ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚ್ಛೇದಿತ ಪತ್ನಿಯರೇ ಜೀವನಾಂಶ ಬೇಕೇ? ನಿಷ್ಠೆಯಿಂದಿರಿ

By Vanitha
|
Google Oneindia Kannada News

ಚೆನ್ನೈ, ಆಗಸ್ಟ್, 18 : ವಿಚ್ಛೇದಿತ ಮಹಿಳೆ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಲ್ಲಿ, ಮಾಜಿ ಪತಿಯಿಂದ ಯಾವುದೇ ಜೀವನಾಂಶ ಪಡೆಯಲು ಸಾಧ್ಯ ಇರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.

ಪತ್ನಿ ಹೊಂದಿದ್ದ ಅನೈತಿಕ ಸಂಬಂಧದಿಂದ ನೊಂದ ಸರ್ಕಾರಿ ನೌಕರನೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಲಯ ವಿಚ್ಛೇದನಕ್ಕೆ ಅನುವು ಮಾಡಿಕೊಟ್ಟು, ಪತ್ನಿಗೆ ಮಾಸಿಕ 1000 ರೂ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು.[ರೇಪ್ ಆಯ್ತಾ, ಒಪ್ಪಂದ ಮಾಡ್ಕೊಳ್ಳಿ ಅಂದ ಮದ್ರಾಸ್ ಜಡ್ಜ್!]

Maintain 'Sexual Purity' After Divorce To Get Alimony From Ex-Husband, Madras Court Rules

ನ್ಯಾಯಾಲಯ ತೀರ್ಪಿಗೆ ಅಸಮಾಧಾನಗೊಂಡ ಸರ್ಕಾರಿ ನೌಕರ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದನು. ಈ ಪ್ರಕರಣ ಕೈಗೆತ್ತಿಕೊಂಡ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್‌. ನಾಗಮುತ್ತು ಅವರಿದ್ದ ಪೀಠ ತೀರ್ಮಾನ ಪ್ರಕಟಿಸಿದೆ.

ವಿವಾಹಿತ ಮಹಿಳೆ ಗಂಡನಿಂದ ವಿಚ್ಛೇದನ ಪಡೆದಾಗ ಜೀವನಾಂಶ ನೀಡಲಾಗುತ್ತದೆ. ಜೀವನಾಂಶ ಪಡೆಯುವ ಮಹಿಳೆಯು ಗಂಡನೊಂದಿಗೆ ನಿಷ್ಠಳಾಗಿ ನಡೆದುಕೊಳ್ಳಬೇಕು. ಕೌಟುಂಬಿಕ ನೀತಿಗಳಿಗೆ ವಿರೋಧವಾಗಿ ಆಕೆ ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದುವಂತಿಲ್ಲ.

ಹಾಗೇನಾದರೂ ಇದ್ದಲ್ಲಿ ಆಕೆ ಮಾಜಿ ಪತಿಯಿಂದ ಜೀವನಾಂಶ ಪಡೆಯುವ ಎಲ್ಲಾ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಈ ತೀರ್ಪು ಈಗಾಗಲೇ ಕಾನೂನು ಮೂಲಕ ವಿಚ್ಛೇದನ ಪಡೆದ ಮಹಿಳೆಗೂ ಅನ್ವಯವಾಗುತ್ತದೆ ಎಂದು ಮದ್ರಾಸ್ ಕೋರ್ಟ್ ತಿಳಿಸಿದೆ.

English summary
Madras High court has declared a judgement on Monday, which women maintain 'Sexual Purity' after divorce,they to get Alimony from Ex-husband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X