ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಡ್ಡಿ ಧರಿಸುವ ವಿದ್ಯಾರ್ಥಿನಿಯರನ್ನು ವೇಶ್ಯೆ ಎನ್ನುವುದು ಸರಿಯೆ?

|
Google Oneindia Kannada News

ಚೆನ್ನೈ, ನವೆಂಬರ್ 23 : ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯ ಮುಂದೆಯೇ ಹಾಸ್ಟೆಲ್ ಲಿಫ್ಟ್ ನಲ್ಲಿ ಹಸ್ತ ಮೈಥುನ ಮಾಡಿಕೊಂಡಿದ್ದಲ್ಲದೆ, ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ 33 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ಘಟನೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಎನ್ಆರ್‌ಎಂ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್ ನಲ್ಲಿ ನಡೆದಿದ್ದು, ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಬೇಜವಾಬ್ದಾರಿತನದ ವಿರುದ್ಧ ಹೋರಾಟ ಮಾಡುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದ.

ಆ ವಿಕೃತ ಕಾಮುಕನನ್ನು ಬಂಧಿಸಲಾಗಿದೆಯಾದರೂ, ಮಹಿಳಾ ಹಾಸ್ಟೆಲ್ ಗೆ ನೀಡಲಾಗಿರುವ ಭದ್ರತೆಯ ಬಗ್ಗೆ, ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಇನ್ನೂ ಹಲವಾರು ಪ್ರಶ್ನೆಗಳು ಉಳಿದುಕೊಂಡಿವೆ. ಈ ಘಟನೆಯ ಕುರಿತಂತೆ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ನೀಡಿರುವ ಹೇಳಿಕೆ ಕೂಡ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರ ಕೋಪವನ್ನು ಶಮನ ಮಾಡಿಲ್ಲ.

ವಿದ್ಯಾರ್ಥಿನಿಯ ಎದುರಿಗೇ ಹಸ್ತಮೈಥುನ ಮಾಡಿದ ಸ್ವಚ್ಛತಾ ಸಿಬ್ಬಂದಿ! ವಿದ್ಯಾರ್ಥಿನಿಯ ಎದುರಿಗೇ ಹಸ್ತಮೈಥುನ ಮಾಡಿದ ಸ್ವಚ್ಛತಾ ಸಿಬ್ಬಂದಿ!

ಹಿಂದೆಯೂ ಇಂಥ ಘಟನೆ ನಡೆದಿರುವ ಬಗ್ಗೆ ಹಲವಾರು ವಿದ್ಯಾರ್ಥಿನಿಯರು ಹೇಳಿಕೆ ನೀಡುತ್ತಿದ್ದಾರೆ. ಹಲವಾರು ಯುವತಿಯರು ತಮಗಾದ ಲೈಂಗಿಕ ಕಿರುಕುಳ ಮತ್ತು ಅವಮಾನದ ಬಗ್ಗೆ ಕಥೆಗಳನ್ನು ಹೇಳುತ್ತಿದ್ದಾರೆ. ತಾವು ಉತ್ತರ ಭಾರತೀಯರಾಗಿದ್ದರಿಂದಲೇ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಮತ್ತು ತಮಗೆ ಬೇಕಾದಂಥ ಬಟ್ಟೆ ಧರಿಸಲು ಕೂಡ ಇಲ್ಲಿ ಸ್ವಾತಂತ್ರ್ಯವಿಲ್ಲ. ಚಡ್ಡಿ ಧರಿಸಿದರೂ ಸೂಳೆ ಎಂಬಂತೆ ಇಲ್ಲಿ ನೋಡಲಾಗುತ್ತಿದೆ ಎಂದು ಯುವತಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯುವತಿಯ ಎದುರಿನಲ್ಲಿಯೇ ಹಸ್ತ ಮೈಥುನ

ಯುವತಿಯ ಎದುರಿನಲ್ಲಿಯೇ ಹಸ್ತ ಮೈಥುನ

ಆಗಿದ್ದೇನೆಂದರೆ, ಎರಡನೇ ವರ್ಷ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಏಕಾಂಗಿಯಾಗಿ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ, ಕಸ ತೆಗೆಯುವ ವ್ಯಕ್ತಿಯೊಬ್ಬ ಆಕೆಯ ಎದುರಿನಲ್ಲೇ ಹಸ್ತ ಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಆತ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಆಕೆ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ವಾರ್ಡನ್ ಗೆ ದೂರು ನೀಡುವ ಹೊತ್ತಿಗೆ ಆತ ಅಲ್ಲಿಂದ ಪರಾರಿಯಾಗಿದ್ದ.

