ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನನ್ನು ಪ್ರೇರೇಪಿಸುವ ಮಹಿಳೆ' ಮೊಬೈಲ್ ಫೋಟೊ ಸ್ಪರ್ಧೆ

|
Google Oneindia Kannada News

ಚೆನ್ನೈ ಜನವರಿ 31 : ಚೆನ್ನೈ ನಲ್ಲಿರುವ ಯುಎಸ್ ಕನ್ಸುಲೇಟ್ ಜನರಲ್ ಕಚೇರಿ ಫೆ1 ರಿಂದ ಮೊಬೈಲ್ ಫೋನ್ ಫೋಟೋ ಸ್ಪರ್ಧೆಯನ್ನು ಏರ್ಪಡಿಸಿದೆ.

ತಮಿಳುನಾಡು ಕರ್ನಾಟಕ, ಕೇರಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ರಾಜ್ಯಗಳ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಪ್ರತಿಯೊಬ್ಬರು ತಲಾ ಮೂರು ಭಾವಚಿತ್ರಗಳನ್ನು ಫೆ.15ರೊಳಗೆ ಕಳುಹಿಸಬೇಕು. ಭಾವಚಿತ್ರದ ಧ್ಯೇಯ ವಾಕ್ಯ ನನ್ನನ್ನು ಪ್ರೇರೇಪಿಸುವ ಮಹಿಳೆ ಎಂಬುದಾಗಿರುತ್ತದೆ.

ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧೈರ್ಯ ಸಾಹದ ಹಾಗೂ ಶ್ರಮದಿಂದ ಇತರರನ್ನು ಪ್ರೇರೇಪಣೆ ಗೊಳಿಸುವ ಮಹಿಳೆ ಭಾವಚಿತ್ರವನ್ನು ತೆಗೆದು ಸ್ಪರ್ಧೆಗೆ ಕಳುಹಿಸಬಹುದಾಗಿದೆ. ಮೊಬೈಲ್ ಫೋನ್ ಸ್ಪರ್ಧೆಗೆ ಪ್ರವೇಶ ಉಚಿತವಾಗಿರಲಿದೆ.
ಸ್ಪರ್ಧೆಗೆ ಕಳುಹಿಸಲಾದ ಭಾವಚಿತ್ರಗಳಲ್ಲಿ ಖ್ಯಾತ ಛಾಯಾಗ್ರಾಹಕರ ಹಾಗೂ ತಜ್ಞರ ತಂಡವು ಉತ್ತಮ ಫೋಟೊಗ್ರಫಿಗಳನ್ನು ಆಯ್ಕೆ ಮಾಡಲಿದ್ದು, ಬಳಿಕ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಆನ್ ಲೈನ್ ನಲ್ಲಿ ಸಾರ್ವಜನಿಕರಿಂದ ಓಟಿಂಗ್ ಆಹ್ವಾನಿಸಿ, ಸಾರ್ವಜನಿಕರು ಅತಿ ಹೆಚ್ಚು ಮತ ಹಾಕುವ ಭಾವಚಿತ್ರವನ್ನು ವಿಜೇತ ಎಂದು ಘೋಷಿಸಲಾಗವುದು.

Mobile phone photo contest on Woman inspiration

ಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಅಮೇರಿಕನ್ ಸೆಂಟರ್ ನಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು. ಮಾರ್ಚ್ 8 ರಂದು ಯುಎಸ್ ಕೌನ್ಸಲೇಟ್ ಜನರಲ್ ರಾಬರ್ಟ್ ಬರ್ಗಸ್ , ವಿಜೇತ ಫೋಟೊಗಳಿಗೆ ಪ್ರಮಾಣ ಪತ್ರ ವಿತರಿಸುವರು. ಇದಲ್ಲದೆ ಆಯ್ಕೆಯಾದ ಫೋಟೋಗಳು, ಟ್ರಾವೆಲಿಂಗ್ ಪ್ರದರ್ಶನ ಹಾಗೂ ವಿವಿಧ ಶಾಲಾ ಕಾಲೇಜುಗಳಲ್ಲಿ, ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಮಾರ್ಚ್ ತಿಂಗಳಾದ್ಯಂತ ಪ್ರದರ್ಶಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟ್ ವಿಳಾಸವನ್ನು ಸಂಪರ್ಕಿಸಬಹುದು

English summary
The US Consulate General in Chennai is launching a mobile phone photo contest from February 1, for individuals in Tamil Nadu, Karnataka, Kerala, Andaman and Nicobar islands. Photos should be taken on mobile phones on the theme The Woman Who Inspires me'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X