ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ ಪತ್ನಿಗೆ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ಹೈಕೋರ್ಟ್

|
Google Oneindia Kannada News

ಚೆನ್ನೈ, ಡಿಸೆಂಬರ್ 18: ಶಿಕ್ಷಣ ಸಂಸ್ಥೆಗಳ ಮೂಲಕ ಮಾಡಲಾಗಿರುವ ಅತಿಕ್ರಮಣವನ್ನು ತೆರವುಗೊಳಿಸದೆ ಇದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ನಟ, ರಾಜಕಾರಣಿ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರಿಗೆ ಎಚ್ಚರಿಕೆ ನೀಡಿದೆ. ಲತಾ ರಜನಿಕಾಂತ್ ಅವರಿ ಕಾರ್ಯದರ್ಶಿಯಾಗಿರುವ ಆಶ್ರಮ ಶಾಲೆಯಿಂದ ಆಕ್ರಮಿಸಿಕೊಂಡಿರುವ ಆವರಣವನ್ನು 2021ರ ಏಪ್ರಿಲ್ ಒಳಗೆ ತೆರವುಗೊಳಿಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಶ್ರೀ ರಾಘವೇಂದ್ರ ಎಜುಕೇಷನ್ ಅಸೋಸಿಯೇಷನ್‌ನಲ್ಲಿ ಲತಾ ರಜನಿಕಾಂತ್ ಅವರು ಕಾರ್ಯದರ್ಶಿಯಾಗಿದ್ದು, ಚೆನ್ನೈನ ಗುಯಿಂಡಿ ಪ್ರದೇಶದಲ್ಲಿ 'ಆಶ್ರಮ್' ಶಾಲೆ ನಡೆಸುತ್ತಿದ್ದಾರೆ. ಆದರೆ ವೆಂಕಟೇಶ್ವರಲು ಮತ್ತು ಪೂರ್ಣಚಂದ್ರ ರಾವ್ ಅವರಿಗೆ ಸೇರಿದ ಈ ಭೂಮಿಗೆ ಅವರು ಬಾಡಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಲಾಗಿದೆ.

ರಜನಿಕಾಂತ್ ಜೊತೆ ಮೈತ್ರಿ ಸುಳಿವು ನೀಡಿದ ಕಮಲ್ ಹಾಸನ್ರಜನಿಕಾಂತ್ ಜೊತೆ ಮೈತ್ರಿ ಸುಳಿವು ನೀಡಿದ ಕಮಲ್ ಹಾಸನ್

ಲತಾ ರಜನಿಕಾಂತ್ ಅವರ ಸಂಸ್ಥೆ ವಿರುದ್ಧ 2014ರಲ್ಲಿ ಭೂಮಾಲೀಕರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. 2013ರ ಮಾರ್ಚ್‌ವರೆಗೂ ಅವರು 99 ಲಕ್ಷ ರೂ ಬಾಡಿಗೆ ಉಳಿಸಿಕೊಂಡಿದ್ದು ಅದನ್ನು ಪಾವತಿ ಮಾಡುವಂತೆ ಸೂಚಿಸಲು ಕೋರಿದ್ದರು. ಪ್ರಕರಣ ಬಾಕಿ ಇರುವಾಗಲೇ 2017ರ ಆಗಸ್ಟ್ 16ರಲ್ಲಿ ಶಾಲೆಯ ಗೇಟ್‌ಅನ್ನು ಏಕಾಏಕಿ ಮುಚ್ಚಿದ್ದರಿಂದ ಗದ್ದಲ ಉಂಟಾಗಿತ್ತು. ಬಳಿಕ ನ್ಯಾಯಾಲಯದ ಆದೇಶದಂತೆ ಶಾಲೆ ತೆರೆಯಲಾಗಿತ್ತು. ಮುಂದೆ ಓದಿ.

ಒಪ್ಪಂದದಲ್ಲಿ ತೀರ್ಮಾನ

ಒಪ್ಪಂದದಲ್ಲಿ ತೀರ್ಮಾನ

2018ರ ಆಗಸ್ಟ್ 3ರಂದು ಎರಡೂ ಕಡೆಯವರು ಒಪ್ಪಂದವೊಂದನ್ನು ಮಾಡಿಕೊಳ್ಳುವ ಮೂಲಕ ಬಾಡಿಗೆ ವಿವಾದವನ್ನು ಇತ್ಯರ್ಥಪಡಿಸಿಕೊಂಡಿದ್ದವು. ಈ ವರ್ಷದ ಏಪ್ರಿಲ್ 3ರಂದು ಜಾಗವನ್ನು ತೆರವುಗೊಳಿಸುವುದಾಗಿ ಶ್ರೀ ರಾಘವೇಂದ್ರ ಎಜುಕೇಷನ್ ಅಸೋಸಿಯೇಷನ್ ಒಪ್ಪಿಕೊಂಡಿತ್ತು.

