ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷಗಳ ನಂತರ ಭರ್ತಿಯಾದ ಮೆಟ್ಟೂರು ಅಣೆಕಟ್ಟು!

By Mahesh
|
Google Oneindia Kannada News

ಚೆನ್ನೈ, ಜುಲೈ 24: ಮುಂಗಾರು ಮಳೆಯ ಅಬ್ಬರ ಪರಿಣಾಮ ಕರ್ನಾಟಕ ಕೃಷ್ಣರಾಜ ಸಾಗರ ಅಣೆಕಟ್ಟು ಗರಿಷ್ಠ ಮಟ್ಟ ತಲುಪಿದೆ. ಇದಾದ ಬಳಿಕ

ಜೂನ್ ತಿಂಗಳಲ್ಲಿ ರಾಜ್ಯದಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಬೇಕಿತ್ತು, ಆದರೆ, ಆ ತಿಂಗಳಲ್ಲೇ 13.29 ನೀರು ಹರಿದುಹೋಗಿದೆ. ಜುಲೈನಲ್ಲಿ 31.24 ಟಿಎಂಸಿ ನೀರು ಹರಿಸಬೇಕಿದ್ದು, ಎರಡು ತಿಂಗಳಿಂದ ಹರಿಸಬೇಕಿರುವ ಬಾಕಿ 12.09 ಟಿಎಂಸಿ. ಆದರೆ, ತಿಂಗಳ ಪ್ರಾರಂಭದಲ್ಲೇ 14.72 ಟಿಎಂಸಿ ನೀರು ಹರಿದು ಹೋಗಿದೆ.

ಮಳೆರಾಯನ ಕೃಪೆ: ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರುಮಳೆರಾಯನ ಕೃಪೆ: ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು

ಜುಲೈ 16ರ ವೇಳೆಗೆ 79 ಅಡಿಯಷ್ಟಿತ್ತು. ಜುಲೈ 23ರಂದು ಮೆಟ್ಟೂರಿನ ಅಣೆಕಟ್ಟಿನ ಪ್ರಮಾಣ ಗರಿಷ್ಠ ಮಟ್ಟ ತಲುಪಿತು. ಮೆಟ್ಟೂರಿನ ಶಾಸಕ ಸೆಮ್ಮಲೈ ಅವರು ಬಾಗಿನ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ಸುಮಾರು 85 ವರ್ಷಗಳ ಇತಿಹಾಸ ಹೊಂದಿರುವ ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯವು ಸೋಮವಾರ ಸಂಜೆ ವೇಳೆಗೆ ಮತ್ತೊಂದು ಮೈಲಿಗಲ್ಲು ದಾಟಿತು. 39ನೆ ಬಾರಿಗೆ ಗರಿಷ್ಠ ಮಟ್ಟ ದಾಟಿದ್ದು, 2013ರ ಅಗಸ್ಟ್ ಬಳಿಕ 120 ಅಡಿ ದಾಟಿತು.

ನೀರಾವರಿ ಪ್ರದೇಶಕ್ಕೆ ಹರಿವು

ನೀರಾವರಿ ಪ್ರದೇಶಕ್ಕೆ ಹರಿವು

ಕಾವೇರಿ ಜಲಾನಯನ ಪ್ರದೇಶದಿಂದ ಹರಿದು ಬಂದ ಹೆಚ್ಚುವರಿ ನೀರಿನ ದೆಸೆಯಿಂದ 70, 000ಕ್ಕೂ ಅಧಿಕ ಕ್ಯೂಸೆಕ್ಸ್ ಒಳ ಹೊರಿವು ಸೇರಿಸಿಕೊಂಡು 80,000ಕ್ಕೂ ಕ್ಯೂಸೆಕ್ಸ್ ಹೊರಬಿಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಬಿ ಅವರು ಹೇಳಿದ್ದಾರೆ. ಕಾವೇರಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಅನೇಕ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.