ಅತ್ಯಾಚಾರದ ವಿರುದ್ಧ ಕಿಡಿ, ಮಹಿಳೆಯರಿಂದ ವಿನೂತನ ಪ್ರತಿಭಟನೆ ಅತ್ಯಾಚಾರದ ವಿರುದ್ಧ ಕಿಡಿ, ಮಹಿಳೆಯರಿಂದ ವಿನೂತನ ಪ್ರತಿಭಟನೆ

ಸಿಗರೇಟು ಸೇದುತ್ತೀರಿ, ಮದ್ಯ ಸೇವಿಸುತ್ತೀರಿ

ಸಿಗರೇಟು ಸೇದುತ್ತೀರಿ, ಮದ್ಯ ಸೇವಿಸುತ್ತೀರಿ

ಈ ಕುರಿತು ವಾರ್ಡನ್ನಿಗೆ ದೂರು ನೀಡಿದಾಗ, ವಾರ್ಡನ್ ಸಿಸಿಟಿವಿ ಫುಟೇಜನ್ನು ನೋಡಲು ತಡ ಮಾಡಿದ್ದಲ್ಲದೆ, ನೀನೇ ಏಕಾಂಗಿಯಾಗಿ ಉಪಕುಲಪತಿಗೆ ದೂರು ನೀಡು. ಹೋಗುವಾಗ ಸಭ್ಯವಾಗಿ ಬಟ್ಟೆ ಧರಿಸಿಕೊಂಡು ಹೋಗು ಎಂದು ತರಾಟೆಗೆ ತೆಗೆದುಕೊಂಡಿದ್ದರೆಂದು ಆರೋಪಿಸಲಾಗಿದೆ. ಉಪಕುಲಪತಿ ಕೂಡ, ಅಂಥ ಘಟನೆ ಯಾವುದೂ ನಡೆದೇ ಇಲ್ಲ. ಏನೂ ನಡೆಯದಿದ್ದರೂ ದೊಡ್ಡ ರಾದ್ಧಾಂತ ಮಾಡಬೇಡಿ. ಏನೇ ಆಗಿದ್ದರೂ ಅದು ನಿಮ್ಮಂಥ ಉತ್ತರ ಭಾರತೀಯರಿಂದಲೇ ಆಗಿದ್ದು. ನೀವು ಕ್ಯಾಂಪಸ್ಸಿನಲ್ಲಿ ಸಿಗರೇಟು ಸೇದುತ್ತೀರಿ, ಕುಡಿಯುತ್ತಿರುವುದರಿಂದಲೇ ಇಂಥ ಘಟನೆಗಳು ನಡೆಯುತ್ತಿವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರಿಗೆ ಪಾಠ ಮಾಡಿದ್ದರು.

ಹಾಸನ: ಗಂಡನ ಲೈಂಗಿಕ ಹಿಂಸೆಗೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ನವವಧು ಆತ್ಮಹತ್ಯೆ ಹಾಸನ: ಗಂಡನ ಲೈಂಗಿಕ ಹಿಂಸೆಗೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ನವವಧು ಆತ್ಮಹತ್ಯೆ

