ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರದ ಸ್ಪ್ಯಾನರ್‌ ಮೂಲಕ ಕಳ್ಳ ಸಾಗಣೆ ಪ್ರಯತ್ನ: ಏರ್‌ಪೋರ್ಟ್‌ನಲ್ಲಿ ಬಂಧನ

|
Google Oneindia Kannada News

ಚೆನ್ನೈ, ಮೇ 11: ಗಲ್ಫ್ ಹಾಗೂ ದುಬೈನಿಂದ ಬರುವ ಪ್ರಯಾಣಿಕರು ಚಿನ್ನವನ್ನು ಕಳ್ಳಸಾಗಣೆ ಮಾಡುವ ಪ್ರಕರಣಗಳು ಸಾಕಷ್ಟು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬೆಳಕಿಗೆ ಬರುತ್ತಿರುತ್ತವೆ. ಆದರೆ ಇಲ್ಲೊಂದು ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಯಾಣಿಕರೊಬ್ಬನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ಈ ಪ್ರಯಾಣಿಕ ಕಳ್ಳಸಾಗಣೆ ಮೂಲಕ ಬಂಗಾರವನ್ನು ಸಾಗಿಸಲು ಮಾಡಿರುವ ಉಪಾಯ, ಒಟ್ಟು 1.020 ಕೆಜಿ ತೂಕದ ಹಾಗೂ 47.56 ಲಕ್ಷ ರೂ. ಮೌಲ್ಯದ ಚಿನ್ನವನ್ನು ಆಭರಣದಂತೆ ಸ್ಪ್ಯಾನರ್‍‌ಗಳನ್ನು ಮಾಡಿಸಿ ಕಳ್ಳಸಾಗಣೆಗೆ ಯತ್ನಿಸಿದ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಭಾರತಕ್ಕೆ ಹೋಲಿಸಿದರೆ ಗಲ್ಫ್ ರಾಷ್ಟ್ರಗಳಲ್ಲಿ ಚಿನ್ನದ ಬೆಲೆ ಕಡಿಮೆ. ಚಿನ್ನದ ಮೇಲೆ ಕಡಿಮೆ ತೆರಿಗೆ ಇರುವುದೇ ಇದಕ್ಕೆ ಕಾರಣ. ಗಲ್ಪ್‌ ರಾಷ್ಟ್ರಗಳಿಂದ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಹಿಂದೆಯೂ ಸೌದಿ ಅರೇಬಿಯಾ, ಯುಎಇ, ದುಬೈ, ಇರಾಕ್‌ನಂತಹ ಗಲ್ಫ್ ರಾಷ್ಟ್ರಗಳಿಂದ ಹಿಂದಿರುಗುವ ಪ್ರಯಾಣಿಕರನ್ನು ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಚಿನ್ನದೊಂದಿಗೆ ಬಂಧಿಸಲಾಗಿತ್ತು. ಇದೀಗ ಈ ಪ್ರಕರಣ ಚೆನ್ನೈನಿಂದ ಬೆಳಕಿಗೆ ಬಂದಿದ್ದು ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಸ್ಪ್ಯಾನ್ಗಳನ್ನು ವಶಪಡಿಸಕೊಂಡು ಪ್ರಯಾಣಿಕನನ್ನು ಬಂಧಿಸಿದೆ.

Man held with gold spanners worth over Rs 47 lakh at Chennai airport

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ಆರು ಚಿನ್ನದ ಸ್ಪ್ಯಾನರ್ ಸಮೇತ ಪ್ರಯಾಣಿಕನನ್ನು ಬಂಧಿಸಿಲಾಗಿದೆ ಎಂದು ತಿಳಿಸಿದ್ದು, ಕಸ್ಟಮ್ ಅಧಿಕಾರಿಗಳ ಪ್ರಕಾರ ವಶಪಡಿಸಿಕೊಂಡಿರುವ ಸ್ಪಾನರ ಚಿನ್ನದ ತೂಕ 1.020 ಕೆಜಿ ಇದರ ಅಂದಾಜು ಬೆಲೆ 47.56 ಲಕ್ಷ ರೂ. ಪ್ರಾಯಾಣಿಕ ರಿಯಾದ್‌ ಎಂಬಾತನೇ ಗಲ್ಪ್‌ ದೇಶದಿಂದ ಹಿಂತಿರುಗುತ್ತಿದ್ದ ವೇಳೆ ಸ್ಪ್ಯಾನರ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಕಸ್ಟಮ್ಸ್ಗೆ ಮಣ್ಣೆರಚಲು ಬಂಗಾರದ ಸ್ಪ್ಯಾನರ್ ಮಾಡಿಸಿದ

ಚಿನ್ನ ವಶಪಡಿಸಿಕೊಂಡ ನಂತರ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ಬಂಧಿಸಿದ್ದಾರೆ. ಈ ಪ್ರಕರಣ ಕುರಿತು ಅಗತ್ಯ ವಿಚಾರಣೆಯ ನಂತರ ಕಳ್ಳಸಾಗಣೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿ ಪ್ರಯಾಣಿಕನ್ನು ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಪ್ರಯಾಣಿಕನು ಕಸ್ಟಮ್ಸ್ ತಪ್ಪಿಸಲು ಚಿನ್ನವನ್ನು 6 ಸ್ಪ್ಯಾನರ್‍‌ಗಳನ್ನು ಮಾಡಿಸಿದ್ದಾನೆ. ಇದು ಸಾಮಾನ್ಯ ಸ್ಪ್ಯಾನರ್ ಎಂದು ಎಲ್ಲರು ಗಮನಿಸಬಹುದು ಎಂದು ರಿಯಾದ್ ಕಳಸಾಗಣೆಗೆ ಯತ್ನಿಸಿದ್ದಾನೆ ಆದರೆ ಯಶಸ್ವಿಯಾಗದೇ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.

ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ರೀಯಾದ್‌ನ ನಡೆ ಕಸ್ಟಮ್ಸ್ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನ ಮೂಡಿಸಿತ್ತು. ನಂತರ ಕಸ್ಟಮ್ಸ್ ಮತ್ತು ವಿಮಾನ ನಿಲ್ದಾಣದ ಭದ್ರತೆಯಲ್ಲಿ ತೊಡಗಿದ್ದ ಜವಾನರು ಅವರ ಬ್ಯಾಗ್‌ನ್ನು ಪರಿಶೀಲಿಸಿದರು. ಹುಡುಕಾಟದ ಸಮಯದಲ್ಲಿ, ಈ ಸ್ಪ್ಯಾನರ್‍‌ಗಳು ಆತನ ಬ್ಯಾಗ್‌ನಿಂದ ಪತ್ತೆಯಾಗಿವೆ. ನೋಡಲು ಸಾಮಾನ್ಯವಾಗಿ ಕಾಣುವು ಈ ಸ್ಪ್ಯಾನರ್‍‌ಗಳು ತನಿಖೆಯಲ್ಲಿ ಅವು ಪಕ್ಕಾ ಚಿನ್ನದ ಸ್ಪ್ಯಾನರ್‍‌ಗಳು ಎಂದು ತಿಳಿದು ಬಂದಿದೆ. ಬಳಿಕ ಪ್ರಯಾಣಿಕನನ್ನು ಬಂಧಿಸಿ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ತನಿಖಾ ಅಧಿಕಾರಿಗಳು ತಿಳಸಿದರು.

English summary
47.56 lakhs. Customs officials at Chennai airport have arrested a man who attempted to smuggle worth of gold into a spanner model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X