ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೋವಿಶೀಲ್ಡ್‌ ಲಸಿಕೆ ಅಸುರಕ್ಷಿತ' ಅರ್ಜಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್‌ ನೋಟೀಸ್

|
Google Oneindia Kannada News

ಚೆನ್ನೈ, ಫೆಬ್ರವರಿ 19: ಭಾರತದ ಸೆರಂ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯು ಅಸುರಕ್ಷಿತ ಎಂದು ಘೋಷಿಸುವಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

ಚೆನ್ನೈನ 41 ವರ್ಷದ ವ್ಯಕ್ತಿಯೊಬ್ಬರು ಈ ಅರ್ಜಿ ಸಲ್ಲಿಸಿದ್ದರು. ಕೋವಿಶೀಲ್ಡ್‌ ಲಸಿಕೆಯ ಮೂರನೇ ಹಂತದ ಪರೀಕ್ಷೆಗೆ ಸ್ವಯಂಸೇವಕರಾಗಿ ಒಳಗಾಗಿದ್ದ ಅವರಿಗೆ ಅಕ್ಟೋಬರ್ 1ರಂದು ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್ ನೀಡಲಾಗಿತ್ತು. ಲಸಿಕೆ ಪಡೆದ ನಂತರ ತಮಗೆ ಅಡ್ಡ ಪರಿಣಾಮಗಳಾಗಿವೆ ಎಂದು ವ್ಯಕ್ತಿಯು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

 ಕೊರೊನಾ ಸೋಂಕಿನ ಎಚ್ಚರಿಕೆ ಕೊಡುತ್ತಿವೆ ಈ ಏಳು ಹೊಸ ಲಕ್ಷಣಗಳು... ಕೊರೊನಾ ಸೋಂಕಿನ ಎಚ್ಚರಿಕೆ ಕೊಡುತ್ತಿವೆ ಈ ಏಳು ಹೊಸ ಲಕ್ಷಣಗಳು...

ಅರ್ಜಿಯಲ್ಲಿ, ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಲ್ಲ ಎಂದು ಘೋಷಿಸಲು ಕೋರಿಕೊಂಡಿದ್ದು, ಲಸಿಕೆ ತಯಾರಿಕಾ ಸಂಸ್ಥೆಯಿಂದ ತಮಗೆ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದೂ ಆಗ್ರಹಿಸಿದ್ದರು.

Madras High Court Notice To Centre Over Plea Stating Covishield Is Unsafe

ಈ ಆರೋಪವನ್ನು ತಳ್ಳಿಹಾಕಿದ್ದ ಸೆರಂ ಇನ್‌ಸ್ಟಿಟ್ಯೂಟ್, ಈ ಆರೋಪ ನಿಜವಾದರೆ ನೂರು ಕೋಟಿ ರೂಪಾಯಿ ಬೇಕಾದರೂ ನೀಡುತ್ತೇವೆ ಎಂದು ಹೇಳಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

ಪುಣೆಯಲ್ಲಿನ ಬೃಹತ್ ಲಸಿಕೆ ತಯಾರಿಕಾ ಸಂಸ್ಥೆ ಸೆರಂ ಇನ್‌ಸ್ಟಿಟ್ಯೂಟ್ ಆಕ್ಸ್‌ಫರ್ಡ್ ವಿವಿ ಹಾಗೂ ಆಸ್ಟ್ರಾಜೆನೆಕಾ ಜೊತೆಗೂಡಿ ಕೋವಿಶೀಲ್ಡ್‌ ಲಸಿಕೆ ಅಭಿವೃದ್ಧಿಪಡಿಸಿದೆ. ಭಾರತ ಸರ್ಕಾರ ತುರ್ತು ಬಳಕೆಗೆ ಅನುಮತಿ ನೀಡಿರುವ ಎರಡು ಲಸಿಕೆಗಳಲ್ಲಿ ಕೋವಿಶೀಲ್ಡ್‌ ಕೂಡ ಒಂದಾಗಿದೆ. ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಲಸಿಕೆಗಳನ್ನು ನೀಡಲಾಗುತ್ತಿದೆ. ಇದುವರೆಗೂ ಸುಮಾರು ಒಂದು ಕೋಟಿ ಜನರು ಲಸಿಕೆ ಪಡೆದುಕೊಂಡಿದ್ದಾರೆ.

English summary
Madras High Court has issued a notice to central government over a petition to declare India's coronavirus vaccine "Covishield" as unsafe,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X