ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸದಲ್ಲಿ ಮದುವೆ; ಸ್ಪೈಸ್ ಜೆಟ್ ಸಿಬ್ಬಂದಿ ಅಮಾನತು ಮಾಡಿದ ಡಿಜಿಸಿಎ

|
Google Oneindia Kannada News

ಚೆನ್ನೈ, ಮೇ 24: ಕೊರೊನಾ ಲಾಕ್‌ಡೌನ್ ನಡುವೆ ಮಧುರೈನಲ್ಲಿ ಜೋಡಿಯೊಂದು ವಿಮಾನದಲ್ಲಿ ಮದುವೆಯಾಗಿರುವುದು ನಾಗರೀಕ ವಿಮಾನಯಾನ ನಿರ್ದೇಶನಾಲಯದ ಕೋಪಕ್ಕೆ ಕಾರಣವಾಗಿದೆ. ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಧುರೈನಲ್ಲಿ ವಿಮಾನ ಹಾರಾಟದ ವೇಳೆ ಜೋಡಿಯೊಂದು ಮದುವೆಯಾಗಿದ್ದು, ಈ ಸಂಬಂಧ ಸ್ಪೈಸ್ ಜೆಟ್ ಚಾರ್ಟರ್ಡ್ ವಿಮಾನ ಸಿಬ್ಬಂದಿಯನ್ನು ಡಿಜಿಸಿಎ ಅಮಾನತುಗೊಳಿಸಿದೆ.

ಮೇ 23ರಂದು ಮಧುರೈನ ರಾಕೇಶ್ ಹಾಗೂ ದೀಕ್ಷನಾ ಮಧುರೈ-ತೂತುಕುಡಿ ವಿಮಾನದಲ್ಲಿ ತಮ್ಮ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಮಾರು 160 ಜನ ವಿಮಾನದಲ್ಲಿದ್ದರು ಎನ್ನಲಾಗಿದ್ದು, ಈ ಮದುವೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಮಧುರೈ ಮೀನಾಕ್ಷಿ ದೇವಸ್ಥಾನದ ಮೇಲೆ ವಿಮಾನ ಹಾದು ಹೋಗುವ ಸಂದರ್ಭ ಈ ಜೋಡಿ ಮದುವೆಯಾಗಿತ್ತು.

ವೈರಲ್; ಲಾಕ್‌ಡೌನ್‌ ನಡುವೆ ವಿಮಾನದಲ್ಲಿ ಮದುವೆಯಾಗಿ ಸುದ್ದಿಯಾದ ಜೋಡಿವೈರಲ್; ಲಾಕ್‌ಡೌನ್‌ ನಡುವೆ ವಿಮಾನದಲ್ಲಿ ಮದುವೆಯಾಗಿ ಸುದ್ದಿಯಾದ ಜೋಡಿ

ಕೋವಿಡ್ ನಿಯಮ ಉಲ್ಲಂಘನೆ ಕಾರಣವಾಗಿ ವಿಮಾನ ಸಿಬ್ಬಂದಿಯನ್ನು ಅಮಾನತು ಮಾಡಿದ್ದೇವೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿರುವ ಪ್ರಯಾಣಿಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

Mid Air Wedding In Spice Jet DGCA Suspends Crew Over Floating Covid Norms

ಮಧುರೈನ ಟ್ರಾವರ್ ಏಜೆಂಟ್ ಒಬ್ಬರ ಮೂಲಕ ಮೇ 23ರಂದು ಸ್ಪೈಸ್ ಜೆಟ್ ಬೋಯಿಂಗ್ 737 ಚಾರ್ಟರ್ಡ್ ವಿಮಾನ ಬುಕ್ ಮಾಡಲಾಗಿತ್ತು. ವಿವಾಹದ ನಂತರ ಜಾಲಿ ರೈಡ್‌ಗೆ ವಿಮಾನ ಬುಕ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಕೊರೊನಾ ಮಾರ್ಗಸೂಚಿ ಕುರಿತು ವಿವರಿಸಿದ್ದೆವು. ಫೋಟೊ, ವಿಡಿಯೊ ಚಿತ್ರೀಕರಣ ಮಾಡಬಾರದು ಎಂದು ಕೂಡ ತಿಳಿಸಿದ್ದೆವು. ಆದರೂ ನಿಯಮಗಳನ್ನು ಪಾಲಿಸಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೈಸ್ ಜೆಟ್ ತಿಳಿಸಿದೆ.

ವಿಮಾನದಲ್ಲಿ ಪ್ರಯಾಣಿಸುವವರು ಎಲ್ಲಾ ಕೊರೊನಾ ನಿಯಮಾವಳಿಗಳನ್ನು ಪಾಲಿಸುವ ಸಂಬಂಧ ನಿಗಾ ವಹಿಸಬೇಕೆಂದು ಕಳೆದ ಮಾರ್ಚ್‌ನಲ್ಲಿ ಡಿಜಿಸಿಎ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ನಿಯಮಗಳನ್ನು ಪಾಲಿಸದ ಪ್ರಯಾಣಿಕರ ವಿಮಾನ ಯಾನಕ್ಕೆ ಅವಕಾಶ ಕೊಡಬಾರದು, ಅವರನ್ನು "ನೋ ಫ್ಲೈ" ಪಟ್ಟಿಗೆ ಸೇರಿಸಬೇಕು ಎಂದು ನಿರ್ದೇಶನ ನೀಡಿತ್ತು.

English summary
DGCA suspended crew of Spicejet chartered plane after wedding took place mid air in aircraft at madurai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X