ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಮಹಿಳೆಗೆ ಚೀನಾಕ್ಕೆ ಹೋಗಿ ಎಂದು ನಿಂದಿಸದವ ಬಂಧನ!

|
Google Oneindia Kannada News

ಚೆನ್ನೈ, ಮೇ 19 : ಮಣಿಪುರ ಮೂಲದ ಮಹಿಳೆಗೆ ಕಿರುಕುಳ ನೀಡಿದ ಕಾರಣಕ್ಕೆ ಆಂಬ್ಯುಲೆನ್ಸ್ ಚಾಲಕನ್ನು ಬಂಧಿಸಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಇಲ್ಲಿ ಕೊರೊನಾ ಹರಡುವ ಬದಲು ನೀವು ಚೀನಾಕ್ಕೆ ಹೋಗಿ ಎಂದು ಮಹಿಳೆಯನ್ನು ಚಾಲಕ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು 27 ವರ್ಷದ ಎಂ.ವಿಘ್ನೇಶ್ ಎಂದು ಗುರುತಿಸಲಾಗಿದೆ. ಮಣಿಪುರ ಮೂಲದ ಮಹಿಳೆ ಮತ್ತು ಆಕೆಯ 19 ವರ್ಷದ ಸ್ನೇಹಿತೆಗೆ ವಿಘ್ನೇಶ್ ಕಿರುಕುಳ ನೀಡಿ, ನಿಂದಿಸಿದ್ದಾನೆ ಎಂದು ದೂರು ದಾಖಲಾಗಿದೆ. ನೀವು ಚೀನಾಕ್ಕೆ ಹೋಗಿ ಇಲ್ಲಿ ಕೊರೊನಾ ಹರಡಬೇಡಿ ಎಂದು ಅವರ ಜೊತೆ ಚಾಲಕ ಜಗಳವಾಡಿದ್ದಾನೆ.

ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ! ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ!

ಕೊಯಮತ್ತೂರಿನಲ್ಲಿ ಕಳೆದ 5 ತಿಂಗಳಿನಿಂದ ಮಣಿಪುರ ಮೂಲದ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಭಾನುವಾರ ಅವರು ಅಗತ್ಯ ವಸ್ತುಗಳ ಖರೀದಿಗೆ ಹೋಗಿದ್ದಾಗ ವಿಘ್ನೇಶ್ ಮಾತನಾಡಿಸಿದ್ದಾನೆ. ಹಲೋ ಸಿಸ್ಟರ್ ಎಂದು ಮಾತು ಆರಂಭಿಸಿದ ಆತ ಬಳಿಕ ಇಬ್ಬರನ್ನೂ ನಿಂದಿಸಿದ್ದಾನೆ. ಜಗಳವಾಡಿದ್ದಾನೆ.

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ಮತ್ತೊಂದು ಶಾಕಿಂಗ್ ನ್ಯೂಸ್!

Man Arrested For Demand Manipur Women To Go Back To China

ಗೋ ಕೊರೊನಾ ಗೋ ಎಂದು ಘೋಷಣೆ ಕೂಗಿದ ವಿಘ್ನೇಶ್, ನೀವು ಇಲ್ಲಿ ಕೊರೊನಾ ಹರಡುವ ಬದಲು ಚೀನಾಕ್ಕೆ ಹೋಗಿ ಎಂದು ನಿಂದಿಸಿದ್ದಾನೆ. ನಾವು ಮಣಿಪುರದವರು ಎಂದು ಇಬ್ಬರು ಹೇಳಲು ಪ್ರಯತ್ನಿಸಿದರೂ ಆತ ಗಮನಕೊಟ್ಟಿಲ್ಲ, ಮಾತನಾಡಲು ಬಿಟ್ಟಿಲ್ಲ. ಅವರನ್ನು ನಿಂದಿಸಿದ್ದಾನೆ.

ತಂದೆ ಅಂತ್ಯಕ್ರಿಯೆ ತೆರಳಲಾಗದೇ ಬಸ್ ನಿಲ್ದಾಣದಲ್ಲೇ ಮಹಿಳೆ ಕಣ್ಣೀರು! ತಂದೆ ಅಂತ್ಯಕ್ರಿಯೆ ತೆರಳಲಾಗದೇ ಬಸ್ ನಿಲ್ದಾಣದಲ್ಲೇ ಮಹಿಳೆ ಕಣ್ಣೀರು!

ವಿಘ್ನೇಶ್ ನಿಂದನೆ ಮಾಡುವುದನ್ನು ಮಹಿಳೆ ವಿಡಿಯೋ ಚಿತ್ರೀಕರಣ ಮಾಡಿದ್ದು ಕ್ಷಮೆ ಯಾಚಿಸುವಂತೆ ಕೇಳಿದ್ದಾಳೆ. ಆದರೆ, ಆತ ನಿರಾಕರಿಸಿದ ಕಾರಣ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

English summary
Police arrested the ambulance driver in Coimbatore for abusing and harassing Manipuri women. He demanded the women to go back to China instead of spreading Coronavirus Coimbatore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X