ಅನೇಕ ಬಾರಿ ನಮ್ಮನ್ನು ತಬ್ಬಿಕೊಳ್ಳಲಾಗಿದೆ

ಅನೇಕ ಬಾರಿ ನಮ್ಮನ್ನು ತಬ್ಬಿಕೊಳ್ಳಲಾಗಿದೆ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸ್ಮಿತಾ ಎಂಬ ಯುವ ಪತ್ರಕರ್ತೆ, ಇಂಥ ಘಟನೆ ನಡೆಯುತ್ತಿದ್ದರಿಂದಲೇ ನಾನು ಹಾಸ್ಟೆಲ್ ಖಾಲಿ ಮಾಡಿದ್ದೆ. ನಮ್ಮ ರೂಂನಲ್ಲಿ ಪುರುಷರು ನೋಡುತ್ತಿದ್ದರಿಂದ ನಮಗೆ ತುಂಬಾ ಗಾಬರಿ ಆಗುತ್ತಿತ್ತು. ನಾವು ಕ್ಯಾಂಪಸ್ಸಿನಲ್ಲಿ ಅಡ್ಡಾಡುತ್ತಿದ್ದಾಗಲೇ ಅನೇಕ ಬಾರಿ ನಮ್ಮನ್ನು ತಬ್ಬಿಕೊಳ್ಳಲಾಗಿದೆ, ಲೈಂಗಿಕವಾಗಿ ಕಿರುಕುಳ ನೀಡಲಾಗಿದೆ. ನಮಗೆ ಇನ್ನೂ ಹೆಚ್ಚಿನ ಭದ್ರತೆ ಬೇಕು. ಇಲ್ಲಿ ಮಹಿಳಾ ಹಾಸ್ಟೆಲ್ ನಲ್ಲಿ ಭದ್ರತೆ ಎಂಬುದೇ ಇಲ್ಲ. ಯಾರು ಬೇಕಾದರೂ ಇಲ್ಲಿ ಬರಬಹುದು. ಇಲ್ಲಿ ಅಡ್ಡಾಡುವುದಕ್ಕೇ ಹೆದರಿಕೆ ಆಗುತ್ತದೆ. ಇಂದು ಒಬ್ಬ ವಿದ್ಯಾರ್ಥಿನಿಗೆ ಆಗಿದೆ, ನಾಳೆ ಬೇರೆಯವರಿಗೂ ಆಗುವುದಿಲ್ಲ ಎಂದು ಏನು ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಫ್ರೆಂಚ್ ವಿದ್ಯಾರ್ಥಿನಿಯ ಮೇಲೆ ಸ್ನೇಹಿತೆಯ ತಂದೆಯಿಂದ ಲೈಂಗಿಕ ದೌರ್ಜನ್ಯ ಫ್ರೆಂಚ್ ವಿದ್ಯಾರ್ಥಿನಿಯ ಮೇಲೆ ಸ್ನೇಹಿತೆಯ ತಂದೆಯಿಂದ ಲೈಂಗಿಕ ದೌರ್ಜನ್ಯ

ಚಡ್ಡಿ ಧರಿಸಿದ್ದಕ್ಕೆ ವೇಶ್ಯೆ ಎಂದು ಜರಿಯಲಾಗಿತ್ತು

ಚಡ್ಡಿ ಧರಿಸಿದ್ದಕ್ಕೆ ವೇಶ್ಯೆ ಎಂದು ಜರಿಯಲಾಗಿತ್ತು

ಇದು ಮೊದಲ ಬಾರಿ ಆಗಿದ್ದೇನಲ್ಲ. ನನಗೆ ಹುಷಾರಿಲ್ಲದಿದ್ದಾಗ, ಗೇಟಿನ ಬಳಿ ನನ್ನ ಸ್ನೇಹಿತನಿಂದ ಮಾತ್ರೆ ಇಸಿದುಕೊಂಡಿದ್ದಾಗ, ಆತನನ್ನು ಕಟ್ಟಿಗೆಯಿಂದ ಬಾರಿಸಲಾಗಿತ್ತು ಮತ್ತು ನಾನು ಚಡ್ಡಿ ಧರಿಸಿದ್ದರಿಂದ ನನ್ನನ್ನು ಹಿರಿಯ ವಾರ್ಡನ್ ವೇಶ್ಯೆ ಎಂದು ಜರಿದಿದ್ದರು. ನನಗೆ ಮಾತ್ರವಲ್ಲ, ನಮಗೆ ಬೇಕಾದಂಥ ಬಟ್ಟೆ ಧರಿಸಲೂ ಇಲ್ಲಿ ಸ್ವಾತಂತ್ರ್ಯವಿಲ್ಲ. ನೀವು ಉತ್ತರ ಭಾರತೀಯರಾಗಿದ್ದರೆ ನಿಮ್ಮನ್ನು ಸೂಳೆಯಂತೆ ನೋಡಲಾಗುತ್ತದೆ. ಆ ಎರಡನೇ ವರ್ಷದ ವಿದ್ಯಾರ್ಥಿನಿ ಧರಿಸಿದ್ದ ಕಾಮೋತ್ತೇಜಕ ಬಟ್ಟೆಯಿಂದಲೇ ಪ್ರೇರಿತನಾಗಿ ಆತ ಹಸ್ತ ಮೈಥುನ ಮಾಡಿಕೊಂಡಿದ್ದಾನೆ ಎಂದೂ ಹೇಳಲಾಗುತ್ತಿದೆ ಎಂದು ಹಳೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೇಡಿ ಲಿಫ್ಟ್ ಆಪರೇಟರ್ ನನ್ನು ನೋಡಿದ್ದೀರಾ?

