ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್‌ ಮಹಿಳಾ ಉದ್ಯೋಗಿ ವಜಾ ಆದೇಶಕ್ಕೆ ಹೈ ತಡೆ

By Kiran B Hegde
|
Google Oneindia Kannada News

ಚೆನ್ನೈ, ಜ. 13: ಸುಮಾರು 25 ಸಾವಿರಕ್ಕೂ ಅಧಿಕ ಇಂಜಿನಿಯರ್‌ಗಳನ್ನು ವಜಾಗೊಳಿಸಲು ನಿರ್ಧರಿಸಿರುವ ಟಿಸಿಎಸ್ ತನ್ನ ಮಹಿಳಾ ಉದ್ಯೋಗಿಯೋರ್ವರಿಗೆ ನೀಡಿದ್ದ ವಜಾ ಆದೇಶಕ್ಕೆ ಮದ್ರಾಸ್ ಹೈ ಕೋರ್ಟ್ ಮಂಗಳವಾರ ತಡೆಯೊಡ್ಡಿ ಆದೇಶ ನೀಡಿದೆ.

ಪ್ರಸ್ತುತ ಗರ್ಭಿಣಿಯಾಗಿರುವ ರೇಖಾ ಎಂಬುವರನ್ನು ವಜಾಗೊಳಿಸಿ ಕಂಪನಿ ಆದೇಶ ನೀಡಿತ್ತು. ಜನವರಿ 21ರಂದು ಅವರಿಗೆ ಬಿಡುಗಡೆ ಪತ್ರ ನೀಡಲಾಗುವುದು ಎಂದು ಟಿಸಿಎಸ್ ತಿಳಿಸಿತ್ತು. ಇದನ್ನು ವಿರೋಧಿಸಿ ಹೈ ಕೋರ್ಟ್ ಮೆಟ್ಟಿಲೇರಿದ್ದ ರೇಖಾ ಕಂಪನಿಯ ಕ್ರಮ 1947ರ ಕೈಗಾರಿಕಾ ವಿವಾದಗಳ ಕಾಯಿದೆಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. [ಟಿಸಿಎಸ್ ರಹಸ್ಯ ಉದ್ಯೋಗಿಯಿಂದ ಆಡಿಯೋ ಲೀಕ್]

ಅವರ ವಾದ ಆಲಿಸಿದ ನ್ಯಾಯಮೂರ್ತಿ ಎಂ. ದುರೈಸ್ವಾಮಿ ಕಂಪನಿಯ ಕ್ರಮಕ್ಕೆ ನಾಲ್ಕು ವಾರಗಳ ತಾತ್ಕಾಲಿಕ ತಡೆಯೊಡ್ಡಿ ಆದೇಶ ನೀಡಿದ್ದಾರೆ.

court

ರೇಖಾ ಅವರು ಟಿಸಿಎಸ್ ಕಂಪನಿಗೆ ಚೆನ್ನೈನಲ್ಲಿ 2011ರ ಮಾರ್ಚ್ ತಿಂಗಳಲ್ಲಿ ಐಟಿ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು. ಕೈಗಾರಿಕಾ ವಿವಾದಗಳ ಕಾಯಿದೆ 1947ರ ಪ್ರಕಾರ ತಾವೊಬ್ಬ 'ಕೆಲಸಗಾರ' ಎಂದು ಅವರು ತಿಳಿಸಿದ್ದಾರೆ. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]

ತಮ್ಮ ಕರ್ತವ್ಯ ನಿರ್ವಹಣೆಗೆ ರೇಖಾ ಅವರು ಕಂಪನಿಯಿಂದ 'ಸಿ' ಗ್ರೇಡ್ ಪಡೆದಿದ್ದರು. ಇದರ ಪ್ರಕಾರ ರೇಖಾ ಅವರು ಕಂಪನಿಯ ಎಲ್ಲ ರೀತಿಯ ನಿರೀಕ್ಷೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದಾಗಿತ್ತು.

ಆದರೆ, ಸುಮಾರು 55,000 ನೂತನ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾಗಿರುವ ಟಿಸಿಎಸ್ ಈಗಿರುವ ಸಹಾಯಕ ಸಲಹೆಗಾರ ಹಾಗೂ ಅದಕ್ಕಿಂತ ಮೇಲಿನ ಸ್ಥಾನದಲ್ಲಿರುವ 25,000 ಸಿಬ್ಬಂದಿಯನ್ನು ವಜಾಗೊಳಿಸಲು ತೀರ್ಮಾನಿಸಿದೆ. [ಪ್ರತಿಭಾನ್ವಿತರ ಸೆಳೆಯಲು ವೇತನ ಹೆಚ್ಚಿಸಿದ ಟಿಸಿಎಸ್]

ಆದರೆ, ಕಾನೂನು ಪ್ರಕಾರ ಟಿಸಿಎಸ್ ಕಂಪನಿಯು ಯಾವುದೇ ನೋಟಿಸ್ ನೀಡಿಲ್ಲ. ಅಲ್ಲದೆ, ವಜಾಗೊಳಿಸುವ ನೌಕರನಿಗೆ ವರ್ಷಕ್ಕೆ 15 ದಿನಗಳ ಸಂಬಳದಂತೆ ಪರಿಹಾರ ಧನವನ್ನೂ ನೀಡಿಲ್ಲ ಎಂದು ರೇಖಾ ಅವರು ವಾದಿಸಿದ್ದಾರೆ.

English summary
The Madras high court on Tuesday restrained TCS from retrenching an employee who has been issued termination by the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X