• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸಭೆಯಲ್ಲಿ ಗುಟ್ಕಾ ಗಲಾಟೆ: ಸ್ಟಾಲಿನ್ ಹಾಗೂ ಡಿಎಂಕೆ ಶಾಸಕರಿಗೆ ರಿಲೀಫ್

|
Google Oneindia Kannada News

ಚೆನ್ನೈ, ಫೆಬ್ರವರಿ 10: ತಮಿಳುನಾಡು ವಿಧಾನಸಭೆಯೊಳಗೆ 2017ರಲ್ಲಿ ಗುಟ್ಕಾ ಪ್ಯಾಕೆಟ್‌ಗಳನ್ನು ತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ಪಕ್ಷದ ಇತರೆ ಶಾಸಕರ ವಿರುದ್ಧದ ಹಕ್ಕುಚ್ಯುತಿ ನಿರ್ಣಯದ ಹೊಸ ನೋಟಿಸ್‌ಗಳನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ತಮಿಳುನಾಡು ವಿಧಾನಸಭೆಯ ಹಕ್ಕುಚ್ಯುತಿ ನಿರ್ಣಯ ಸಮಿತಿಯು 2020ರ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ ಹೊಸ ನೋಟಿಸ್‌ಗಳನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಬುಧವಾರ ರದ್ದುಗೊಳಿಸಿದರು.

ಅಪ್ಪ ಮಾಡಿದ್ದಂತೆಯೇ 100 ದಿನದಲ್ಲಿ ಎಲ್ಲ ಭರವಸೆ ಈಡೇರಿಸುತ್ತೇನೆ: ಸ್ಟಾಲಿನ್ಅಪ್ಪ ಮಾಡಿದ್ದಂತೆಯೇ 100 ದಿನದಲ್ಲಿ ಎಲ್ಲ ಭರವಸೆ ಈಡೇರಿಸುತ್ತೇನೆ: ಸ್ಟಾಲಿನ್

2013ರಲ್ಲಿ ತಮಿಳುನಾಡು ಸರ್ಕಾರವು ಗುಟ್ಕಾ ಉತ್ಪಾದನೆ, ಸಂಗ್ರಹ, ಸಾಗಾಣಿಕೆ ಮತ್ತು ಮಾರಾಟದ ಮೇಲೆ ನಿಷೇಧ ವಿಧಿಸಿ ಆದೇಶಿಸಿತ್ತು. 2017ರ ಆಗಸ್ಟ್ 28ರಂದು ವಿರೋಧಪಕ್ಷದ ನಾಯಕ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹಾಗೂ ಪಕ್ಷದ ಇತರೆ 20 ಶಾಸಕರು ವಿಧಾನಸಭೆಯೊಳಗೆ ಗುಟ್ಕಾ ಪ್ಯಾಕೇಟ್‌ಗಳನ್ನು ತಂದಿದ್ದರು. ಅದನ್ನು ಸರ್ಕಾರದ ಮುಂದೆ ಪ್ರದರ್ಶಿಸಿ, ನಿಷೇಧಿತ ವಸ್ತುಗಳು ಎಷ್ಟು ಸುಲಭವಾಗಿ ಕೈಗೆ ಎಟುಕುತ್ತಿವೆ ಎಂದು ಸರ್ಕಾರವನ್ನು ಟೀಕಿಸಿದ್ದರು.

ನಿಷೇಧಿತ ವಸ್ತುಗಳನ್ನು ಪವಿತ್ರ ಸದನದೊಳಗೆ ತಂದು ಪ್ರದರ್ಶಿಸಿದ್ದು ಅನುಚಿತ ವರ್ತನೆ ಎಂದು ಸ್ಟಾಲಿನ್ ಹಾಗೂ ಇತರೆ ಶಾಸಕರ ಮೇಲೆ ವಿಧಾನಸಭೆ ಹಕ್ಕುಚ್ಯುತಿ ನಿರ್ಣಯದ ನೋಟಿಸ್ ಜಾರಿ ಮಾಡಿತ್ತು. ಇದರ ವಿರುದ್ಧ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ಇಬ್ಬರು ಶಾಸಕರಾದ ಜೆ ಅಣ್ಬಳಗನ್ ಮತ್ತು ಕೆಪಿಪಿ ಸಾಮಿ ಅವರು ಈ ಅವಧಿಯಲ್ಲಿ ನಿಧನರಾಗಿದ್ದಾರೆ. 2018ರಲ್ಲಿ ಹೈಕೋರ್ಟ್ ಈ ಹಕ್ಕುಚ್ಯುತಿ ನಿರ್ಣಯಕ್ಕೆ ತಡೆ ನೀಡಿತ್ತು.

English summary
Madras High Court on Wednesday quashed fresh privilege notices issued by Tamil Nadu assembly against MK Stalin and other DMK MLAs in 2017 Gutka row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X