ಕೊರೊನಾ ಕಾರಣ ನೀಡಿದ ಲತಾ

ಕೊರೊನಾ ಕಾರಣ ನೀಡಿದ ಲತಾ

ಬಳಿಕ ಸಂಸ್ಥೆಯ ಕಾರ್ಯದರ್ಶಿ ಲತಾ ರಜನಿಕಾಂತ್ ಅವರು ಹೈಕೋರ್ಟ್‌ಗೆ ಹೆಚ್ಚುವರಿ ಅರ್ಜಿ ಸಲ್ಲಿಸಿ, ಕೊರೊನಾ ವೈರಸ್ ಸೋಂಕು ಹರಡಿದ ಕಾರಣದಿಂದ ಭರವಸೆ ನೀಡಿದಂತೆ ಜಾಗವನ್ನು ತೆರವುಗೊಳಿಸಲು ಇನ್ನೂ ಒಂದು ವರ್ಷ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.

ರಜನಿಕಾಂತ್ ಪಕ್ಷದ ಚಿಹ್ನೆ, ಹೆಸರು ಇದೇ ಇರಬಹುದೇ?ರಜನಿಕಾಂತ್ ಪಕ್ಷದ ಚಿಹ್ನೆ, ಹೆಸರು ಇದೇ ಇರಬಹುದೇ?

ವಿನಾಯಿತಿ ವಿಸ್ತರಣೆಗೆ ಮನವಿ

ವಿನಾಯಿತಿ ವಿಸ್ತರಣೆಗೆ ಮನವಿ

ಸ್ಥಳವನ್ನು ತೆರವುಗೊಳಿಸಲು ಗುತ್ತಿಗೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಡಿಟಿಎಸ್‌ನಿಂದ ಮಾಸಿಕ ಬಾಡಿಗೆಯನ್ನು ನಿಗದಿಗೊಳಿಸಲಾಗಿದೆ ಎಂದು ಇದಕ್ಕೂ ಮುನ್ನ ನ್ಯಾಯಮೂರ್ತಿ ಎನ್. ಸತೀಶ್ ಕುಮಾರ್ ಅವರು ಹೇಳಿದ್ದರು.

ಈ ಮುಂಚೆ ಮಾಮೂಲಿಯಂತೆ ನೀಡಲಾಗುತ್ತಿದ್ದ ಮೊತ್ತವನ್ನು ಸೇರಿಸಿ 8 ಲಕ್ಷ ರೂ ಪಾವತಿಸಲಾಗುವುದು ಮತ್ತು ಈ ಶೈಕ್ಷಣಿಕ ವರ್ಷದವರೆಗೂ ಬಾಕಿ ಹಣ ಪಾವತಿಯ ವಿನಾಯಿತಿಯನ್ನು ವಿಸ್ತರಿಸಬೇಕು ಎಂದು ಲತಾ ರಜನಿಕಾಂತ್ ಪರ ವಕೀಲರು ವಾದಿಸಿದ್ದರು.

ಏಪ್ರಿಲ್‌ವರೆಗೂ ಗಡುವು

ಏಪ್ರಿಲ್‌ವರೆಗೂ ಗಡುವು

ಹೀಗಾಗಿ ಶ್ರೀ ರಾಘವೇಂದ್ರ ಎಜುಕೇಷನಲ್ ಅಸೋಸಿಯೇಷನ್‌ಗೆ ಆ ಸ್ಥಳದಲ್ಲಿನ ಆಶ್ರಮ್ ಶಾಲೆಯಲ್ಲಿನ ಕಟ್ಟಡವನ್ನು ತೆರವುಗೊಳಿಸಲು ಏಪ್ರಿಲ್ 30ರವರೆಗೆ ಅವಕಾಶ ನೀಡಿ ನ್ಯಾಯಮೂರ್ತಿ ಸತೀಶ್ ಕುಮಾರ್ ಆದೇಶ ಹೊರಡಿಸಿದರು. ಜತೆಗೆ 2021ರ ಏಪ್ರಿಲ್ ಅಂತ್ಯದ ಒಳಗೆ ಆಶ್ರಮ್ ಶಾಲೆಯನ್ನು ತೆರವುಗೊಳಿಸುವಲ್ಲಿ ವಿಫಲವಾದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಕತಾ ರಜನಿಕಾಂತ್ ಅವರಿಗೆ ಎಚ್ಚರಿಕೆ ನೀಡಿದರು.

ಇದರ ಜತೆಗೆ ಲತಾ ಅವರ ಶಿಕ್ಷಣ ಸಂಸ್ಥೆಯು 2021-22ರ ಸಾಲಿನ ವಿದ್ಯಾರ್ಥಿಗಳ ಪ್ರವೇಶವನ್ನು ನಡೆಸದಂತೆಯೂ ನಿಷೇಧ ಹೇರಲಾಗಿದೆ.

English summary
Madras High Court warned Rajinikanth's wife Latha could face Contempt Of Court if she fails to vacate the premises occupied by her educational association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X