ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ವಿಧಾನಸಭೆ ಚುನಾವಣೆ 2021; ಕಮಲ ಹಾಸನ್ ಪಕ್ಷದಿಂದ "ಉದ್ಯಮಕೆ ಕಾರ್ಯಸೂಚಿ" ಬಿಡುಗಡೆ

|
Google Oneindia Kannada News

ಚೆನ್ನೈ, ಜನವರಿ 13: ನಟ ಹಾಗೂ ಮಕ್ಕಳ ನೀದಿಮಯ್ಯಂ ಮುಖಂಡ ಕಮಲ ಹಾಸನ್, ಮುಂಬರುವ ತಮಿಳು ನಾಡು ವಿಧಾನಸಭೆ 2021ರ ಚುನಾವಣೆ ಸಲುವಾಗಿ ಏಳು ಅಂಶಗಳ "ಉದ್ಯಮಕ್ಕೆ ಎಂಎನ್ ಎಂ ಕಾರ್ಯಸೂಚಿ" ಬಿಡುಗಡೆ ಮಾಡಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಕ್ರಮಗಳ ಕುರಿತು ಈ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದರಲ್ಲಿ ಹೊಸ ಉದ್ಯೋಗ ಮಾದರಿ ಹಾಗೂ ಸಂಭವನೀಯ ಸಚಿವಾಲಯ, ಪಕ್ಷ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವಗಳಾಗಿವೆ. ಪಕ್ಷದ ಸಲುವಾಗಿ, ಕೈಗಾರಿಕಾ ಕ್ರಾಂತಿ 4.0ಗೆ ಉತ್ತೇಜನ ನೀಡಲು ವಿಜ್ಞಾನ ಹಾಗೂ ತಂತ್ರಜ್ಞಾನ, ಸ್ಟಾರ್ಟ್ ಅಪ್, ಆವಿಷ್ಕಾರಗಳಿಗೆ ಸಂಭವನೀಯ ಸಚಿವಾಲಯ ಸ್ಥಾಪಿಸಲಾಗುವುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ತಮಿಳುನಾಡು ಜನರಿಗೆ ಕಮಲ ಹಾಸನ್ ಕೊಟ್ಟ ಭರವಸೆಗಳು...ತಮಿಳುನಾಡು ಜನರಿಗೆ ಕಮಲ ಹಾಸನ್ ಕೊಟ್ಟ ಭರವಸೆಗಳು...

ಪ್ರಸ್ತಾವಿತ ಹೊಸ ಉದ್ಯೋಗ ಮಾದರಿ ವಿನೂತನ ಪರಿಕಲ್ಪನೆಯಾಗಿದ್ದು, ಯಾವುದೇ ವ್ಯವಹಾರ ಮಾದರಿಯ ಪ್ರಸ್ತಾವನೆಯಿಂದ ಅನುಮೋದನೆಯವರೆಗೆ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಲಾಗುತ್ತದೆ ಎಂದು ಪಕ್ಷ ತಿಳಿಸಿದೆ.

Makkal Needhi Maiam Leader Kamal Hassan Released Agenda For Industy

ಪ್ರತಿ ಜಿಲ್ಲೆಯಲ್ಲಿಯೂ ಕೌಶಲ್ಯಾಭಿವೃದ್ಧಿಗೆ "ಸೂಪರ್ ಪಾರ್ಕ್"ಗಳನ್ನು ನಿರ್ಮಿಸಲಿದ್ದು, ಅಸಂಘಟಿತ ಕಾರ್ಮಿಕರನ್ನು ಬಲಪಡಿಸಲು ಇದು ನೆರವಾಗುತ್ತದೆ ಎಂದು ಪಕ್ಷ ಹೇಳಿಕೊಂಡಿದೆ. ಇದು ಕಾರ್ಮಿಕರಿಗೆ ವಿಮೆ, ನಿವೃತ್ತಿ ವೇತನ, ಉದ್ಯೋಗ ಭದ್ರತೆ ವಿಷಯಗಳನ್ನು ಒಳಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇದೇ ಏಪ್ರಿಲ್- ಮೇ ತಿಂಗಳಿನಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿದ್ದು, ಕಮಲ್ ಹಾಸನ್ ಚುನಾವಣಾ ಪ್ರಚಾರ ಕಾರ್ಯವನ್ನು ಈಗಾಗಲೇ ಆರಂಭಿಸಿದ್ದಾರೆ.

English summary
Kamal Haasan-led Makkal Needhi Maiam on Wednesday announced a seven-point "MNM Agenda for Industry" in the poll-bound Tamil Nadu,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X