ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಅಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಅವಿರೋಧ ಆಯ್ಕೆ

|
Google Oneindia Kannada News

ಚೆನ್ನೈ, ಆಗಸ್ಟ್ 28: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ನಿಧನದ ನಂತರ ತೆರವಾಗಿದ್ದ ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಕರುಣಾನಿಧಿ ಪುರ್ರ ಎಂಕೆ ಸ್ಟಾಲಿನ್ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚೆನ್ನೈಯಲ್ಲಿರುವ ದ್ರಾವಿಡ ಮುನ್ನೆಟ್ರ ಕಳಗಂ(ಡಿಎಂಕೆ) ಪಕ್ಷದ ಕೇಂದ್ರ ಕಚೇರಿಯಲ್ಲಿ ಎಂಕೆ ಸ್ಟಾಲಿನ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರೆ, ದುರೈ ಮುರುಗನ್ ಅವರನ್ನು ಖಜಾಂಚಿಯನ್ನಾಗಿ ಆಯ್ಕೆ ಮಾಡಲಾಯಿತು.

ಆ. 28ರಂದು ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸ್ಟಾಲಿನ್ ಘೋಷಣೆ ಬಹುತೇಕ ಖಚಿತಆ. 28ರಂದು ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸ್ಟಾಲಿನ್ ಘೋಷಣೆ ಬಹುತೇಕ ಖಚಿತ

65 ವರ್ಷ ವಯಸ್ಸಿನ ಸ್ಟಾಲಿನ್ ಇಷ್ಟು ದಿನ ಡಿಎಂಕೆ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

MK Stalin elected as President of DMK in Chennai today

ಪಕ್ಷಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಎಂಕೆ ಸ್ಟಾಲಿನ್ ಅವರ ಸಹೋದರ ಎಂಕೆ ಅಳಗಿರಿ ಅವರ ಬೆದರಿಕೆಗೆ ಬಗ್ಗದ ಸ್ಟಾಲಿನ್ ಬೆಂಬಲಿಗರು ಅವರನ್ನೇ ಅವಿರೋಧವಾಗಿ ಆಯ್ಕೆ ಮಾಡಿದರು. ಡಿಎಂಕೆಯಲ್ಲಿ ಆಯಕಟ್ಟಿನ ಹುದ್ದೆ ಪಡೆಯುವ ಸಲುವಾಗಿ ಅಳಗಿರಿ ಮತ್ತು ಸ್ಟಾಲಿನ್ ನಡುವೆ ಹಲವು ವರ್ಷಗಳಿಂದಲೂ ಮನಸ್ತಾಪವಿದ್ದೇ ಇದೆ.

ಕರುಣಾನಿಧಿ ಸಾವಿನ ಬೆನ್ನಲ್ಲೇ ಕುಟುಂಬದಲ್ಲಿ ಶುರುವಾಯಿತು ತಿಕ್ಕಾಟಕರುಣಾನಿಧಿ ಸಾವಿನ ಬೆನ್ನಲ್ಲೇ ಕುಟುಂಬದಲ್ಲಿ ಶುರುವಾಯಿತು ತಿಕ್ಕಾಟ

ಆದರೆ ಕರುಣಾನಿಧಿ ಅವರು ಬದುಕಿರುವವರೆಗೂ ಬೂದಿಮುಚ್ಚಿದ ಕೆಂಡದಂತಿದ್ದ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಅವರ ಮರಣಾನಂತರ ಮತ್ತೆ ಹೊಗೆಯಾಡುವುದಕ್ಕೆ ಶುರುಮಾಡಿದೆ. ಎಂ ಕರುಣಾನಿಧಿ ಅವರು ಬರೋಬ್ಬರಿ 49 ವರ್ಷಗಳಷ್ಟು ದೀರ್ಘಕಾಲ ಡಿಎಂಕೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

English summary
MK Stalin elected as President of Dravida Munnetra Kazhagam (DMK) at party headquarters in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X