ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

|
Google Oneindia Kannada News

ಚೆನ್ನೈ, ನವೆಂಬರ್ 12: ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಕೇಂದ್ರ ಎಚ್ಚರಿಕೆ ನೀಡಿದೆ.

ಗುರುವಾರ ಚೆನ್ನೈ ನಗರದಲ್ಲಿ ಭಾಗಶಃ ಮಳೆಯಾಗಿತ್ತು. ನುಂಗಂಬಕಂನಲ್ಲಿ 29 ಮಿಮೀ ಮತ್ತು ಮೀನಾಂಬಕ್ಕಂನಲ್ಲಿ 24 ಮಿಮೀ ಮಳೆ ಸುರಿದಿತ್ತು. ಶುಕ್ರವಾರ ಧಾರಾಕಾರ ಮಳೆ ಸುರಿಯುವ ನಿರೀಕ್ಷೆಯಿದೆ.

ಬೆಂಗಳೂರು, ಮಂಗಳೂರಲ್ಲಿ ಮಳೆ ಸುರಿಯುವ ಮುನ್ಸೂಚನೆಬೆಂಗಳೂರು, ಮಂಗಳೂರಲ್ಲಿ ಮಳೆ ಸುರಿಯುವ ಮುನ್ಸೂಚನೆ

ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲಪಟ್ಟು, ಕುಡ್ಡಲೋರ್, ನಾಗಪಟ್ಟಿಣಂ, ತಿರುವರೂರ್, ಮೈಲಾದುರೈ ಜಿಲ್ಲೆಗಳಲ್ಲಿ ಮತ್ತು ಕರೈಕಲ್ ಪ್ರದೇಶದಲ್ಲಿ ಮಳೆ ಸುರಿಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Meteorogical Centre Issue Warning Of Heavy Rainfall In Tamil Nadu

ಶ್ರೀಲಂಕಾದ ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಿಂದ ಉತ್ತರ ಆಂಧ್ರಪ್ರದೇಶದ ಪಶ್ಚಿಮಕೇಂದ್ರ ಬಂಗಾಳ ಕೊಲ್ಲಿಯವರೆಗೆ ಸುಳಿಗಾಳಿಯು ಈಗ ಉತ್ತರ ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳ ಕೊಲ್ಲಿಯಡೆಗೆ ಚಂಡಮಾರುತದ ಸನ್ನಿವೇಶ ಉಂಟುಮಾಡಿದೆ. ಇಲ್ಲಿ ಗರಿಷ್ಠ 28 ಡಿಗ್ರಿ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.

ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ನವೆಂಬರ್ 12 ರಿಂದ 14ರವರೆಗೆ ಮೋಡಕವಿದ ವಾತಾವರಣ ಇರಲಿದ್ದು, ಮಳೆ ಸುರಿಯಬಹುದು ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕೂಡ ಮಳೆ ಬೀಳುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಉತ್ತರ ಒಳನಾಡಲ್ಲಿ ಒಣಹವೆ, ಬೆಂಗಳೂರಲ್ಲಿ ನ.14ರ ತನಕ ಮಳೆಉತ್ತರ ಒಳನಾಡಲ್ಲಿ ಒಣಹವೆ, ಬೆಂಗಳೂರಲ್ಲಿ ನ.14ರ ತನಕ ಮಳೆ

ಶುಕ್ರವಾರದ ವೇಳೆಗೆ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆ ನಿರೀಕ್ಷಿಸಬಹುದು ಎಂದು ಇಲಾಖೆ ಹೇಳಿದೆ.

English summary
Meteorogical centre has issued warning of heavy rainfall in Chennai and neighbourhood districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X