ಮೆಟ್ಟೂರು ಅಣೆಕಟ್ಟು

ಮೆಟ್ಟೂರು ಅಣೆಕಟ್ಟು

ಭಾನುವಾರ ಸಂಜೆ ವೇಳೆಗೆ 16 eye sluices ಅಣೆಕಟ್ಟಿನ ಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೊದಲ ಹಂತದಲ್ಲಿ 7,500 ಕ್ಯೂಸೆಕ್ಸ್ ನೀರನ್ನು ಬಿಡಲಾಯಿತು. ಪೂರ್ವ ಹಾಗೂ ಪಶ್ಚಿಮ ಭಾಗದ ಕಾಲುವೆಗಳಿಗೆ ನೀರು ಹರಿಸಲಾಯಿತು.

ಪ್ರವಾಹದ ಎಚ್ಚರಿಕೆ ನೀಡಿದ್ದರೂ ನದಿ ತೀರದಲ್ಲಿ ಸುಳಿದಾಡಿದ್ದರಿಂದ 55 ವರ್ಷ ವಯಸ್ಸಿನ ನಮ್ಮಕಲ್ ಜಿಲ್ಲೆಯ ಪಲ್ಲಿಪಲ್ಯಂ ನಿವಾಸಿ ಕಥರ್ ವಾರ್ಯನ್ ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಚೆನ್ನೈ ನಗರ, ಕೆರೆಗಳಿಗೆ ನೀರು

ಚೆನ್ನೈ ನಗರ, ಕೆರೆಗಳಿಗೆ ನೀರು

ಚೆನ್ನೈ ಮೆಟ್ರೋಪಾಲಿಟನ್ ನೀರು ಸರಬರಾಜು ಹಾಗೂ ಒಳ ಚರಂಡಿ ಪೂರೈಕೆ ಮಂಡಳಿಗೆ ಈಗ ಹೆಚ್ಚಿನ ಕೆಲಸ ಸಿಕ್ಕಿದೆ. ವೀರನಂ ಕೆರೆ ತುಂಬಿದ್ದು, ಕುಡಿಯುವ ನೀರಿನ ಬವಣೆ ತಪ್ಪುತ್ತಿದೆ. ಪೊಂಡಿ, ಚೆಂಬರಂಬಕ್ಕಮ್, ಚೋಲಾವರಂ ಹಾಗೂ ರೆಡ್ ಹಿಲ್ಸ್ ಪ್ರದೇಶದ ಕೆರೆಗಳು ತುಂಬಿಕೊಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿದ್ದಂತಾಗಿದೆ.

ಒಟ್ಟಾರೆ 177.25 ಟಿಎಂಸಿ ಅಡಿ ನೀರು

ಒಟ್ಟಾರೆ 177.25 ಟಿಎಂಸಿ ಅಡಿ ನೀರು

ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡು 45.95 ಟಿಎಂಸಿ ಅಡಿ ನೀರು, ಸೆಪ್ಟೆಂಬರ್ ನಲ್ಲಿ 36.76 ಟಿಎಂಸಿ ಅಡಿ ನೀರು, ಅಕ್ಟೋಬರ್ ನಲ್ಲಿ 20.22 ಟಿಎಂಸಿ ಅಡಿ ನೀರು, ನವೆಂಬರ್ ನಲ್ಲಿ 13.78 ಟಿಎಂಸಿ ಅಡಿ ನೀರು, ಡಿಸೆಂಬರ್ ನಲ್ಲಿ 7.35 ಟಿಎಂಸಿ ಅಡಿ ನೀರು, ಜನವರಿಯಲ್ಲಿ 2.76 ಟಿಎಂಸಿ ಅಡಿ, ಫೆಬ್ರವರಿಯಿಂದ ಮೇ ತನಕ 2.50 ಟಿಎಂಸಿ ಅಡಿ, ಒಟ್ಟಾರೆ 177.25 ಟಿಎಂಸಿ ಅಡಿ ನೀರು ಸಿಗಲಿದೆ. ಈಗ ಮಳೆ ಹೆಚ್ಚಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ( ಸುಮಾರು 5 ಟಿಎಂಸಿಯಾದರೂ) ನೀರು ತಮಿಳುನಾಡಿಗೆ ಸಿಗಲಿದೆ.

English summary
The water touched its full reservoir level (FRL) of 120-feet at histrotic Stanley reservoir at Mettur Dam. The last time dam was full was first week of August 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X