• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಕ್ತಿಭಾವದ ಪರಾಕಾಷ್ಠೆ: 10 ರೂಪಾಯಿಗೆ ನಾಲ್ಕು 'ಮೋದಿ ಇಡ್ಲಿ'

|

ಚೆನ್ನೈ, ಸೆ 1: ಅಮ್ಮ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್ ಎಂದು ಹೊಟೇಲ್ ಗಳಿಗೆ ಹೆಸರು ಇಡುವುದನ್ನು ಕೇಳಿದ್ದೇವೆ. ತಮಿಳುನಾಡಿನ ಬಿಜೆಪಿ ಮುಖಂಡರೊಬ್ಬರು ಇಡ್ಲಿಗೆ 'ಮೋದಿ ಇಡ್ಲಿ' ಎಂದು ಹೆಸರಿಟ್ಟು, ಕಡಿಮೆ ಬೆಲೆಯಲ್ಲಿ ಗ್ರಾಹಕರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮೋದಿ ಇಡ್ಲಿಯನ್ನು ತಮಿಳುನಾಡಿನ ಸೇಲಂ ನಗರದಲ್ಲಿ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಆರಂಭಿಸಲು ನಿರ್ಧರಿಸಿದ್ದಾರೆ. ಹತ್ತು ರೂಪಾಯಿಗೆ ನಾಲ್ಕು ಇಡ್ಲಿಯನ್ನು ಇವರು ನೀಡಲಿದ್ದಾರೆ.

ಮೋದಿ ಮನ್‌ಕಿ ಬಾತ್: 2.5ಲಕ್ಷ ಮಂದಿಯಿಂದ ಡಿಸ್‌ಲೈಕ್

'ಮೋದಿ ಇಡ್ಲಿ ಪೋಸ್ಟರ್' ಅನ್ನು ನಗರದಲೆಲ್ಲಾ ಅಂಟಿಸಲಾಗಿದೆ. ಈ ಪೋಸ್ಟರಿನ ಎಡಭಾಗದಲ್ಲಿ ಮೋದಿಯ ಚಿತ್ರ, ಹತ್ತು ರೂಪಾಯಿಗೆ ನಾಲ್ಕು ಇಡ್ಲಿ ಎಂದು ಎನ್ನುವ ಒಕ್ಕಣೆ ಮಧ್ಯ ಭಾಗದಲ್ಲಿ ಮತ್ತು ಬಲಭಾಗದಲ್ಲಿ ಮಹೇಶ್ ಅವರ ಭಾವಚಿತ್ರವಿದೆ. ಮಹೇಶ್, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದಾರೆ.

"ಹತ್ತು ರೂಪಾಯಿಗೆ ನಾಲ್ಕು ಇಡ್ಲಿ ಮತ್ತು ಸಾಂಬಾರ್ ಜೊತೆಗೆ ಕೊಡಲಿದ್ದೇವೆ. ಇದಕ್ಕಾಗಿ ಅತ್ಯಾಧುನಿಕ ಕಿಚನ್ ಸಿದ್ದವಾಗುತ್ತಿದೆ. ಗುಣಮಟ್ಟದ ಮತ್ತು ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ"ಎಂದು ಮಹೇಶ್ ಹೇಳಿಕೊಂಡಿದ್ದಾರೆ.

ಸೇಲಂ ಜಿಲ್ಲೆ, ತಮಿಳುನಾಡಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯವರ ತವರು ಜಿಲ್ಲೆಯಾಗಿದೆ. "ನಗರದಲ್ಲಿ ಒಟ್ಟು 22 ಮಳಿಗೆಯನ್ನು ಸದ್ಯಕ್ಕೆ ತೆರೆಯುತ್ತಿದ್ದೇವೆ. ಇದಕ್ಕೆ ಸಿಗುವ ಪ್ರತಿಕ್ರಿಯೆಯನ್ನು ನೋಡಿ, ಹೆಚ್ಚಿನ ಮಳಿಗೆ ತೆರೆಯುವ ಬಗ್ಗೆ ನಿರ್ಧರಿಸಲಿದ್ದೇವೆ"ಎಂದು ತಮಿಳುನಾಡು ಬಿಜಿಪಿ ಪ್ರಧಾನ ಕಾರ್ಯದರ್ಶಿ ಆರ್.ಬಾಲಸುಬ್ರಮಣಿಯನ್ ಹೇಳಿದ್ದಾರೆ.

ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕೊರೊನಾ ಹೆಚ್ಚಳಕ್ಕೆ ಕಾರಣ

ದಿನವೊಂದಕ್ಕೆ ನಲವತ್ತು ಸಾವಿರ ಇಡ್ಲಿ ತಯಾರಿಸುವ ಮೆಷಿನ್ ಈಗಾಗಲೇ ನಗರಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ಮೋದಿ ಇಡ್ಲಿ, ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ.

English summary
Modi Idli To Be Sold In Salem In Tamil Nadu, Four Idli's At Rupees Ten,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X