ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖವಾಡ ತೊಟ್ಟ ಕಳ್ಳರಿಂದ ಲಲಿತಾ ಜ್ಯುವೆಲರ್ಸ್‌ನಿಂದ 50 ಕೋಟಿ ಮೌಲ್ಯದ ಆಭರಣ ಕಳವು

|
Google Oneindia Kannada News

ತಿರುಚನಾಪಳ್ಳಿ, ಅಕ್ಟೋಬರ್ 2: ಹಾಲಿವುಡ್‌ನ 'ದಿ ಡಾರ್ಕ್ ನೈಟ್' ಸಿನಿಮಾದಲ್ಲಿ ಬ್ಯಾಟ್‌ಮನ್, ಜೋಕರ್‌ ಮುಖವಾಡ ಧರಿಸಿದ ವ್ಯಕ್ತಿಗಳು ಬ್ಯಾಂಕ್ ದರೋಡೆ ಮಾಡುವ ಕಥೆಯನ್ನು ನೆನಪಿಸುವ ಘಟನೆ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದಿದೆ.

ತಿರುಚಿಯ ಚತಿರಾಮ್ ಬಸ್ ನಿಲ್ದಾಣದ ಸಮೀಪದ ಲಲಿತಾ ಜ್ಯುವೆಲರ್ಸ್‌ಗೆ ಬುಧವಾರ ನಸುಕಿನಲ್ಲಿ ಕನ್ನ ಹಾಕಿದ ಮುಖವಾಡ ತೊಟ್ಟ ಇಬ್ಬರು ವ್ಯಕ್ತಿಗಳು ಸುಮಾರು 50 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಆಭರಣದಂಗಡಿಯ ಗೋಡೆಯನ್ನು ಕೊರೆದು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ಅಂಗಡಿ ಸಿಬ್ಬಂದಿ ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ಮಳಿಗೆಯ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಟಿಕ್ ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್ ಲಪಟಾಯಿಸಿದರುಟಿಕ್ ಟಾಕ್ ಮಾಡಲು ಕ್ಯಾಮೆರಾ, ಲ್ಯಾಪ್ ಟಾಪ್ ಲಪಟಾಯಿಸಿದರು

ಬೆಳಗಿನ ಜಾವ 2-3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಪ್ರಾಣಿಗಳನ್ನು ಹೋಲುವ ಫ್ಯಾನ್ಸಿ ಮುಖವಾಡ ತೊಟ್ಟ ಇಬ್ಬರು ದುಷ್ಕರ್ಮಿಗಳು ಆಭರಣಗಳನ್ನು ಕದಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆಯಾಗಿದೆ.

Masked Robbers Stole Rs 50 Crore Ornaments In Trichy Lalitha Jewellery

ಕೆಳಮಹಡಿಯಲ್ಲಿ ಇರಿಸಿದ್ದ ಎಲ್ಲ ಆಭರಣಗಳೂ ಕಳುವಾಗಿವೆ. ಅಂದಾಜಿನ ಪ್ರಕಾರ ಸುಮಾರು 35 ಕೆಜಿಯಷ್ಟು ಚಿನ್ನ ಹಾಗೂ ವಜ್ರದ ಆಭರಣಗಳನ್ನು ಕಳವು ಮಾಡಲಾಗಿದೆ. ಪೊಲೀಸ್ ಶ್ವಾನಗಳು ತಮ್ಮನ್ನು ಪತ್ತೆಹಚ್ಚದಂತೆ ಅವರು ಖಾರದ ಪುಡಿಗಳನ್ನು ಅಲ್ಲಿ ಚೆಲ್ಲಾಡಿದ್ದಾರೆ.

ಎರಡು ಮಾವಿನಹಣ್ಣು ಕದ್ದಿದ್ದ ಭಾರತೀಯ ನೌಕರ ದುಬೈನಿಂದ ಗಡೀಪಾರುಎರಡು ಮಾವಿನಹಣ್ಣು ಕದ್ದಿದ್ದ ಭಾರತೀಯ ನೌಕರ ದುಬೈನಿಂದ ಗಡೀಪಾರು

ವಿಧಿವಿಜ್ಞಾನ ಪ್ರಯೋಗದ ಪರಿಣತರು ಇಡೀ ಮಳಿಗೆಯನ್ನು ಜಾಲಾಡಿದ್ದಾರೆ. ಸ್ಕ್ರೂಡ್ರೈವರ್ ಮತ್ತು ಕೆಲವು ಸಾಧನಗಳು ಮಾತ್ರ ಅಲ್ಲಿ ಪತ್ತೆಯಾಗಿವೆ.

Masked Robbers Stole Rs 50 Crore Ornaments In Trichy Lalitha Jewellery

"ಎಣ್ಣೆ" ಅಂಗಡಿ ಚಿಲ್ಲರೆಗೆ ಹೋಗಿ ಎರಡು ಲಕ್ಷ ಕಳೆದುಕೊಂಡ್ರು

ಈ ವರ್ಷದ ಜನವರಿಯಿಂದ ತಿರುಚಿಯಲ್ಲಿ ನಡೆದಿರುವ ಬೃಹತ್ ಕಳ್ಳತನದ ಎರಡನೆಯ ಪ್ರಕರಣ ಇದಾಗಿದೆ. ಜನವರಿಯಲ್ಲಿ ಮುಸುಕುಧರಿಸಿದ್ದ ವ್ಯಕ್ತಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಶಾಖೆಯೊಂದಕ್ಕೆ ಕನ್ನ ಹಾಕಿ ಮೂರು ಲಾಕರ್‌ಗಳನ್ನು ಒಡೆದು 19 ಲಕ್ಷ ನಗದು, 470 ಸವರನ್ ಚಿನ್ನ ಮತ್ತು ದಾಖಲೆಗಳನ್ನು ಕದ್ದಿದ್ದರು.

English summary
Two masked men stole gold and diamond ornaments worth Rs 50 crore from Lalitha Jewellery in Trichy in the early hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X