ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಹಸುಗಳ ಹಾಲು ಕುಡಿದ ಮಹಿಳೆಯರು...: ಡಿಎಂಕೆ ಮುಖಂಡನ 'ಸೆಕ್ಸಿಸ್ಟ್' ಹೇಳಿಕೆ ವಿವಾದ

|
Google Oneindia Kannada News

ಚೆನ್ನೈ, ಮಾರ್ಚ್ 27: ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ಡಿಎಂಕೆ ಮುಖಂಡರೊಬ್ಬರು ಮಹಿಳೆಯರ ಕುರಿತು ನೀಡಿರುವ 'ಸೆಕ್ಸಿಸ್ಟ್' ಹೇಳಿಕೆ ಡಿಎಂಕೆಗೆ ತೀವ್ರ ಮುಜುಗರ ಉಂಟುಮಾಡಿದೆ. 'ವಿದೇಶಿ ಹಸುಗಳ ಹಾಲು ಕುಡಿದ ಮಹಿಳೆಯರು ಪೀಪಾಯಿಗಳಾಗಿ ಬದಲಾಗುತ್ತಿದ್ದಾರೆ' ಎಂದು ಅವರು ಹೇಳಿದ್ದು, ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕೊಯಮತ್ತೂರಿನಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಡಿಎಂಕೆಯ ಹಿರಿಯ ಮುಖಂಡ ದಿಂಡಿಗಲ್ ಲಿಯೋನಿ, ಟಿವಿಯೊಂದರ ಟಾಕ್ ಶೋದಲ್ಲಿ ಹಾಸ್ಯ ಮಾಡಲು ಹೋಗಿ ವಿವಾದಕ್ಕೆ ಸಿಲುಕಿದ್ದಾರೆ.

ಎಂ ಕರುಣಾನಿಧಿ ಮೊಮ್ಮಗನ ವಿರುದ್ಧ ಎಐಎಡಿಎಂಕೆ ದೂರುಎಂ ಕರುಣಾನಿಧಿ ಮೊಮ್ಮಗನ ವಿರುದ್ಧ ಎಐಎಡಿಎಂಕೆ ದೂರು

'ಅನೇಕ ಬಗೆಯ ಗೋವುಗಳು ಇವೆ. ಹೊಲಗಳಲ್ಲಿ ನೀವು ವಿದೇಶಿ ಹಸುಗಳನ್ನು ನೋಡಿರಬಹುದು. ವಿದೇಶಿ ಹಸುಗಳ ಹಾಲು ಕರೆಯಲು ಜನರು ಯಂತ್ರಗಳನ್ನು ಬಳಸುತ್ತಾರೆ. ವ್ಯಕ್ತಿ ಮೆಷಿನ್ ಆನ್ ಮಾಡಿದರೆ ಒಂದು ಗಂಟೆಯಲ್ಲಿ 40 ಲೀಟರ್ ಹಾಲು ಬರುತ್ತದೆ. ವಿದೇಶಿ ಹಸುಗಳ ಹಾಲು ಕುಡಿದ ಬಳಿಕ 8ರ ಆಕಾರದಲ್ಲಿರುವ ಮಹಿಳೆಯರ ನಿತಂಬ ಊದಿಕೊಂಡು ಪೀಪಾಯಿಯಂತಾಗುತ್ತದೆ. ಹೀಗಾಗಿ ಅವರ ಸೊಂಟದ ಮೇಲೆ ಆರಾಮಾಗಿ ಕುಳಿತುಕೊಳ್ಳುತ್ತಿದ್ದ ಮಕ್ಕಳು ಈಗ ಆ ಪೀಪಾಯಿಗಳಿಂದ ಜಾರಿ ಹೋಗುತ್ತಿವೆ' ಎಂದು ಅವರು ಹೇಳಿದ್ದಾರೆ.

Milk Of Foreign Cows Turning Women Into Barrels: DMK Leader Dindigul Leoni Remark Controversy

ಡಿಎಂಕೆ ಅಭ್ಯರ್ಥಿ ಕಾರ್ತಿಕೇಯ ಶಿವಸೇನಾಪತಿ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಲಿಯೋನಿ ಈ ಹೇಳಿಕೆ ನೀಡಿದ್ದಾರೆ. ಕಾರ್ತಿಕೇಯ ಅವರು ಸ್ಥಳೀಯ ಗೋ ತಳಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಎನ್‌ಜಿಒ ಒಂದರ ಜತೆ ಕೆಲಸ ಮಾಡುತ್ತಿದ್ದಾರೆ.

ವೇದಿಕೆ ಮೇಲೆ ಇದ್ದ ಡಿಎಂಕೆಯ ಮತ್ತೊಬ್ಬ ಮುಖಂಡರು ಲಿಯೋನಿ ಅವರು ಓತಪ್ರೋತದ ಮಾತನ್ನು ತಡೆಯಲು ಸರ್ಕಾರದ ಪಡಿತರದಲ್ಲಿನ ಅಸಮರ್ಪಕ ಅಕ್ಕಿ ಹಂಚಿಕೆಯ ವಿಚಾರವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು. ಆದರೆ ಅದರಲ್ಲಿ ವಿಫಲರಾದರು.

ಇದು ವಿವಾದ ಸೃಷ್ಟಿಸಿದ್ದು, ವಿರೋಧಪಕ್ಷಗಳು ಡಿಎಂಕೆಯಿಂದ ಕ್ಷಮೆಗೆ ಪಟ್ಟು ಹಿಡಿದಿವೆ. ಆದರೆ ತಮ್ಮ ಹೇಳಿಕೆಯಲ್ಲಿ ಕೀಳು ವಿಚಾರಗಳು ಏನೂ ಇಲ್ಲ. ಜನರಿಗೆ ಜೋಕ್ ಅರ್ಥವಾಗದೆ ಇರಬಹುದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

English summary
Milk of foreign cows turning women into barrels: DMK leader Dindigul Leoni remark sparks controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X