಸೂಪರ್ ಫುಟ್ಬಾಲ್ ಲೀಗ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಟ್ಲೆಟಿಕೊ ಕೋಲ್ಕತಾ ತಂಡ ಟೀಮ್ ಮುಂಬೈಯನ್ನು ಎದುರಿಸಲಿದೆ.

MS Dhoni is now co-owner of Chennai football team in ISL

ಸಚಿನ್ ತೆಂಡೂಲ್ಕರ್, ಅಭಿಷೇಕ್ ಬಚ್ಚನ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸೌರವ್ ಗಂಗೂಲಿ ಅಲ್ಲದೆ ರಣಬೀರ್ ಕಪೂರ್, ನೀತೂ ಅಂಬಾನಿ, ಸಲ್ಮಾನ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಲೀಗ್ ನ ಪ್ರತಿನಿಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. [ಯಾವ ತಂಡಕ್ಕೆ ಯಾರು ಪ್ರತಿನಿಧಿ]

ಎಂಟು ನಗರಗಳ ತಂಡಗಳಲ್ಲಿ ನಾಲ್ವರು ಕ್ರಿಕೆಟ್ ಸ್ಟಾರ್ ಗಳು ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ. ಸಚಿನ್ ತೆಂಡೂಲ್ಕರ್ ಅವರು ಕೇರಳ ಬ್ಲಾಸ್ಟರ್ಸ್ ಎಫ್ ಸಿ ತಂಡದ ಸಹ ಮಾಲೀಕರು. ಸೌರವ್ ಗಂಗೂಳಿ ಅಟ್ಲೆಟಿಕೋ ಡಿ ಕೋಲ್ಕತ್ತಾ ತಂಡದ ಒಡೆತನ ಹೊಂದಿದ್ದಾರೆ.

ಚೆನ್ನೈಯಿನ್ ಎಫ್ ಸಿ ತಂಡದಲ್ಲಿ ಇಟಲಿಯ ಮಾಜಿ ಆಟಗಾರ ಮಾರ್ಕೊ ಮಾಟೆರಾಜ್ಜಿ(ಜಿದಾನೆಯಿಂದ ಹೆಡ್ ಬಟ್ ಮಾಡಿಸಿಕೊಂಡ ಖ್ಯಾತಿಯ) ಆಟಗಾರ ಕಮ್ ಮ್ಯಾನೇಜರ್ ಆಗಿ ಬೆಂಬಲಕ್ಕೆ ನಿಂತಿದ್ದಾರೆ.

ಒಟ್ಟು ತಂಡಗಳು: ಗೋವಾ ಎಫ್‌ಸಿ ತಂಡ, ಡೆಲ್ಲಿ ಡೈನಮೊಸ್ ತಂಡ, ಅಟ್ಲೆಟಿಕೊ ಕೋಲ್ಕತಾ ತಂಡ, ನಾರ್ಥ್ ಈಸ್ಟ್ ಯುನೈಟೆಡ್ ತಂಡ, ಟೀಮ್ ಚೆನ್ನೈ, ಪುಣೆ ಎಫ್‌ಸಿ, ಟೀಮ್ ಮುಂಬೈ, ಕೊಚ್ಚಿ ಬ್ಲಾಸ್ಟರ್ಸ್‌ ತಂಡ.

English summary
India and Chennai Super Kings captain MS Dhoni now owns a football franchise in the Indian Super League (ISL), which starts on October 12. Overall, Dhoni is the fourth cricketer to be a part of this 8 city-based league.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X