ಲೇಡಿ ಲಿಫ್ಟ್ ಆಪರೇಟರ್ ನನ್ನು ನೋಡಿದ್ದೀರಾ?

ಈ ಘಟನೆಯ ಬಗ್ಗೆ ವಿಶ್ವವಿದ್ಯಾಲಯ ನೀಡಿರುವ ಹೇಳಿಕೆ ಕೂಡ ವಿಚಿತ್ರವಾಗಿದೆ. ಯಾವುದೇ ತ್ವರಿತ ಕೆಲಸವಿದ್ದಾಗ ಮತ್ತು ಆ ಕೆಲಸ ಮಾಡಬೇಕಾದವನು ಪುರುಷನಿದ್ದಾಗ, ಆತನನ್ನು ಲೇಡೀಸ್ ಹಾಸ್ಟೆಲ್ ನೊಳಗೆ ಬಿಡದಿರುವುದು ಮೂರ್ಖತನವಾಗುತ್ತದೆ. ನಾನು ಲೇಡಿ ಲಿಫ್ಟ್ ಆಪರೇಟರ್ ನನ್ನು ಎಲ್ಲಿಯೂ ನೋಡಿಲ್ಲ. ಈಗ ಆರೋಪಕ್ಕೆ ಒಳಗಾಗಿರುವವನು ಲಿಫ್ಟ್ ಆಪರೇಟರ್. ಆತನ ಹೊರತಾಗಿ ಬೇರೆ ಯಾರೂ ಪುರುಷ ನೌಕರರು ಇಲ್ಲಿ ಇಲ್ಲ. ಇನ್ನು ಮುಂದೆ ಪುರುಷನ ಜೊತೆ ಮಹಿಳಾ ಭದ್ರತಾ ಸಿಬ್ಬಂದಿ ಇದ್ದೇ ಇರುತ್ತಾರೆ. ಬರೀ ಮಹಿಳೆಯರನ್ನೇ ಇಟ್ಟುಕೊಂಡು ಇಷ್ಟು ದೊಡ್ಡ ಸಂಸ್ಥೆಯನ್ನು ನಡೆಸಲು ಸಾಧ್ಯವಿಲ್ಲ. ಆ ವಿದ್ಯಾರ್ಥಿನಿ ಧರಿಸಿದ್ದ ಬಟ್ಟೆಯ ಬಗ್ಗೆ ಸಲ್ಲದ ಮಾತು ಆಡಿದ್ದರ ಬಗ್ಗೆ ಕೇಳಿದಾಗ, ಇದರ ಬಗ್ಗೆ ನಾನಾ ಮಾತು ಕೇಳಿಬರುತ್ತಿವೆ. ವಿಚಾರಣೆ ನಡೆದ ನಂತರ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ಉಪಕುಲಪತಿ ಹೇಳಿಕೆ ನೀಡಿದ್ದಾರೆ.

English summary
Man accused of sexually harassing a girl in SRM University has been arrested, but many questions are yet to be answered. Many girls have alleged that they are slut shamed for wearing dress of their choice and many times they are groped and sexually harassed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X